Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಕೋಕೊ ಕೋಲಾ ಕುಡಿಯುವ ಖಾದರ್ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಸುವಲ್ಲಿ ವಿಫಲ: ಸಂಸದ ನಳಿನ್ ಕಟೀಲ್

UllalaVaniBy UllalaVaniMay 2, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಆರಾಮವಾಗಿ ಕೋಕೊ ಕೋಲಾ ಕುಡಿಯುವ ಸಚಿವ ಖಾದರ್ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದ ನಳಿನ್ ಕಟೀಲ್ ಹೇಳಿದ್ದಾರೆ. ತೊಕ್ಕೊಟ್ಟು ವಿನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಚುನಾವಣೆಯ ಕಾವು ರಂಗೇರುತ್ತಿದ್ದು, ರಾಜಕೀಯ ಜಿದ್ದಾಜಿದ್ದಿಯ ಮೇಲಾಟಗಳು ನಡೆಯುತ್ತಿದೆ. ಮಂಗಳೂರು ಕ್ಷೇತ್ರದಲ್ಲಿ ಜನರ ಕೂಗು ಶಾಸಕರ ವಿರುದ್ದವಾಗಿದೆ. ಸಮೀಕ್ಷೆಯಲ್ಲೂ ಬಿಜೆಪಿ ಪರವಾಗಿ ವರದಿಗಳು ಬಂದಿವೆ. ಈ ಭಾಗದ ಶಾಸಕರು ಆಡಳಿತ ನಡೆಸಿದ ಆರಂಭದಿಂದಲೂ ಕ್ಷೇತ್ರ ವ್ಯಾಪ್ತಿಯಲ್ಲಿ ಮತೀಯವಾದಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತಾ ಬಂದಿದ್ದಾರೆ. ಇದು ಜನರ ವಿರೋಧಕ್ಕೆ ಕಾರಣವಾಗಿದೆ.

ದೊರೆಯುವ ಸಾಧನಗಳನ್ನು ಉಪಯೋಗಿಸಲು ವಿಫಲರಾಗಿರುವ ಸಚಿವರಾದ ಖಾದರ್, ಶಾಶ್ವತ ಯಾವುದೇ ಪ್ರಾಜೆಕ್ಟ್ ಗಳ ನಿರ್ಮಾಣಮಾಡಿಲ್ಲ. ರಸ್ತೆ,ಯೇ ಅಭಿವೃದ್ದಿ ಎಂದು ಹೇಳಿಕೊಂಡು ಬರುತ್ತಿರುವ ಅವರು ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಬಹುದೊಡ್ಡ ನೀರಿನ ಸಮಸ್ಯೆಯಿದೆ. ಆದರು ತಾನು ಆರಾಮವಾಗಿ ಕೋಕಾ ಕೋಲಾ ಕುಡಿದರೆ ಹೊರತು, ಜನರಿಗೆ ಕುಡಿಯುವ ನೀರನ್ನು ಪೂರೈಸಿಲ್ಲ. ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ಸಿಗರು ಉಳ್ಳಾಲದಿಂದ ಮುಲ್ಕಿಯವರೆಗೆ ಸಾಮರಸ್ಯದ ನಡಿಗೆ ನಡೆಸಿದರು.

ಆದರೆ ಅವರು ಆಡಳಿತಕ್ಕೆ ಬಂದ ನಂತರ ಉಳ್ಳಾಲದಲ್ಲಿ ಎಂಟು ಚೂರಿ ಇರಿತಗಳು, ರಾಜು ಕೋಟ್ಯಾನ್ ಮತ್ತು ಜುಬೈರ್ ಎಂಬ ಇಬ್ಬರ ಹತ್ಯೆ ನಡೆದಿದೆ. ಆದರೂ ಮತೀಯ ವಾದಕ್ಕೆ ಪ್ರೋತ್ಸಾಹಿಸಿದ ಶಾಸಕರು ಸಾಮರಸ್ಯ ನಡಿಗೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಗಲಭೆಗಳನ್ನು ನಿಯಂತ್ರಿಸಲು ವಿಫಲರಾಗಿರುವ ಅವರು ಗೋಹಂತಕರಿಗೆ ಹಿಂದಿನ ಬಾಗಿಲಿನಿಂದ ಬೆಂಬಲಿಸುವ ಜಾಯಮಾನ ಹೊಂದಿದ್ದಾರೆ. ಕ್ಷೇತ್ರದಲ್ಲಿ ಡ್ರಗ್ ಮಾಫಿಯಾ ಮತ್ತು ಸ್ಯಾಂಡ್ ಮಾಫಿಯಾ ಅಟ್ಟಹಾಸ ಮಿತಿಮೀರಿದೆ. ಜನ ಶಾಸಕರ ಮೇಲಿನ ವಿಶ್ವಾಸ ಕಳಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜಿ.ಪಂ ಸದಸ್ಯನಾಗಿದ್ದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಜನರ ಮೆಚ್ಚುಗೆಗೆ ಪಾತ್ರರಾದ ಸಂತೋಷ್ ರೈ ಬೋಳಿಯಾರ್ ಅವರನ್ನು ಈ ಬಾರಿ ಜನತೆ ಬೆಂಬಲಿಸಲಿದ್ದಾರೆ.

ತೊಕ್ಕೊಟ್ಟು ಮೆಲ್ಕಾರ್ ರಸ್ತೆಯ ಡಿಪಿಆರ್ ಆಗಿದ್ದರೂ ರಾಜ್ಯ ಸರಕಾರ ಎಲ್ಲಿ ಕೇಂದ್ರ ಸರಕಾರದ ಹೆಸರು ಬರುತ್ತದೋ? ಅನ್ನುವ ಕಾರಣಕ್ಕೆ ರಸ್ತೆ ಕಾಮಗಾರಿಯನ್ನು ವಿಳಂಬ ಮಾಡುತ್ತಿದೆ. ಶಾಶ್ವತವಾದ ಕಡಲ್ಕೊರೆತ ಕಾಮಗಾರಿಯನ್ನು ನಡೆಸುವಲ್ಲಿ ವಿಫಲರಾದ ಖಾದರ್, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲಿನ ಕೊರೆತಕ್ಕೆ ಅವರೇ ಕಾರಣವಾಗಿದ್ದಾರೆ. ಇನ್ಫೋಸಿಸ್ ನಲ್ಲೂ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವಲ್ಲಿಯೂ ವಿಫಲರಾಗಿದ್ದಾರೆ. ಕೇಂದ್ರ ಸರಕಾರ ಮಂಗಳೂರಿನಲ್ಲಿ ಐಟಿ ಪಾರ್ಕ್ ಮಾಡಲು ಉದ್ದೇಶಿಸಿದ್ದು, ರಾಜ್ಯದಲ್ಲೂ ಬಿಜೆಪಿ ಆಡಳಿತ ಬಂದಲ್ಲಿ ಅದು ಶೀಘ್ರವೇ ಆರಂಭವಾಗಿ ಯುವಜನರಿಗೆ ಉದ್ಯೋಗ ಅವಕಾಶಗಳು ಹೆಚ್ಚಾಗಲಿದೆ ಎಂದರು.

ಈ ಸಂದರ್ಭ ಮೀನುಗಾರಿಕಾ ನಿಗಮದ ಮಾಜಿ ಸದಸ್ಯ ನಿತಿನ್ ಕುಮಾರ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಮಹಿಳಾ ಮುಖಂಡೆ ನಮಿತಾ ಶ್ಯಾಂ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ಮನೋಜ್ ಆಚಾರ್ಯ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಶ್ರಫ್ ಹರೇಕಳ, ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

ಈ ಸಂದರ್ಭ ಅನಿಲ್ ದಾಸ್ ನೇತೃತ್ವದ 15 ಜನ ಯುವಕರ ತಂಡ ಸಂಸದರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 18ರಿಂದ ನಾಲ್ಕು ದಿನಗಳ ಯೋಗ ಶಿಬಿರ

June 18, 2026

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

June 17, 2026

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ರಕ್ಷಕರು ಮನೆಯಲ್ಲಿ ಶಿಕ್ಷಕರಾಗಿರಬೇಕು- ಮೊಹಮ್ಮದ್ ಮನ್ಸೂರ್

By UllalaVaniJune 19, 20260

ಶಿಕ್ಷಣವು ಕೇವಲ ಶಾಲೆಯಲ್ಲಿ ಮಾತ್ರ ಕಲಿಯುವುದಲ್ಲ ಮಗು ಹುಟ್ಟಿನಲ್ಲಿಂದ ಸಾಯುವವರೆಗೆ ಮಗು ಕಲಿಯುತಿರಬೇಕು. ಮತ್ತು ಕಲಿಯುತ್ತಾ ಇರುತ್ತದೆ. ಮಗುವಿಗೆ ಎಳೆಯದರಲ್ಲೇ…

ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯದ ಹೊರಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನ ಖಾತ್ರಿ: ಸರ್ಕಾರದ ಆದೇಶ

June 19, 2026

ಎಂ.ಆರ್.ಜಿ. ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್, ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

June 19, 2026

ಮಣಿಪಾಲ: ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಢಿಕ್ಕಿ – ಪೋಷಕರ ವಿರುದ್ಧ ಕೇಸ್

June 18, 2026
1 2 3 … 1,975 Next
Automatic YouTube Gallery

ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!

ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!; ಪ್ರಿಯಕರನ ಜೊತೆ ಸಲುಗೆ; ಗೆಳತಿ ಸಂಸಾರದಲ್ಲಿ `ಹುಳಿ' ಹಿಂಡಿದ ಪ್ರಿಯತಮೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!
Now Playing
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ...
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!; ಪ್ರಿಯಕರನ ಜೊತೆ ಸಲುಗೆ; ಗೆಳತಿ ಸಂಸಾರದಲ್ಲಿ `ಹುಳಿ' ಹಿಂಡಿದ ಪ್ರಿಯತಮೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೋಮೇಶ್ವರ ಪುರಸಭೆ ಸಭಾಂಗಣದಲ್ಲಿ `ಕಡಲ ಕೊರೆತ ತಡೆ ಯೋಜನೆಗಳ ಪ್ರಾತ್ಯಕ್ಷಿಕೆ'
Now Playing
ಸೋಮೇಶ್ವರ ಪುರಸಭೆ ಸಭಾಂಗಣದಲ್ಲಿ `ಕಡಲ ಕೊರೆತ ತಡೆ ಯೋಜನೆಗಳ ಪ್ರಾತ್ಯಕ್ಷಿಕೆ'
ಸೋಮೇಶ್ವರದಲ್ಲಿ ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಕುರಿತು ಸಾರ್ವಜನಿಕ ...
ಸೋಮೇಶ್ವರದಲ್ಲಿ ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಕುರಿತು ಸಾರ್ವಜನಿಕ ಸಭೆ;ಕಡಲಕೊರೆತ ತಡೆ ಯೋಜನೆಗಳ ಪ್ರಾತ್ಯಕ್ಷಿಕೆ ನೀಡಿದ ಸಲಹೆಗಾರರು ಮತ್ತು ಇಂಜಿನಿಯರ್

ಹಲವು ಪ್ರಶ್ನೆಗಳು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಾರ್ವಜನಿಕರು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version