Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಲೋಕದಲ್ಲಿ ಯಾರೂ ಭಯೋತ್ಪಾದಕರಾಗಿ ಹುಟ್ಟಿಲ್ಲ: ಸೂಫಿ ಎಂ.ಕೆ. ಚಿಸ್ತಿ

UllalaVaniBy UllalaVaniApril 9, 2015No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಲೋಕದಲ್ಲಿ ಯಾರೂ ಭಯೋತ್ಪಾದಕರಾಗಿ ಹುಟ್ಟಿಲ್ಲ. ಭಯೋತ್ಪಾದಕ ಎಂದರೆ ಏನು ಎಂಬುದನ್ನು ನೀವು ಅಂತರ್ಜಾಲದಲ್ಲಿ ಹುಡುಕಿದರೆ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಇಸ್ಲಾಂ ಭಯೋತ್ಪಾದೆಯನ್ನು ಬಯಸುವುದಿಲ್ಲ. ಭಯೋತ್ಪಾದನೆಗೆ ಪ್ರೋತ್ಸಾಹ ಕೂಡಾ ನೀಡುತ್ತಿಲ್ಲ. ಆದರೆ ಕೆಲವರು ಇಸ್ಲಾಂ ಧರ್ಮದವರನ್ನು ಭಯೋತ್ಪಕರನ್ನಾಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಜರಾತ್ ಹಜ್ ಕಮಿಟಿಯ ಅಧ್ಯಕ್ಷ ಸೂಫಿ ಎಂ.ಕೆ. ಚಿಸ್ತಿ ಹೇಳಿದರು.

ಅವರು ಉಳ್ಳಾಲದಲ್ಲಿ ನಡೆಯುತ್ತಿರುವ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ರವರ 423ನೆಯ ವಾರ್ಷಿಕ ಹಾಗೂ 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

jisthi 02

jisthi 03

jisthi 01

Sanmana 01

ಉಳ್ಳಾಲ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದಲ್ಲಿ ಧರ್ಮದ ಜೋಡನೆಯ ಕಾರ್ಯ ನಡೆಯುತ್ತದೆಯೇ ಹೊರತು ವಿಭಜನೆಯ ಕಾರ್ಯ ನಡೆಯುತ್ತಿಲ್ಲ. ಲೋಕದಲ್ಲಿ ನಡೆಯುತ್ತಿರುವ ಕಾರ್ಯಗಳು, ಇನ್ನು ನಡೆಯಬೇಕಾದ ಕಾರ್ಯಗಳ ಬಗ್ಗೆ ಪ್ರವಾದಿಯವರು 1500ವರ್ಷಗಳ ಹಿಂದೆಯೇ ಬರೆದಿಟ್ಟಿದ್ದಾರೆ ಎಂದರು.

ಅಖಿಲ ಭಾರತ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್‍ನ ಉಪಾಧ್ಯಕ್ಷ ಅಬ್ದುಲ್ ರಶೀದ್ ಝೈನಿ ಮಾತನಾಡಿ, ಜಗತ್ತಿನಲ್ಲಿ ಅತ್ಯದಿಕ ಶಿಕ್ಷಣ ಕೇಂದ್ರವನ್ನು ಹೊಂದಿರುವ ದೇಶ ಭಾರತ. ಭಾರತದಲ್ಲಿ ಶಿಕ್ಷಣ ಕೇಂದ್ರ ಮತ್ತು ಶಿಕ್ಷಿತರೂ ಬಹಳಷ್ಟಿದರೂ ನೆಮ್ಮದಿಯನ್ನು ಭಾರತೀಯರು ಕಳಕೊಂಡಿದ್ದಾರೆ. 16 ಶತಮಾನದಲ್ಲಿ ಮಕ್ಕಾದಿಂದ ಶಾಂತಿಯ ಸಂದೇಶ ಸಾರಲು ಸಾದಾತ್‍ಗಳು ಭಾರತಕ್ಕೆ ಬಂದ ಸಂದರ್ಭ ಅವರಿಗೆ ಎಳೆನೀರು ಕೊಟ್ಟು ಸ್ವಾಗತಿಸಿದ್ದು ಹಿಂದೂಗಳು. ಪ್ರವಾದಿಯವರ ಕುಟುಂಬಕ್ಕೆ ಸೇರಿದ ಕೆಲ ಮಂದಿ ಭಾರತಕ್ಕೆ ಬಂದು ಸಂದೇಶ ಸಾರಿದರು. ಅವರಿಗೆ ಇಲ್ಲಿಯ ಭಾಷೆ, ಸಂಸ್ಕøತಿ ಗೊತ್ತಿರಲಿಲ್ಲ. ಆದರೆ ಆಕಾಲದಲ್ಲಿ ಯಾವುದೇ ಸಮಸ್ಯೆ ಬರಲಿಲ್ಲ. ಆದರೆ ಪ್ರಸಕ್ತ ಸೌಹಾರ್ದತೆ, ಆಚರಣೆಗಳಲ್ಲಿ ಹಿಂದೂ ಮತ್ತು ಇಸ್ಲಾಂನ ನಡುವೆ ಸೇತುವೆ ನಿರ್ಮಾಣವಾಗಿದೆ. ಪುಟ್ಟ ವಿಚಾರಕ್ಕೆ ಸಂಬಂದಿಸಿ ಕೋಮುಸಂಘರ್ಷ ನಡೆದರೆ ನಾವು ಸೌಹಾರ್ದ ಕೂಟ ಮಾಡುತ್ತೇವೆ. ಆದರೆ ಸೌಹಾರ್ದತೆಗೆ ಇಲ್ಲಿ ಸ್ಥಾನಮಾನ ಸಿಗುತ್ತಿಲ್ಲ. ವಿವಿದ ಧರ್ಮಗಳ ಪಂಡಿತರು, ಸಮಾಜದಲ್ಲಿ ಗುರುತಿಸಲ್ಪಟ್ಟವರು ಒಗ್ಗಟ್ಟನ್ನು ಬಯಸಿಕೊಂಡು ಹೋದರೆ ಅದಕ್ಕೆ ಅಡಚಣೆಗಳು ಬರುತ್ತವೆ. ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಳಲ್ಲಿ ಜಾತಿಬೇಧ ಇರುವುದಿಲ್ಲ. ನಾವೇ ದೇಶ ಕಟ್ಟುವವರು, ನಾವು ದೇಶದ ಅಂಗ ಎಂದುಕೊಂಡು ಒಗ್ಗಟ್ಟಿನಲ್ಲಿ ಶಿಕ್ಷಣ ಪಡೆಯುತ್ತಾರೆ. ಆದರೆ ಅವರು ಪಡಕೊಂಡ ಶಿಕ್ಷಣಕ್ಕೆ ಪೂರ್ಣಪ್ರಮಾಣದ ಗೌರವ ಈ ಕಾಲದಲ್ಲಿ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಉತ್ತಮ ಶಿಕ್ಷಣ ನೀಡಿದಲ್ಲಿ ಅವರಿಗೆ, ಧರ್ಮ, ದೇಶ, ಜಾತಿ, ಸರಕಾರ ಮುಂತಾದ ವಿಚಾರಗಳ ಬಗ್ಗೆ ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ದೇಶದಲ್ಲಿ ಹಲವು ಚರ್ಚ್‍ಗಳನ್ನು ಕಾಣುತ್ತೇವೆ, ಮಸೀದಿಗಳು ಕಾಣುತ್ತೇವೆ, ದೇವಸ್ಥಾನಗಳನ್ನು ಕಾಣುತ್ತೇವೆ. ಆದರೆ ಎಲ್ಲಾ ಮಂದಿರಗಳಲ್ಲಿ ನಡೆಯುವುದು ದೇವರಿಗೆ ಪ್ರಾರ್ಥನೆ ಮಾತ್ರ. ಆರಾಧನಾಯಲಗಳು ಬೇರೆಬೇರೆಯಾದರೂ ಏಕದೇವನಿಗೆ ಪ್ರಾರ್ಥನೆ ನಡೆಯುತ್ತದೆ. ಆದ್ದರಿಂದ ಧ್ವೇಷವನ್ನು ಬೆಳೆಸುವ ಸಿದ್ದಾಂತಗಳನ್ನು ಬಿಟ್ಟು, ಪ್ರೀತಿಯನ್ನು ಬೆಳೆಸುವ ಸಿದ್ಧಾಂತಗಳನ್ನು ಬೆಳೆಸಿಕೊಂಡಲ್ಲಿ ಸಮಾಜದಲ್ಲಿ ಸಮಸ್ಯೆಗಳು ದೂರವಾಗಲು ಸಾಧ್ಯ. ಲಾದೆನ್‍ನನ್ನು ಸಮಾಜಕ್ಕೆ ಸೇರಿಸಬೇಡಿ, ಹಿಟ್ಲರ್‍ನನ್ನು ಸಮಾಜಕ್ಕೆ ಸೇರಿಸಬೇಡಿ. ಉಗ್ರವಾದಿಗಳು ಭಯೋತ್ಪಾದನೆ ಮಾಡುತ್ತಾರೆ ಎಂದು ಎಲ್ಲರನ್ನು ಅದಕ್ಕೆ ಬಲಿಪಶು ಮಾಡುವ ಕಾರ್ಯ ಸಲ್ಲದು ಎಂದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಮೊಗವೀರಪಟ್ಣದ ಜೀವರಕ್ಷಕ ಈಜುಗಾರರ ಸಂಘದ ಪ್ರವೀಣ್ ಕೋಟ್ಯಾನ್, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಕಿರಣ್ ಕುಮಾರ್, ಸಮಾಜ ಸೇವಕ ಅಬ್ದುಲ್ ರವೂಫ್ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‍ನ ಧರ್ಮಗುರು ಜೆ.ಪಿ.ಸಲ್ದಾನ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ನಗರಸಭೆಯ ಕೌನ್ಸಿಲರ್ ದಿನೇಶ್ ರೈ, ಇಂಟೆಕ್‍ನ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಭಾರತ್ ಪ್ರೌಢ ಶಾಲಾ ಸಂಚಾಲಕ ಬಾಬು ಬಂಗೇರ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಸದಾನಂದ ಬಂಗೇರ, ಮಂಜನಾಡಿ ಜಮಾಅತ್‍ನ ಅಧ್ಯಕ್ಷ ಆಲಿಕುಂಞÂ ಪಾರೆ, ಉಳಿಯ ದೇವಸ್ಥಾನದ ಅಧ್ಯಕ್ಷ ಸಂಜೀವ ಪಡುಮನೆ, ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ, ಅಬ್ದುಲ್ ಖಾದರ್, ಉಳ್ಳಾಲ ಪುರಸಭೆಯ ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕಲಂ ಉಸ್ತಾದ್, ಯು.ಟಿ.ತಂಝಿಲ್ ಉಪಸ್ಥಿತರಿದ್ದರು.

ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು. ಉರೂಸ್ ಮಾಧ್ಯಮ ಸಮಿತಿ ವಿಭಾಗದ ಆರ್.ಕೆ.ಮದನಿ ಕಾರ್ಯಕ್ರಮ ನಿರೂಪಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
india terrorist uoors
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು ವಿವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿಯ ಭಾರತ: ವಿಚಾರಸಂಕಿರಣ ಉದ್ಘಾಟನೆ

March 4, 2026

ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಶೇ 100 ಫಲಿತಾಂಶ

March 4, 2026

ಪ್ರೇಮ ವೈಫಲ್ಯ ಹಿನ್ನೆಲೆ; ಒಮಾನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸೋಮೇಶ್ವರದ ಯುವಕ

March 4, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕಾರ್ಮಿಕ ಸಂಹಿತೆ ವಿರುದ್ಧ ಸಹಾಯಕ ಕಾರ್ಮಿಕ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಕೆ

By UllalaVaniMarch 4, 20260

ಮಂಗಳೂರು: ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಆಕ್ಷೇಪಣೆ ಸಲ್ಲಿಕೆ ಹಾಗೂ ಪ್ರತಿಭಟನೆ ಮಂಗಳೂರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು : ಪಿ.ಎ. ಕಾಲೇಜಿನ ಆಯಿಷತ್ ಲುತ್‌ಫಾ ನಜಾ B.Sc.ಯಲ್ಲಿ ಪ್ರಥಮ ರ‍್ಯಾಂಕ್

March 4, 2026

ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ “ಲೆಂಟನ್ ಗಾಸ್ಪೆಲ್ ಕಾಮಿಕ್ಸ್” ಪುಸ್ತಕ ಬಿಡುಗಡೆ

March 4, 2026

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಧಾರಿಗಳಿಗೆ ಶಾಕಿಂಗ್ ಸುದ್ದಿ ; 20 ಲಕ್ಷ ಕಾರ್ಡ್ ರದ್ದು..!

March 4, 2026
1 2 3 … 1,823 Next
Automatic YouTube Gallery

ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ

ಅoಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ; ಮoಗಳೂರು ಸೆನೆಟ್ ಸಭಾಂಗಣದಲ್ಲಿ ಕಾರ್ಯಕ್ರಮ

ಅಂಬೇಡ್ಕರ್ ಬಗ್ಗೆ ಅಕ್ಕ ಐ.ಎ.ಎಸ್ ಅಕಾಡೆಮಿಯ ಶಿವಕುಮಾರ್ ಪ್ರಾಸ್ತಾವಿಕ ಮಾತು


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #mangalore #package #ambedkar
Show More
ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ
Now Playing
ಅಂಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ
ಅoಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ; ಮoಗಳೂರು ಸೆನೆಟ್ ...
ಅoಬೇಡ್ಕರ್ ದೃಷ್ಟಿಕೋನದಲ್ಲಿ ಅಭಿವೃದ್ಧಿ ಭಾರತ ವಿಚಾರ ಸಂಕಿರಣ; ಮoಗಳೂರು ಸೆನೆಟ್ ಸಭಾಂಗಣದಲ್ಲಿ ಕಾರ್ಯಕ್ರಮ

ಅಂಬೇಡ್ಕರ್ ಬಗ್ಗೆ ಅಕ್ಕ ಐ.ಎ.ಎಸ್ ಅಕಾಡೆಮಿಯ ಶಿವಕುಮಾರ್ ಪ್ರಾಸ್ತಾವಿಕ ಮಾತು


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #mangalore #package #ambedkar
Show More
ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
Now Playing
ನೂತನ ಕಟ್ಟಡದ ಉದ್ಘಾಟನಾ ಸಮಾರಂಭ
ಓಂ ಶ್ರೀ ಗಣೇಶ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ಭಜನಾ ಮಂಡಳಿ,ಕುಣಿತ ಭಜನಾ ...
ಓಂ ಶ್ರೀ ಗಣೇಶ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ಭಜನಾ ಮಂಡಳಿ,ಕುಣಿತ ಭಜನಾ ತಂಡ-ಪಾಣೇಲ ಶಾಂತಿನಗರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #pajiru #ganeshaYuvakamandala #Inaugration #Santhoshkumarraiboliyar
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d