UN NETWORKS
ಮೊಂಟೆಪದವು : ಎಸ್.ಎಸ್.ಎಫ್ ರಾಜ್ಯ ಸಮಿತಿಯ ನಿರ್ದೇಶನದಂತೆ *ಜಸ್ಟಿಸ್ ಪಾರ್ ಆಸಿಫಾ* ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನಾ ಕಾರ್ಯಕ್ರಮವು ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಅಧ್ಯಕ್ಷರು ಶೆರೀಫ್ ರವರ ಸಮ್ಮುಖದಲ್ಲಿ ಜರಗಿತು.
ಕಾಶ್ಮೀರದ ಕಾಥುವಾ ಎಂಬಲ್ಲಿ 8 ವರ್ಷದ ಪುಟ್ಟ ಕಂದಮ್ಮ ಆಸಿಫಾಳ ವಿರುಧ್ಧ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಎಸ್.ಎಸ್.ಎಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷರಾದ *ಇರ್ಷಾದ್ ಮದನಿ ಉಸ್ತಾದರು ಭಾಷಣ ಮಾಡಿದರು. ದಾರುಣ ಅಂತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ದುಷ್ಕರ್ಮಿಗಳು ಯಾರು ಎಂದು ಹೀಗಾಗಲೇ ತಿಳಿದಿರುವ ವಿಷಯ.ಆದರೆ ಈವರೆಗೂ ಯಾವುದೇ ಕಠಿಣ ಶಿಕ್ಷೆ ಜಾರಿಯಾಗಿಲ್ಲ ಯಾಕೆ? ಎಂದು ಇವರು ಪ್ರಶ್ನಿಸಿದರು.
ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಗೌರವ ಅಧ್ಯಕ್ಷರಾದ ಮೊಯ್ದಿನ್ ಹಾಜಿಯವರು
” ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಾ ಇವೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಜಾತಿ-ಧರ್ಮ ನೋಡದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕೆಂದು ಅಭಿಪ್ರಾಯ ಪಟ್ಟರು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಮೋಂಟುಗೋಳಿ ಸೆಕ್ಟರ್ ಕ್ಯಾಂಪಸ್ ಸೆಕ್ರೆಟರಿ ಇರ್ಷಾದ್ ಮೊಂಟೆಪದವು, ಉಪಾಧ್ಯಕ್ಷರು ಶಂಶುದ್ದೀನ್ ಮೊಂಟೆಪದವು, ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಕೋಶಾಧಿಕಾರಿ ಸಿಯಾಬ್ ಎಮ್ ಎಚ್,ಉಪಾಧ್ಯಕ್ಷರು ಸಿರಾಜುದ್ದೀನ್ ಎಮ್ ಎಮ್ ಹಾಗೂ ಲೆಕ್ಕಪರಿಶೋಧಕರು ಇಕ್ಬಾಲ್ ಉಪಸ್ಥಿತರಿದ್ದರು.
ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಕ್ಯಾಂಪಸ್ ಸೆಕ್ರೆಟರಿ ತಹ್ಸೀನ್ ಸ್ವಾಗತಿಸಿದರು ಮತ್ತು ಜೊತೆ ಕಾರ್ಯದರ್ಶಿ ನಾಝಿಮ್ ವಂದಿಸಿದರು.


