UN NETWORKS
ಉಳ್ಳಾಲ: ಚುನಾವಣೆ ಸಮೀಪಿಸುತ್ತಿದ್ದಂತೆ ಹೊರಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳಕಿಗೆ ಬಂದ ಮಾಟ ಮಾಡುವ ಪ್ರಕರಣಗಳು ಇದೀಗ ಕರಾವಳಿಗೂ ವ್ಯಾಪಿಸಿದ್ದು, ಬೆಳ್ಮ -ರೆಂಜಾಡಿಯ ಮೂರು ಮಾರ್ಗ ಸೇರುವಲ್ಲಿ ಮಾಟ ಮಾಡಿರುವ ಕುರುಹೊಂದು ಪತ್ತೆಯಾಗಿದೆ.
ಶುಕ್ರವಾರ ತಡರಾತ್ರಿ ವೇಳೆ ಕುರುಹುಗಳನ್ನಿಟ್ಟು ಪೂಜೆ ನೆರವೇರಿಸಿರುವ ಶಂಕೆ ಇದೆ. ಶನಿವಾರ ಮುಂಜಾನೆ ಈ ಭಾಗದಿಂದ ಕೆಲಸಕ್ಕೆ ಹೋಗುವವರು ಕುರುಹು ಕಂಡು ಗಾಬರಿಯಾಗಿದ್ದಾರೆ. ವ್ಯಾಪಾರ, ಕೌಟುಂಬಿಕ ವಿಚಾರಕ್ಕೋ ನಡೆಸಿರುವ ತಂತ್ರಗಾರಿಕೆ ಆಗಿರಬಹುದು ಅನ್ನುವ ಸಂಶಯ ಹಲವರು ವ್ಯಕ್ತಪಡಿಸಿದರೆ, ಚುನಾವಣೆ ಹಿನ್ನೆಲೆಯಲ್ಲಿ ಮಾಡಿರುವ ಸಾಧ್ಯತೆಗಳೂ ಇದೆ ಅನ್ನುವ ಸಂಶಯ ನಾಗರೀಕರಲ್ಲಿ ಮೂಡಿದೆ. ಈ ಭಾಗದಿಂದ ತೆರಳುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮಾಟ ಮಂತ್ರ ಮಾಡಿರುವ ಸೊತ್ತುಗಳು ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಆದ್ದರಿಂದ ಇದನ್ನು ಯಾರೂ ಮುಟ್ಟಲು ಮುಂದಾಗಿಲ್ಲ. ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಕುತೂಹಲಿಗರು ಜಮಾಯಿಸಿ ಅದನ್ನು ನೋಡಿ ತೆರಳುತ್ತಿದ್ದಾರೆ.


