UN NETWORKS
ಕೈರಂಗಳ: ಗೋಮಾತೆಯ ರಕ್ಷಣೆಗಾಗಿ ಅಗತ್ಯಬಿದ್ದಲ್ಲಿ ನಾವು ಶಸ್ತ್ರವನ್ನು ಕೈಗೆತ್ತಿಕೊಳ್ಳಲು ಸನ್ನದ್ಧ. ಶುಕ್ರವಾರ ಸಂಜೆ ಸಂದ್ಯಾಕಾಲದವರೆಗೆ ಇಲಾಖೆಗಳಿಗೆ ಮೀಸಲಾಗಿರಿಸಿದ್ದೇವೆ, ಆ ಸಮಯದಲ್ಲಿ ಬಂಧಿಸಿ ಮರಣ ದಂಡನೆ ಆಗುವ ರೀತಿಯ ಕೇಸು ಹಾಕಬೇಕು.
ಒಂದು ವೇಳೆ ಅದಕ್ಕೆ ಪೊಲೀಸ್ ಇಲಾಖೆಗೆ ತಾಕತ್ತು ಇಲ್ಲವಾದರೆ ಪೊಲೀಸರು ಟೊಪ್ಪಿ ಕೆಳಗಿಟ್ಟು, ಹಿಂದೂ ಕಾರ್ಯಕರ್ತರಿಗೆ ಬಿಟ್ಟುಕೊಡಿ ಎಂದು ಹಿಂದೂ ಮುಖಂಡ ಕುಂಟಾರು ರವೀಶ್ ತಂತ್ರಿ ಸವಾಲು ಹಾಕಿದರು.
ಅವರು ಗುರುವಾರ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಿಂದ ಗೋಕಳ್ಳತನ ಮಾಡಿದ ಗೋಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಐದನೇ ದಿನದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ವಿಶೇಷ ಗೋಪೂಜೆ ಸಲ್ಲಿಸಿ ಮಾತನಾಡಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಸುಬ್ರಹ್ಮಣ್ಯ ಭಟ್ ಕಜಂಪಾಡಿ ಮಾತನಾಡಿ ಅಸಾಮಾನ್ಯರಾದ ಆರಕ್ಷಕರು ಯಾವುದೇ ಸುಳಿವು ಇಲ್ಲದೆಯೂ ಅಪರಾಧಿಗಳನ್ನು ಹುಡುಕಿ ತರುವವರು. ಆದರೆ ಐದು ದಿನವಾದರೂ ಗೋಕಳ್ಳರ ಪತ್ತೆಯಾಗಿಲ್ಲ ಎನ್ನುವುದು ಆನೇಕ ಗೊಂದಲಕ್ಕೆ ಎಡೆಮಾಡುತ್ತಿದೆ. ಸದ್ಗುಣವನ್ನು ವಿಕೃತದೆಡೆಗೆ ತಿರುಗಿಸುವ ಪ್ರಯತ್ನ ಮಾಡದೆ ಜವಾಬ್ದಾರಿಯಿಂದ ವರ್ತಿಸುವುದು ಒಳಿತು ಎಂದರು.
ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಟಿ.ಜಿ.ರಾಜಾರಾಮ ಭಟ್ ಅವರು ಮಾತನಾಡಿ ನನ್ನ ಸತ್ಯಾಗ್ರಹವನ್ನು ಆತ್ಮಹತ್ಯೆ ಪ್ರಯತ್ನ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಗೋದರೋಡೆಕೋರರನ್ನು ಬಂಧಿಸುವವರೆಗೆ ಸತ್ಯಾಗ್ರಹ ನಿಲ್ಲುವುದಿಲ್ಲ. ಆರೋಗ್ಯದ ವಿಚಾರದಲ್ಲಿ ಯಾವುದೇ ಊಹಾಪೋಹ ಬೇಡ, ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.ಸೂರ್ಯನಾರಾಯಣ ಭಟ್ ಕಶೆಕೋಡಿ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಗಣರಾಜ ಭಟ್ ಕೆದಿಲ ಮಾತನಾಡಿದರು. ಮಾಜಿ ಶಾಸಕರಾದ ಕೃಷ್ಣ ಪಾಲೇಮಾರು, ರುಕ್ಮಯ್ಯ ಪೂಜಾರಿ, ಸತ್ಯಜಿತ್ ಸುರತ್ಕಲ್, ಉದಯ ಭಟ್, ಡಾ.ಕೃಷ್ಣ ಭಟ್, ತಿಮ್ಮಪ್ಪ ಕೊಂಡೆ, ದೇವಿಪ್ರಸಾದ್, ವಿಶ್ವನಾಥ ಕಡ್ವಾಯಿ, ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು. ಜಗದೀಶ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಇಸ್ಲಾಂ ಧರ್ಮದಲ್ಲಿ ಕಳ್ಳತನ ಮಾಡಿದ್ದನ್ನು ತಿನ್ನಬಾರದು ಎಂಬ ಶಾಸ್ತ್ರವಿದೆ. ಯಾವ ಧರ್ಮದವರೂ ಕಳ್ಳತನ ಗೈದ ಆಹಾರವನ್ನು ತಿನ್ನಬಾರದು. ಇಂತಹ ಅಪರಾಧವನ್ನು ಯಾವ ಧರ್ಮದವರೂ ಮಾಡಬಾರದು. ಈ ಅಪರಾಧ ಮಾಡಿದವರನ್ನು ಬಂಧಿಸಿ, ಶಿಕ್ಷಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯಬಾರದು.
ಮಹಮ್ಮದ್ ಹನೀಫ್ ಅಸೈಗೋಳಿ, ಸಾಮಾಜಿಕ ದುರೀಣರು.


