UN NETWORKS
ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತ, ಕುಡಿಯುವ ನೀರಿನ ಸಮಸ್ಯೆ ಹಲವು ದಶಕಗಳ ಸಮಸ್ಯೆಯಾಗಿದೆ. ಹಲವು ಇಲ್ಲಗಳ ಆಗರವಾಗಿದೆ. ಅಗ್ನಿಶಾಮಕ ದಳ, ಸುಸಜ್ಜಿತ ಕ್ರೀಡಾಂಗಣ, 100 ಬೆಡ್ ರೂಂನ ಸರಕಾರಿ ಆಸ್ಪತ್ರೆ, ಸರಕಾರಿ ಪಾಲಿ ಟೆಕ್ನಿಕ್ ಗಳನ್ನು ಪ್ರಭಾವಿ ಸಚಿವರಾಗಿದ್ದರು ಕ್ಷೇತ್ರಕ್ಕೆ ಸಂಪೂರ್ಣ ವಿಫಲವಾಗಿದ್ದಾರೆ.
ಕ್ಷೇತ್ರದ ಜನಕ್ಕೆ ಚೂರಿ ಭಾಗ್ಯ ನೀಡಿರುವುದೇ ಖಾದರ್ ರವರ ಸಾಧನೆ ಎಂದು ಬಿ.ಜೆ.ಪಿ. ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಆರೋಪಿಸಿದರು.ಅವರು ಅಸೈಗೋಳಿಯಲ್ಲಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಹೇಳಿದರು.
ಮಂಗಳೂರು ಕ್ಷೇತ್ರ ಸಾಮರಸ್ಯದ ಬೀಡಾಗಬೇಕು, ಅಭಿವೃದ್ಧಿಯ ಕೇಂದ್ರವಾಗಬೇಕು, ಅಪರಾಧ ಮುಕ್ತವಾಗಬೇಕು. ಇದಕ್ಕೆಲ್ಲಾ ಬಿ.ಜೆ.ಪಿ. ಯೇ ಸೂಕ್ತ ಆಯ್ಕೆ ಎಂದು ಸಾರ್ವಜನಿಕರಲ್ಲಿ ಮತ ಯಾಚಿಸಿದರು.
ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು, ಮಾಜಿ ಶಾಸಕರಾದ ಕೆ. ಜಯ ರಾಮ್ ಶೆಟ್ಟಿ, ಕ್ಷೇತ್ರ ಚುನಾವಣಾ ಸಂಚಾಲಕ ಸತೀಶ್ ಕುಂಪಲ, ಸಹ ಸಂಚಾಲಕ ಚಂದ್ರಹಾಸ್ ಉಳ್ಳಾಲ, ಮುಖಂಡರಾದ ಚಂದ್ರಶೇಖರ ಉಚ್ಚಿಲ, ರವೀಂದ್ರ ಶೆಟ್ಟಿ, ಚಂದ್ರಹಾಸ್ ಅಡ್ಯಂತಾಯ, ಜಿ.ಪಂ. ಸದಸ್ಯೆ ಧನಲಕ್ಷೀ ಗಟ್ಟಿ, ಕ್ಷೇತ್ರ ಪ್ರ.ಕಾ.ಮೋಹನ್ ರಾಜ್, ಮನೋಜ್ ಆಚಾರ್ಯ ಅಲ್ಪಸಂಖ್ಯಾತ ಜಿಲ್ಲಾ ಪ್ರ.ಕಾ. ಮುನೀರ್ ಹಾಜಿ, ಕ್ಷೇತ್ರ ಅಧ್ಯಕ್ಷ ರಾದ ಅಶ್ರಫ್ ಹರೇಕಳ ಉಪಸ್ಥಿತರಿದ್ದರು.


