UN NETWORKS
ಉಳ್ಳಾಲ: ಪ್ರವಾದಿಯವರು ಸಾರಿದ ತತ್ವಾದರ್ಶಗಳನ್ನು ಪಾಲಿಸಿಕೊಂಡು ಜೀವಿಸಬೇಕಾದ ಕರ್ತವ್ಯ ನಮ್ಮದಾಗಿದೆ ಎಂದು ಪೇರೋಡ್ ಅಬ್ದುಲ್ ರ್ರಹ್ಮಾನ್ ಸಖಾಫಿ ಹೇಳಿದರು.
ಅವರು ಎಸ್ಸೆಸ್ಸೆಫ್ ಯೇನೆಪೊಯ ಕ್ಯಾಂಪಸ್ ಶಾಂತಿಬಾಗ್ ಶಾಖೆ ಇದರ ಆಶ್ರಯದಲ್ಲಿ ದೇರಳಕಟ್ಟೆ ಯೇನೆಪೊಯ ಮೆಡಿಕಲ್ ಕಾಲೇಜು ಬಳಿ ಜರಗಿದ ಬೃಹತ್ ಹುಬ್ಬುರ್ರಸೂಲ್ ಕಾನ್ಪರೆನ್ಸ್ ಭಾಗವಹಿಸಿ ಮಾತನಾಡಿದರು.
ಯೇನೆಪೊಯ ಅಬ್ದುಲ್ಲ ಕುಂಞ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ಬಾಸ್ ಉಸ್ತಾದ್ ಉದ್ಘಾಟಿಸಿದರು. ಜುನೈದ್ ತಂಙಳ್, ಸಿದ್ದೀಕ್ ಮೋಂಟುಗೋಳಿ, ಉಸ್ಮಾನ್ ಸಅದಿ ಪಟ್ಟೋರಿ, ಮುನೀರ್ ಅಹ್ಮದ್ ಸಖಾಫಿ, ಅಬೂಬಕರ್ ಸಿದ್ದೀಕ್ ಝುಹ್ರಿ, ಉಮರ್ ಸಖಾಫಿ, ಅಬ್ದುಲ್ ಅಝೀಝ್ ಝುಹ್ರಿ ಪುಣಚ, ಏಷ್ಯನ್ ಬಾವಾ, ಅಲ್ತಾಫ್ ಕುಂಪಲ, ಮುಹಮ್ಮದ್, ಹನೀಫ್, ಅಬ್ದುಲ್ ಅಝೀಝ್ ಮೊದಲಾದವರು ಭಾಗವಹಿಸಿದ್ದರು. ಎಸ್.ಎಂ.ಇಲ್ಯಾಸ್ ಸಖಾಫಿ ಸ್ವಾಗತಿಸಿದರು. ಇರ್ಫಾನ್ ಎ.ಎಂ. ವಂದಿಸಿದರು.


