Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಪರಾಧ ಸುದ್ದಿಗಳು

ಕಲ್ಲಡ್ಕ ಪ್ರಭಾಕರ್ ವಿರುದ್ಧ ಪ್ರಕರಣ ದಾಖಲು

UllalaVaniBy UllalaVaniApril 9, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೈರಂಗಳ : ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿ ಆಮರಣಾಂತ ಉಪವಾಸಕ್ಕೆ ಭೇಟಿ ನೀಡಿದ್ದ ಕಲ್ಲಡ್ಕ ಭಟ್ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಧರ್ಮ ವಿರೋಧಿ ಭಾಷಣ ಮಾಡಿರುವುದರ ವಿರುದ್ಧ ಚುನಾವಣಾ ಆಯೋಗ ಮಾಹಿತಿ ಸಂಗ್ರಹಿಸಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದೆ.

ಎರಡು ದಿನಗಳ ಕಾಲ ಆಮರಣಾಂತ ಉಪವಾಸದಲ್ಲಿ ಭಾಗಿಯಾಗಿದ್ದ ಸಂದರ್ಭ ಭಟ್ ಅವರು `ದನದ ಮಾಂಸ ತಿನ್ನುವ ಸಚಿವರನ್ನು ದೇವಸ್ಥಾನದೊಳಕ್ಕೆ ಬಿಡಬಾರದು. ಗೋ ದರೋಡೆಗೆ ಕ್ರಮಕೈಗೊಳ್ಳದೆ ಪ್ರೋತ್ಸಾಹಿಸುವಂತಹ ಸರಕಾರದ ಮತ್ತು ಭಾಗದ ಶಾಸಕರ ಬದಲಾವಣೆಯಾಗಬೇಕಿದೆ ಅಂದಿದ್ದರು. ಮರುದಿನ ಅಲ್ಲೇ ಖಾಸಗಿ ಜಾಗದಲ್ಲಿ ಮಾತನಾಡಲು ಅವಾಶವಿದೆ ಎಂದು ಅನ್ನುತ್ತಾ ನೀತಿ ಸಂಹಿತೆಯ ವಿರುದ್ಧ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದರಿಂದ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮತ್ತು ಅನುಮಾನ ಹುಟ್ಟಿಸುವಂತೆ ಭಟ್ ಅವರ ಭಾಷಣ ಪ್ರೇರೇಪಿಸಿದೆ ಎಂದು ಚುನಾವಣಾ ಆಯೋಗ ಆರೋಪಿಸಿತ್ತು.

ಅದರಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಐಪಿಸಿ 153 (ಎ) ಮತ್ತು ಆರ್ ಪಿ ಕಾಯ್ದೆ 125ರ ಅಡಿ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪವಾಸ ನಿರತ ಗ್ರಾಮ ಪಂಚಾಯತ್ ಸದಸ್ಯನ ಮನೆಗೆ ಹಾನಿ
ಆಮರಣಾಂತ ಉಪವಾಸ ನಡೆಸುತ್ತಿದ್ದ ಟಿ.ಜಿ.ರಾಜಾರಾಂ ಭಟ್ ಆಸ್ಪತ್ರೆಗೆ ದಾಖಲಾದ ಬಳಿಕ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ನಾಯಕ ಉಪವಾಸದ ನೇತೃತ್ವ ವಹಿಸಿಕೊಂಡಿದ್ದರು. ಶನಿವಾರ ತಡರಾತ್ರಿ ದುಷ್ಕರ್ಮಿಗಳು ಅವರ ಮನೆಯ ಹೊರಆವರಣಕ್ಕೆ ದುಷ್ಕರ್ಮಿಗಳು ನುಗ್ಗಿ ಹಾನಿಗೈದಿದ್ದಾರೆ.

ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ನಾಯಕ ಕೈರಂಗಳದ ಬೀರೂರಿನ ನಂದರಾಜ ಶೆಟ್ಟಿ ಎಂಬವರ ಮನೆಯ ಸಿಟ್‍ಔಟ್‍ನಲ್ಲಿದ್ದ ಡ್ರಾವರ್ ಪುಡಿಗೈದಿದ್ದಾರೆ. ಅಲ್ಲದೆ ಅದರಲ್ಲಿದ್ದ ನಂದರಾಜ ಅವರ ವೈಯಕ್ತಿಕ ಡೈರಿಯೊಂದನ್ನು ಹಾನಿಗೈದಿದ್ದಾರೆ ಎನ್ನಲಾಗಿದೆ. ಅಲ್ಲದೆ ಮನೆಯ ಬಾಗಿಲಿಗೆ ಹಲವು ಬಾರಿ ಬಡಿದು ವಿಕೃತ ರೀತಿಯಲ್ಲಿ ವರ್ತಿಸಿದ್ದಾರೆ. ಅದೂ ಅಲ್ಲದೆ ಪಿಎ ಎಂಜಿನಿನಿಯರಿಂಗ್ ಕಾಲೇಜಿನ ಎದುರುಗಡೆ ನಂದರಾಜ್ ಅವರಿಗೆ ಸೇರಿದ ಲಾಡ್ಜ್ ಇದ್ದು, ಅದರ ಎದುರುಗಡೆ ಬೀರ್ ಬಾಟಲಿ ಒಡೆದು ಹಾಕಿದ್ದಾರೆ. ಘಟನೆಯ ಬಗ್ಗೆ ನಂದರಾಜ್ ಅವರು ಈಗಾಗಲೇ ಕೊಣಾಜೆ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ನಂದರಾಜ್ ಅವರು ಕೊಣಾಜೆ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ನೀಡಲಿದ್ದಾರೆ. ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮೃತಧಾರಾ ಗೋಶಾಲೆಯಿಂದ ಇತ್ತೀಚಿಗೆ ಗೋಕಳವು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋಶಾಲೆಯ ಮಾಲಕ ರಾಜಾರಾಂ ಭಟ್ ಅವರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ನಂದರಾಜ್ ಶೆಟ್ಟಿ ಕೂಡ ಸ್ಥಳದಲ್ಲಿದ್ದು, ಅವರಿಗೆ ನೈತಿಕ ಬೆಂಬಲ ನೀಡಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಮನೆಗೆ ಹಾನಿ ಮಾಡಲಾಗಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಅಸ್ಪತ್ರೆಗೆ ದಾಖಲಾದ ಟಿ.ಜಿ. ರಾಜಾರಾಂ ಭಟ್
ಕೈರಂಗಳ ಗ್ರಾಮದ ಪುಣ್ಯಕೋಟಿನಗರದ ಅಮೃತಧಾರ ಗೋಶಾಲೆಯಿಂದ ದನ ಕಳವು ಪ್ರಕರಣದ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಕಳೆದ ಒಂದು ವಾರದಿಂದ ಉಪವಾಸ ಸತ್ಯಾಗ್ರಹದಲ್ಲಿದ್ದ ಗೋಶಾಲೆಯ ಮುಖ್ಯಸ್ಥ ಟಿ.ಜಿ.ರಾಜಾರಾಮ ಭಟ್ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಪೊಲೀಸರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೋ ಕಳ್ಳರ ಬಂಧನಕ್ಕಾಗಿ ಪುಣ್ಯಕೋಟಿನಗರದ ಗೋಶಾಲೆಯಲ್ಲಿ ಟಿ.ಜಿ.ರಾಜಾರಾಮ ಭಟ್ ಅವರು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಸತ್ಯಾಗ್ರಹಕ್ಕೆ ಹಲವಾರು ಪ್ರಮುಖರು ಬಂದು ಬೆಂಬಲ ವ್ಯಕ್ತಪಡಿಸಿ, ಪ್ರತಿ ದಿನವೂ ಅಪಾರಸ ಸಂಖ್ಯೆಯಲ್ಲಿ ಜನರು ಸತ್ಯಾಗ್ರಹ ಸ್ಥಳದಲ್ಲಿ ಜಮಾಯಿಸಿ ಗೋ ಕಳ್ಳರ ಬಂಧನಕ್ಕಾಗಿ ಆಗ್ರಹಿಸುತ್ತಿದ್ದರು.
ಶನಿವಾರದಂದು ತಡರಾತ್ರಿ ಟಿ.ಜಿ. ರಾಜರಾಮ ಭಟ್ ಅವರ ಆರೋಗ್ಯದಲ್ಲಿ ವೈಪರಿತ್ಯ ಉಂಟಾಗಿತ್ತು. ಬಳಿಕ ಪೊಲೀಸರು ಅವರ ಜೊತೆಗೆ ಮಾತುಕತೆ ನಡೆಸಿ ಅವರನ್ನು ಕೂಡಲೇ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲೂ ಮುಂದುವರಿದ ನಿರಶನ
ಆಸ್ಪತ್ರೆಗೆ ದಾಖಲಾಗಿರುವ ರಾಜಾರಾಮ ಭಟ್ ಅವರು ಅಸ್ಪತ್ರೆಯಲ್ಲಿಯೂ ಕೂಡಾ ಗೋ ಕಳ್ಳರ ಬಂಧನಕ್ಕಾಗಿ ಆಗ್ರಹಿಸಿ ಏನೂ ಆಹಾರವನ್ನು ಸೇವಿಸದೆ ಉಪವಾಸ ಮುಂದುವರಿಸಿದ್ದಾರೆ. ಶನಿವಾರ ತಡರಾತ್ರಿ ನಿರಶನ ಸ್ಥಳಕ್ಕೆ ಬಂದ ಪೊಲೀಸರು ಬಲತ್ಕಾರವಾಗಿ ತನ್ನನ್ನು ಆಸ್ಪತ್ರೆಗೆ ಸೇರಿಸಿರುವುದಾಗಿ ರಾಜಾರಾಮ ಭಟ್ ಅವರು ಆರೋಪಿಸಿದ್ದಾರೆ. ವೈದ್ಯಕೀಯ ತಪಾಸಣೆ ನಡೆದ ಬಳಿಕ ಪೊಲೀಸರು ತಂದಿದ್ದ ಅಂಬ್ಯುಲೆನ್ಸ್‍ನಲ್ಲಿ ಕುಳಿತುಕೊಳ್ಳಲು ಹೇಳಿದಾಗ ಅದನ್ನು ನಿರಾಕರಿಸಿದ ರಾಜಾರಾಮ ಭಟ್ ಅವರು ತನ್ನದೇ ಕಾರಲ್ಲಿಯೇ ಪೊಲೀಸರೊಂದಿಗೆ ತೆರಳಿದ್ದು ಬಳಿಕ ಪೊಲೀಸರು ದೇರಳಕಟ್ಟೆಯ ಕೆ.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿರುವ ರಾಜಾರಾಮ ಭಟ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಪ್ರಮುಖರು ಭಾನುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ರಾಜಾರಾಮ್ ಭಟ್ ಆಸ್ಪತ್ರೆಯಲ್ಲಿದ್ದರೂ ಗೋಶಾಲೆಯಲ್ಲಿ ಮುಂದುವರಿದ ಸತ್ಯಾಗ್ರಹ
ರಾಜರಾಮ ಭಟ್ ಅವರ ಅನಾರೋಗ್ಯದಿಂದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಭಟ್ ಅವರ ಆಶಯದಂತೆ ಗೋಶಾಲೆಯಲ್ಲಿ ಅವರ ಬೆಂಬಲಿಗರು ಉಪವಾಸ ಸತ್ಯಾಗ್ರಹ ವನ್ನು ಮುಂದುರಿಸಿದ್ದಾರೆ. ಭಾನುವಾರವೂ ಸುಮಾರು 40 ರಷ್ಟು ಜನ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ. ಅಲ್ಲದೆ ಭಾನುವಾರ ಸಂಜೆ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಮುಖಂಡರಾದ ಪುಂಡರೀಕಾಕ್ಷ, ನಂದರಾಜ ಶೆಟ್ಟಿ ಸೇರಿದಂತೆ ಸನಾತನ ಸಂಸ್ಕಾರ ಭಾರತಿಯ ಕಲಾವಿದರು ಕೂಡಾ ಭಾಗವಹಿಸಿದ್ದರು. ಸಂಜೆ ನಡೆದ ಗೋಪೂಜೆಯಲ್ಲೂ ಅಪಾರಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಯಾವುದೇ ಕಾರಣಕ್ಕೂ ಸತ್ಯಾಗ್ರಹ ಕೈಬಿಡೆವು: ಸಂತೋಷ್ ಬೋಳಿಯಾರ್
ಗೋ ಹಂತಕರನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಕೈರಂಗಳ ಗೋಶಾಲೆಯಲ್ಲಿ ರಾಜಾರಾಮ ಭಟ್ ಅವರ ನೇತೃತ್ವದಲ್ಲಿ ಆಮರಣಾಂತ ಉಪವಾಸ ನಡೆಯುತ್ತಿದ್ದು ಎಲ್ಲರೂ ಜಾತಿ ಬೇಧ ಮರೆತು ಹೋರಾಟಕ್ಕೆ ಕೈ ಜೋಡಿಸಿದ್ದಾರೆ, ಆದರೆ ಪೊಲೀಸರು ಶನಿವಾರ ತಡರಾತ್ರಿ ಬಂದು ರಾಜಾರಾಮ ಭಟ್ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸತ್ಯಾಗ್ರಹವನ್ನು ಕೈಬಿಡದೆ ಭಟ್ ಅವರ ಆಶಯದಂತೆ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತೇವೆ.
ಸಂತೋಷ್ ಕುಮಾರ್ ಬೋಳಿಯಾರ್
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಪಟ್ಟೋರಿ ಮಸೀದಿ ವತಿಯಿಂದ ವಿಜೃಂಭಣೆಯ ಈದ್ ಮೀಲಾದ್

August 29, 2026

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಿಂದ ನಾಳೆ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ

August 29, 2026

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ವೈಭವದ ವರಮಹಾಲಕ್ಷ್ಮಿ ಪೂಜೆ

August 29, 2026
Leave A Reply

Advertise
ಸಂಪರ್ಕಿಸಿ

ಕೋಟೆಕಾರು ಪಟ್ಟಣ ಪಂಚಾಯತ್‌ 80 ನೇ ಸ್ವಾತಂತ್ರೋತ್ಸವ

August 16, 2026

ಮಾಡೂರು ಶಾಲೆಯಲ್ಲಿ ವಿಭಿನ್ನವಾಗಿ ಜರಗಿದ 80 ರ ಸ್ವಾತಂತ್ರ್ಯ

August 16, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026
All News

ಪಟ್ಟೋರಿ ಮಸೀದಿ ವತಿಯಿಂದ ವಿಜೃಂಭಣೆಯ ಈದ್ ಮೀಲಾದ್

By UllalaVaniAugust 29, 20260

ಉಳ್ಳಾಲ; ಪಟ್ಟೋರಿ ರಹ್ಮಾನಿಯಾ ಜುಮಾ ಮಸೀದಿ ವತಿಯಿಂದ ಈದ್ ಮೀಲಾದ್ ಸಮಾರೋಪ ಕಾರ್ಯಕ್ರಮ ಹಾಗೂ ಮದ್ರಸ ವಿದ್ಯಾರ್ಥಿಗಳ ”ಇಷ್ಖೇ ಮದೀನಾ…

ಮಂಗಳೂರಿಗೆ ಹೈಕೋರ್ಟ್ ಸಂಚಾರಿ ಪೀಠ: ಇದು ಕೇವಲ ವಕೀಲರ ಬೇಡಿಕೆಯಲ್ಲ, ನ್ಯಾಯಕ್ಕೆ ಜನರ ಸಂವಿಧಾನಾತ್ಮಕ ಹಕ್ಕಿನ ಪ್ರಶ್ನೆ

August 29, 2026

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಿಂದ ನಾಳೆ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ

August 29, 2026

ಗ್ರಾಹಕರಿಗೆ ಉತ್ತಮ ಸೇವೆ ಮೆಸ್ಕಾಂ ಮೆಕ್ಯಾನಿಕ್‌ ಸಂತೋಷ್‌ ಲೋಬೋ ಅವರಿಗೆ ಸಚಿವರಿಂದ ಸನ್ಮಾನ

August 29, 2026
1 2 3 … 2,080 Next
Automatic YouTube Gallery

ಪೊಲೀಸ್ ರೂಟ್ ಮಾರ್ಚ್ | ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್

ಅಹಿತಕರ ಘಟನೆಗಳು ಸಂಭವಿಸದಂತೆ, ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು.
ದೇರಳಕಟ್ಟೆ ನಿತ್ಯಾನಂದನಗರದಿಂದ ಕುತ್ತಾರು ಶ್ರೀ ರಾಜರಾಜೇಶವರಿ ಸಿದ್ಧಿವಿನಾಯಕ ದೇವಸ್ಥಾನದವರೆಗೆ ನಡೆಯಿತು. ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನೇತೃಥ್ವದಲ್ಲಿ ಸಬ್‌ ಇನ್ಸ್‌ ...
ಪೆಕ್ಟರ್‌ ಗಳಾದ ರೇವಣ್ಣ ಸಿದ್ಧಯ್ಯ , ಸಂತೋಷ್ ಹಾಗೂ ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪೊಲೀಸ್ ರೂಟ್ ಮಾರ್ಚ್ | ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್
Now Playing
ಪೊಲೀಸ್ ರೂಟ್ ಮಾರ್ಚ್ | ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್
ಅಹಿತಕರ ಘಟನೆಗಳು ಸಂಭವಿಸದಂತೆ, ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ...
ಅಹಿತಕರ ಘಟನೆಗಳು ಸಂಭವಿಸದಂತೆ, ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು.
ದೇರಳಕಟ್ಟೆ ನಿತ್ಯಾನಂದನಗರದಿಂದ ಕುತ್ತಾರು ಶ್ರೀ ರಾಜರಾಜೇಶವರಿ ಸಿದ್ಧಿವಿನಾಯಕ ದೇವಸ್ಥಾನದವರೆಗೆ ನಡೆಯಿತು. ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನೇತೃಥ್ವದಲ್ಲಿ ಸಬ್‌ ಇನ್ಸ್‌ ...
ಪೆಕ್ಟರ್‌ ಗಳಾದ ರೇವಣ್ಣ ಸಿದ್ಧಯ್ಯ , ಸಂತೋಷ್ ಹಾಗೂ ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಗ್ರಾಮಚಾವಡಿ: ಬಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮದಿನಾಚರಣೆ
Now Playing
ಗ್ರಾಮಚಾವಡಿ: ಬಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮದಿನಾಚರಣೆ
ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ವತಿಯಿಂದ ನಡೆದ ...
ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮದಿನೋತ್ಸೋವ

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version