Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಅಲ್ಲಿ 14 ಚುನಾವಣೆಗಳಲ್ಲಿ ಹತ್ತು ಬಾರಿ ಗೆದ್ದಿದ್ದು ಮುಸ್ಲಿಮರೇ….! ಕಡಲತಡಿಯ ಆ ಕ್ಷೇತ್ರ ಯಾವುದು ಗೊತ್ತಾ?

UllalaVaniBy UllalaVaniApril 28, 2018No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬಂದ 35 ವರ್ಷಗಳಲ್ಲಿ ಆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದು ಕೇವಲ ಒಂದೇ ಒಂದು ಬಾರಿ. ಮೂರು ಬಾರಿಯಷ್ಟೇ ಬೇರೆ ಪಕ್ಷಗಳಿಗೆ ಗೆಲ್ಲುವ ಅವಕಾಶ ಸಿಕ್ಕಿದ್ದು ಬಿಟ್ಟರೆ ಬರೋಬ್ಬರಿ 50 ವರ್ಷಗಳ ಕಾಲ ಅಲ್ಲಿ ಆಳ್ವಿಕೆ ನಡೆಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಪ್ರತೀ ಬಾರಿ ಸೋಲನುಭವಿಸುವ ಬಿಜೆಪಿ ಈ ಬಾರಿ ಇಡೀ ಕ್ಷೇತ್ರವನ್ನು ಸಂಘಪರಿವಾರದ ಕೈಗೆ ಕೊಟ್ಟು ಗೆಲುವಿಗೆ ಹೊಸ ಫಾರ್ಮುಲಾ ರೂಪಿಸಿದೆ. ಈ ಮೂಲಕ ಈ ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಸೋಲಿಗೆ ಖೆಡ್ಡಾ ತೋಡಿದೆ.

ಖಾದರ್ ಸ್ವಕ್ಷೇತ್ರವಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಅವರ ಗೆಲುವಿಗೆ ಬ್ರೇಕ್ ಹಾಕಲು ಈವರೆಗೆ ಬಿಜೆಪಿಯಿಂದ ಸಾಧ್ಯವಾಗಿಲ್ಲ. ಈಕ್ಷೇತ್ರದಲ್ಲಿ ಯಾವ ಬಿಜೆಪಿ ಅಭ್ಯರ್ಥಿ ನಿಂತರೂ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಮಾತಿದೆ. ಹೀಗಾಗಿ ಈ ಬಾರಿ ಮೋದಿ ಅಲೆಯ ಮಧ್ಯೆಯೇ ಮಂಗಳೂರು ಕ್ಷೇತ್ರದಲ್ಲಿ ಕಮಲ ಅರಳಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಅದರಂತೆ ಈ ಬಾರಿ ಇಡೀ ಕ್ಷೇತ್ರವನ್ನು ಸಂಘಪರಿವಾರದ ಕೈಯ್ಯಲ್ಲಿಟ್ಟಿರುವ ಬಿಜೆಪಿ ಗೆಲುವಿನ ನಿರೀಕ್ಷೆಯಲ್ಲಿದೆ. 1994ರಲ್ಲಿ ಆಗಿನ ಉಳ್ಳಾಲ ಕ್ಷೇತ್ರವಾಗಿದ್ದ ಇಲ್ಲಿ ಬಿಜೆಪಿಯ ಜಯರಾಮ್ ಶೆಟ್ಟಿ ಗೆಲವು ಸಾಧಿಸಿದ್ದು ಬಿಟ್ಟರೆ ಈ ವರೆಗೆ ಒಬ್ಬನೇ ಒಬ್ಬ ಬಿಜೆಪಿ ಅಭ್ಯರ್ಥಿ ಗೆಲುವು ಸಾಧ್ಯವಾಗಿಲ್ಲ.

ಅದರಲ್ಲೂ ಯು.ಟಿ.ಖಾದರ್ ಮತ್ತು ಅವರ ತಂದೆ ಯು.ಟಿ.ಫರೀದ್ ಈ ಕ್ಷೇತ್ರದಲ್ಲಿ ಒಟ್ಟು ಏಳು ಬಾರಿ ಗೆಲುವಿನ ನಗೆ ಬೀರಿದ್ದು, ಅವರನ್ನು ಸೋಲಿಸಲು ಬಿಜೆಪಿ 1999ರಿಂದ ಈ ವರೆಗೆ ಮಾಡಿದ ಎಲ್ಲಾ ಯೋಜನೆಗಳು ವೈಫಲ್ಯ ಕಂಡಿದೆ. ಹೀಗಾಗಿಯೇ ಅಪ್ಪನ ಸಾವಿನ ನಂತರವೂ ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆಲುವು ಕಾಣುತ್ತಿದ್ದಾರೆ. ಆದರೆ ಈ ಬಾರಿ ಶತಾಯಗತಾಯ ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬ ಯೋಜನೆ ರೂಪಿಸಿರುವ ಬಿಜೆಪಿ ಹಿಂದುತ್ವದ ಓಟ್ ಬ್ಯಾಂಕ್ ಗಟ್ಟಿಗೊಳಿಸುವ ಕೆಲಸಕ್ಕೆ ಮುಂದಾಗಿದೆ. ಇದಕ್ಕಾಗಿ ಸ್ವತಃ ಆರ್​​ಎಸ್​ಎಸ್ ಈ ಕ್ಷೇತ್ರದಲ್ಲಿ ಫೀಲ್ಡಿಗೆ ಇಳಿದಿದ್ದು, ಪರಿವಾರ ಸಂಘಟನೆಗಳ ಮೂಲಕ ಹಿಂದೂ ಓಟ್ ಬ್ಯಾಂಕ್ ಭದ್ರವಾಗಿಸುವ ಕೆಲಸ ಕಳೆದ ಒಂದು ತಿಂಗಳಿನಿಂದ ಸದ್ದಿಲ್ಲದೇ ನಡೆಯುತ್ತಿದೆ.

ಅಲ್ಪಸಂಖ್ಯಾತರೇ ನಿರ್ಣಾಯಕರಾಗಿರುವ ಕ್ಷೇತ್ರ!
ಈ ಹಿಂದೆ ಉಳ್ಳಾಲ ವಿಧಾನ ಸಭಾ ಕ್ಷೇತ್ರವಾಗಿದ್ದ ಈಗಿನ ಮಂಗಳೂರು ಕ್ಷೇತ್ರದಲ್ಲಿ ಬರೋಬ್ಬರಿ 1,86,965 ಮತದಾರರಿದ್ದಾರೆ. ಇದರಲ್ಲಿ ಒಂದು ಲಕ್ಷದಷ್ಟು ಹಿಂದೂ ಮತದಾರರಿದ್ದರೆ ಉಳಿದ ಮತಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು. ಹೀಗಾಗಿಯೇ ಅಂದಾಜು 80 ಸಾವಿರಕ್ಕೂ ಮಿಕ್ಕಿದ ಅಲ್ಪಸಂಖ್ಯಾತ ಓಟ್​​ಗಳೇ ಇಲ್ಲಿ ನಿರ್ಣಾಯಕ ಅನಿಸಿಕೊಂಡಿದೆ. ಈ ನಡುವೆ ಹಿಂದೂ ಮತ ವಿಭಜನೆಯ ಪರಿಣಾಮ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತೀ ಬಾರಿ ಗೆಲುವಿನ ನಗೆ ಬೀರುತ್ತಿದೆ. ಹೀಗಾಗಿ ಒಂದು ಲಕ್ಷದಷ್ಟಿರುವ ಹಿಂದೂ ಮತಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸಂಘಪರಿವಾರ ಈ ಬಾರಿ ಅಖಾಡಕ್ಕೆ ಇಳಿದಿದೆ. ಕಳೆದ ಒಂದು ತಿಂಗಳಿನಿಂದಲೇ ಪರಿವಾರದ ಬೇರೆ ಬೇರೆ ಸಂಘಟನೆಗಳು ಕಾರ್ಯ ಆರಂಭಿಸಿದೆ. ಅದರಲ್ಲೂ ವಿಎಚ್​​ಪಿ, ಬಜರಂಗದಳ ಮತ್ತು ಸ್ವತಃ ಆರ್​ಎಸ್ಎಸ್ ಕಾರ್ಯಕರ್ತರೇ ಹಿಂದೂ ಓಟ್​​ಬ್ಯಾಂಕ್ ಭದ್ರವಾಗಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಬಿಜೆಪಿ ಇಲ್ಲಿ ಪ್ರಚಾರದಲ್ಲಿ ತೊಡಗಿಸಕೊಂಡಿದ್ದರೂ ಪ್ರತ್ಯೇಕವಾಗಿ ಸಂಘಪರಿವಾರ ಗೌಪ್ಯ ಬೈಠಕ್​​ಗಳ ಮೂಲಕ ಕೆಲಸ ಆರಂಭಿಸಿದೆ. ಇದೇ ಕಾರಣಕ್ಕೆ ಈ ಹಿಂದೆ ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕರಾಗಿದ್ದ, ಸದ್ಯ ವಿಎಚ್​ಪಿ ವಿಭಾಗ ಕಾರ್ಯದರ್ಶಿಯಾಗಿರುವ ಶರಣ್ ಪಂಪ್​ವೆಲ್​ಗೆ ಕ್ಷೇತ್ರದ ಉಸ್ತುವಾರಿಯನ್ನು ವಹಿಸಲಾಗಿದೆ.

14 ಚುನಾವಣೆಗಳಲ್ಲಿ ಹತ್ತು ಬಾರಿ ಗೆದ್ದಿದ್ದು ಮುಸ್ಲಿಮರೇ!
ಆಗಿನ ಉಳ್ಳಾಲವಾಗಿದ್ದ ಈಗಿನ ಮಂಗಳೂರು ವಿಧಾನ ಸಭಾಕ್ಷೇತ್ರಕ್ಕೆ 1957ರಿಂದ 2013ರವರೆಗೆ ಒಟ್ಟು ಒಟ್ಟು 14 ಬಾರಿ ಚುನಾವಣೆ ನಡೆದಿದೆ. ಅಚ್ಚರಿ ಎಂದರೆ ಈ 14 ಚುನಾವಣೆಗಳಲ್ಲಿ 10 ಬಾರಿ ಮುಸ್ಲಿಂ ಅಭ್ಯರ್ಥಿಗಳೇ ಆರಿಸಿ ಬಂದಿದ್ದಾರೆ. ಅದರಲ್ಲೂ ಈಗಿನ ಶಾಸಕರಾಗಿರುವ ಯು.ಟಿ.ಖಾದರ್ ಅವರ ತಂದೆ ಯು.ಟಿ.ಫರೀದ್ ಅವರೇ ನಾಲ್ಕು ಬಾರಿ ಆಯ್ಕೆಯಾಗಿದ್ದರೆ ಯು.ಟಿ.ಖಾದರ್ ಮೂರು ಬಾರಿ ಸತತ ಗೆಲುವು ಕಂಡಿದ್ದಾರೆ. ಇನ್ನುಳಿದಂತೆ ಬಿ.ಎಂ ಇದ್ದಿನಬ್ಬ 1967, 1985 ಮತ್ತು 198ಿ9ರಲ್ಲಿ ಇಲ್ಲಿ ಗೆಲವು ಕಾಣುವ ಮೂಲಕ ಮತ್ತೆ ಮತ್ತೆ ಈ ಕ್ಷೇತ್ರದಲ್ಲಿ ಮುಸ್ಲಿಂ ಓಟ್ ಬ್ಯಾಂಕ್ ಗಟ್ಟಿಯಾಗಿದೆ ಎನ್ನುವುದು ಸಾಬೀತಾಗಿದೆ.

ಎರಡು ಬಾರಿ ಗೆದ್ದಿದ್ದ ಸಿಪಿಎಂ, ಒಂದೇ ಬಾರಿ ಬಿಜೆಪಿ!
1957ರಿಂದಲೇ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಆಗಿನ ಕಾಲಕ್ಕೆ ಕಾಂಗ್ರೆಸ್​​ಗೆ ನೇರ ಎದುರಾಳಿಯಾಗಿ ಗುರುತಿಸಿಕೊಂಡಿದ್ದು ಸಿಪಿಎಂ ಪಕ್ಷ. 1957ರಿಂದ 1989ರವರೆಗೆ ಇಲ್ಲಿ ಕಾಂಗ್ರೆಸ್​ ಪಕ್ಷದ ವಿರುದ್ದ ಸಿಪಿಎಂ ತೊಡೆತಟ್ಟುವ ಮೂಲಕ ಎರಡು ಬಾರಿ ಕಾಂಗ್ರೆಸ್ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಿತ್ತು. 1962ರ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ ಕೃಷ್ಣ ಶೆಟ್ಟಿ ಎಂಬವರು 17725 ಮತಗಳನ್ನು ಪಡೆದುಕಾಂಗ್ರೆಸ್​ನ ಬಿ.ಎಂ.ಇದ್ದಿನಬ್ಬರನ್ನ 813 ಮತಗಳ ಅಂತರದಿಂದ ಸೋಲಿಸಿದ್ದರು. ಬಳಿಕ ಮತ್ತೆ 1983ರಲ್ಲಿ ಸಿಪಿಎಂ ಅಭ್ಯರ್ಥಿ
ಪಿ.ರಾಮಚಂದ್ರ ರಾವ್ ಕಾಂಗ್ರೆಸ್​ನ ಕೆ.ಎಸ್.ಮಹಮ್ಮದ್ ಮಸೂದ್ 2520 ಮತಗಳಿಂದ ಸೋಲಿಸಿ ಗೆಲುವು ಕಂಡಿದ್ದರು. ಆದರೆ ಎರಡು ಬಾರಿ ಗೆಲುವು ಕಂಡಿದ್ದ ಸಿಪಿಎಂ ಬಳಿಕ ಈ ಕ್ಷೇತ್ರದಲ್ಲಿ ಕ್ಷೀಣಿಸತೊಡಗಿದ ಪರಿಣಾಮ ಕಾಂಗ್ರೆಸ್​​ಗೆ ಎದುರಾಳಿಯಾಗಿ ಬಿಜೆಪಿ ಪಕ್ಷ ಎದ್ದು ನಿಂತಿತ್ತು. ಇದರ ಪರಿಣಾಮ 1994ರ ಚುನಾವಣೆಯಲ್ಲಿ ಬಿಜೆಪಿಯ ಕೆ.ಜಯರಾಮ ಶೆಟ್ಟಿ ಕಾಂಗ್ರೆಸ್​​ನ ಕೆ.ಎಸ್.ಮಹಮ್ಮದ್ ಮಸೂದ್ ರನ್ನ 18817 ಮತಗಳಿಗೆ ಸೋಲಿಸುವ ಮೂಲಕ ಬಿಜೆಪಿ ಮೊದಲ ಜಯ ದಾಖಲಿಸಿತ್ತು. ಆದರೆ 1994ರ ಗೆಲುವನ್ನು ಹೊರತುಪಡಿಸಿ ಬಿಜೆಪಿ ತನ್ನ ಇತಿಹಾಸದ 35 ವರ್ಷಗಳಲ್ಲಿ ಮತ್ತ ಈ ಕ್ಷೇತ್ರದಲ್ಲಿ ಗೆಲುವು ಕಾಣಲು ಸಾಧ್ಯವಾಗಲೇ ಇಲ್ಲ.

1957-2013ರವರೆಗಿನ ಕ್ಷೇತ್ರ ಪರಿಚಯ
1957ರಿಂದ 1972ರ ವಿಧಾನ ಸಭಾ ಚುನಾವಣೆಯವರೆಗೂ ಈ ಕ್ಷೇತ್ರವನ್ನು ಮಂಗಳೂರು-2( ಚೋಟಾ ಮಂಗಳೂರು) ಎಂದೇ ಕರೆಯಲಾಗುತ್ತಿತ್ತು. ಆದರೆ ಬಳಿಕ ಕ್ಷೇತ್ರ ಪುನರ್ವಿಂಗಡೆಯಿಂದಾಗಿ 1978ರಿಂದ 2007ರವರೆಗೆ ಈ ಕ್ಷೇತ್ರ ಉಳ್ಳಾಲ ವಿಧಾನಸಭಾ ಕ್ಷೇತ್ರ ಎನ್ನುವ ಹೆಸರಿನಿಂದ ಚಾಲ್ತಿಗೆ ಬಂದಿತ್ತು. ಈ ಮಧ್ಯೆ ಮತ್ತೆ ಕ್ಷೇತ್ರ ಪುನರ್ವಿಂಗಡನೆಯಾಗಿ 2008ರ ಬಳಿಕ ಮಂಗಳೂರು ವಿಧಾನ ಸಭಾ ಕ್ಷೇತ್ರ ಎನ್ನುವ ಹೆಸರು ಪಡೆಯಿತು. ಇನ್ನು 1957ರಿಂದ 2013ರವರೆಗೆ ಈ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಾಚಾರ ಹೀಗಿದೆ..

1957- ಮಂಗಳೂರು-2
ಗಜಾನನ ಪಂಡಿತ್( ಕಾಂಗ್ರೆಸ್)-ಗೆಲುವು- 20332
ಬಿ.ವಿ.ಕಕ್ಕಿಲಾಯ(ಸಿಪಿಐ)- ಸೋಲು-14526
ಅಂತರ-5806

1962- ಮಂಗಳೂರು 2
ಕೃಷ್ಣ ಶೆಟ್ಟಿ(ಸಿಪಿಐ)-ಗೆಲುವು-17725
ಬಿ.ಎಂ.ಇದ್ದಿನಬ್ಬ(ಕಾಂಗ್ರೆಸ್)-16912
ಅಂತರ-813

1967-ಮಂಗಳೂರು 2
ಬಿ.ಎಂ.ಇದ್ದಿನಬ್ಬ( ಕಾಂಗ್ರೆಸ್)-21365
ಎ.ಕೆ.ಶೆಟ್ಟಿ(ಸಿಪಿಎಂ)-14051
ಅಂತರ- 7314

1972-ಮಂಗಳೂರು 2
ಯು.ಟಿ.ಫರೀದ್(ಕಾಂಗ್ರೆಸ್)- 30048
ಎ.ಕೃಷ್ಣ ಶೆಟ್ಟಿ(ಸಿಪಿಎಂ)- 14383
ಅಂತರ- 15655

1978-ಉಳ್ಳಾಲ
ಯು.ಟಿ.ಫರೀದ್(ಕಾಂಗ್ರೆಸ್)-30174
ಪಿ.ರಾಮಚಂದ್ರ ರಾವ್(ಸಿಪಿಎಂ)- 12445
ಅಂತರ- 17729

1983-ಉಳ್ಳಾಲ
ಪಿ.ರಾಮಚಂದ್ರ ರಾವ್(ಸಿಪಿಎಂ)-16423
ಕೆ.ಎಸ್.ಮಹಮ್ಮದ್ ಮಸೂದ್(ಕಾಂಗ್ರೆಸ್)-13903
ಅಂತರ-2520

1985-ಉಳ್ಳಾಲ
ಬಿ.ಎಂ.ಇದ್ದಿನಬ್ಬ(ಕಾಂಗ್ರೆಸ್)- 26184
ಪಿ.ರಾಮಚಂದ್ರ ರಾವ್(ಸಿಪಿಎಂ)- 17157
ಅಂತರ- 9027

1989-ಉಳ್ಳಾಲ
ಬಿ.ಎಂ.ಇದ್ದಿನಬ್ಬ( ಕಾಂಗ್ರೆಸ್)- 25785
ಕೆ.ಆರ್.ಶ್ರೀಯಾನ್(ಸಿಪಿಎಂ)- 20371
ಅಂತರ- 5414

1994-ಉಳ್ಳಾಲ
ಕೆ.ಜಯರಾಮ ಶೆಟ್ಟಿ(ಬಿಜೆಪಿ)- 24412
ಕೆ.ಎಸ್.ಮಹಮ್ಮದ್ ಮಸೂದ್(ಕಾಂಗ್ರೆಸ್)- 18817
ಅಂತರ- 5595

1999-ಉಳ್ಳಾಲ
ಯು.ಟಿ.ಫರೀದ್(ಕಾಂಗ್ರೆಸ್)- 50134
ಕೆ.ಜಯರಾಮ ಶೆಟ್ಟಿ( ಬಿಜೆಪಿ)- 34881
ಅಂತರ- 15253

2004-ಉಳ್ಳಾಲ
ಯು.ಟಿ.ಫರೀದ್(ಕಾಂಗ್ರೆಸ್)-47839
ಚಂದ್ರಶೇಖರ್ ಉಚ್ಚಿಲ್(ಬಿಜೆಪಿ)- 40491
ಅಂತರ- 7348

2007-ಉಳ್ಳಾಲ
ಯು.ಟಿ.ಖಾದರ್(ಕಾಂಗ್ರೆಸ್)- 46,271
ಚಂದ್ರಶೇಖರ್ ಉಚ್ಚಿಲ್( 38,239)
ಅಂತರ- 8,032

2008-ಮಂಗಳೂರು ಕ್ಷೇತ್ರ
ಯು.ಟಿ.ಖಾದರ್(ಕಾಂಗ್ರೆಸ್)- 50718
ಕೆ.ಪದ್ಮನಾಭ ಕೊಟ್ಟಾರಿ( ಬಿಜೆಪಿ)- 43669
ಅಂತರ- 7049

2013-ಮಂಗಳೂರು ಕ್ಷೇತ್ರ
ಯು.ಟಿ.ಖಾದರ್(ಕಾಂಗ್ರೆಸ್)- 69450
ಚಂದ್ರಹಾಸ್ ಉಳ್ಳಾಲ್( ಬಿಜೆಪಿ)- 40339
ಅಂತರ- 29111

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

August 14, 2026

ಕಳೆದುಕೊಂಡ ಹಣ ವಾರಸುದಾರರಿಗೆ ಹಸ್ತಾಂತರ

August 13, 2026

ಕುಂಪಲ ಜಂಕ್ಷನ್‌ನಲ್ಲಿ ಮಾದಕ ವಸ್ತು ಸೇವನೆ ಆರೋಪ

August 13, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

By UllalaVaniAugust 14, 20260

ಉಳ್ಳಾಲ: ಮನಸ್ಸು ಶಾಂತವಾಗಿ ಮತ್ತು ಸ್ಥಿರವಾಗಿದ್ದಾಗ ಮಾತ್ರ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ. ಮಕ್ಕಳು ಓದಲು ಕುಳಿತುಕೊಳ್ಳುವ ಮುನ್ನ ಉಸಿರಾಟದ ವ್ಯಾಯಾಮಕ್ಕೆ…

ಮೂಡಾ ವ್ಯಾಪ್ತಿಯ ಕೊಟ್ಟಾರ ಆಸ್ತಿ ಖರೀದಿ ಪ್ರಕ್ರಿಯೆ: ಮೂಲ ದಾಖಲೆಗಳ ಕುರಿತು ಪ್ರಶ್ನೆಗಳ ಸರಮಾಲೆ

August 14, 2026

ಉಳ್ಳಾಲವಾಣಿ ಲೋಗೋ ಉಪಯೋಗಿಸಿ ಸಂಸ್ಥೆಯ ಹೆಸರಿನಲ್ಲಿ ಎಡಿಟ್‌ ಮಾಡಿದ ಫೋಟೋ ಶೇರ್ — ಕಾನೂನು ಕ್ರಮದ ಎಚ್ಚರಿಕೆ

August 14, 2026

ಬಂಟ್ವಾಳ: ಗಾಂಜಾ ಸಹಿತ ಮೂವರ ಬಂಧನ- 4.90 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ

August 14, 2026
1 2 3 … 2,059 Next
Automatic YouTube Gallery

5ನೇ ತರಗತಿ ವಿದ್ಯಾರ್ಥಿಯ ಸಮಯಪ್ರಜ್ಞೆ: ವಿದ್ಯುತ್ ಯಂತ್ರಕ್ಕೆ ಸಿಲುಕಿದ್ದ ಸಿಬ್ಬಂದಿಯ ಪ್ರಾಣಾಪಾಯ ತಪ್ಪಿಸಿದ ಬಾಲಕ

ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ನಿರ್ಧಾರದಿಂದ ತಾಲೂಕಿನಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾನ್ವಿತ್ ತನ್ನ ಸಮಯಪ್ರಜ್ಞೆಯಿಂದ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರ ಪ್ರಾಣಾಪಾಯವನ್ನು ತಪ್ಪಿಸಿದ್ದಾನೆ. ...
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಕೆಲಸ ನಡೆಯುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರ ಬೆರಳು ಆಕಸ್ಮಿಕವಾಗಿ ವಿದ್ಯುತ್ ಚಾಲಿತ ತುರಿಯುವ ಯಂತ್ರಕ್ಕೆ ಸಿಲುಕಿಕೊಂಡಿದೆ. ನೋವಿನಿಂದ ಸಿಬ್ಬಂದಿ ಕಿರುಚಿಕೊಂಡಿದ್ದು, ಆ ಶಬ್ದವನ್ನು ಕೇಳಿದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಾನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ, ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗಿದೆ. ಮಾನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಶ್ಲಾಘಿಸಿದ್ದಾರೆ.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋನಯ್ಯ ನಾಯಕ್ ಹಾಗೂ ಸಿಆರ್‌ಪಿ ಜ್ಯೋತಿ ಕೂಡ ಶಾಲೆಗೆ ಭೇಟಿ ನೀಡಿ ಬಾಲಕನ ಸಮಯೋಚಿತ ಕ್ರಮವನ್ನು ಪ್ರಶಂಸಿಸಿದ್ದಾರೆ. ಅಪಾಯದ ಕ್ಷಣದಲ್ಲಿ ಗಾಬರಿಗೊಳ್ಳದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ ಪುಟ್ಟ ಮಾನ್ವಿತ್‌ನ ಸಮಯಪ್ರಜ್ಞೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
5ನೇ ತರಗತಿ ವಿದ್ಯಾರ್ಥಿಯ ಸಮಯಪ್ರಜ್ಞೆ: ವಿದ್ಯುತ್ ಯಂತ್ರಕ್ಕೆ ಸಿಲುಕಿದ್ದ ಸಿಬ್ಬಂದಿಯ ಪ್ರಾಣಾಪಾಯ ತಪ್ಪಿಸಿದ ಬಾಲಕ
Now Playing
5ನೇ ತರಗತಿ ವಿದ್ಯಾರ್ಥಿಯ ಸಮಯಪ್ರಜ್ಞೆ: ವಿದ್ಯುತ್ ಯಂತ್ರಕ್ಕೆ ಸಿಲುಕಿದ್ದ ಸಿಬ್ಬಂದಿಯ ಪ್ರಾಣಾಪಾಯ ತಪ್ಪಿಸಿದ ಬಾಲಕ
ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ...
ಅಪಾಯದ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ 5ನೇ ತರಗತಿ ವಿದ್ಯಾರ್ಥಿಯೊಬ್ಬನ ಚುರುಕು ನಿರ್ಧಾರದಿಂದ ತಾಲೂಕಿನಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಾನ್ವಿತ್ ತನ್ನ ಸಮಯಪ್ರಜ್ಞೆಯಿಂದ ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯೊಬ್ಬರ ಪ್ರಾಣಾಪಾಯವನ್ನು ತಪ್ಪಿಸಿದ್ದಾನೆ. ...
ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ಕೆಲಸ ನಡೆಯುತ್ತಿದ್ದ ವೇಳೆ ಸಿಬ್ಬಂದಿಯೊಬ್ಬರ ಬೆರಳು ಆಕಸ್ಮಿಕವಾಗಿ ವಿದ್ಯುತ್ ಚಾಲಿತ ತುರಿಯುವ ಯಂತ್ರಕ್ಕೆ ಸಿಲುಕಿಕೊಂಡಿದೆ. ನೋವಿನಿಂದ ಸಿಬ್ಬಂದಿ ಕಿರುಚಿಕೊಂಡಿದ್ದು, ಆ ಶಬ್ದವನ್ನು ಕೇಳಿದ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮಾನ್ವಿತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾನೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕ, ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ಇದರಿಂದ ಸಿಬ್ಬಂದಿಗೆ ಮತ್ತಷ್ಟು ಅಪಾಯವಾಗುವುದನ್ನು ತಪ್ಪಿಸಲು ಸಾಧ್ಯವಾಗಿದೆ. ಮಾನ್ವಿತ್‌ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶಾಲೆಯ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಶ್ಲಾಘಿಸಿದ್ದಾರೆ.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋನಯ್ಯ ನಾಯಕ್ ಹಾಗೂ ಸಿಆರ್‌ಪಿ ಜ್ಯೋತಿ ಕೂಡ ಶಾಲೆಗೆ ಭೇಟಿ ನೀಡಿ ಬಾಲಕನ ಸಮಯೋಚಿತ ಕ್ರಮವನ್ನು ಪ್ರಶಂಸಿಸಿದ್ದಾರೆ. ಅಪಾಯದ ಕ್ಷಣದಲ್ಲಿ ಗಾಬರಿಗೊಳ್ಳದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ ಪುಟ್ಟ ಮಾನ್ವಿತ್‌ನ ಸಮಯಪ್ರಜ್ಞೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಸರಗೋಡು: ನೀರಿನಲ್ಲಿ ಮು#*ಳುಗಿ ಸಾವ*ನ್ನ#ಪ್ಪಿದ 8ನೇ ತರಗತಿ ವಿದ್ಯಾರ್ಥಿ
Now Playing
ಕಾಸರಗೋಡು: ನೀರಿನಲ್ಲಿ ಮು#*ಳುಗಿ ಸಾವ*ನ್ನ#ಪ್ಪಿದ 8ನೇ ತರಗತಿ ವಿದ್ಯಾರ್ಥಿ
ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ಸಾ#ವು: ಅಬೂಬಕರ್ ಅಸನ್ ಮೃ#ತ ...
ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ಸಾ#ವು: ಅಬೂಬಕರ್ ಅಸನ್ ಮೃ#ತ ವಿದ್ಯಾರ್ಥಿ

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ ...
Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version