UN NETWORKS
ಕೈರಂಗಳ: ಗೋಶಾಲೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ದನವನ್ನು ಕದ್ದೊಯ್ಯಲು ಪ್ರಯತ್ನಿಸುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದ ಸ್ಥಳೀಯ ಯುವಕರಿಗೆ ತಲವಾರು ಝಳಪಿಸಿ ಬೆದರಿಕೆ ಹಾಕಿ ಒಂದು ದನವನ್ನು ಕೊಂಡೊಯ್ದ ಘಟನೆ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದ ಅಮೃತಧಾರ ಗೋಶಾಲೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಕಾರಿನಲ್ಲಿ ಬಂದ ಯುವಕರ ತಂಡ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ದನವನ್ನು ಕಟ್ಟಿಹಾಕಿದ್ದ ಹಗ್ಗವನ್ನು ತಲವಾರಿನಿಂದ ಕಡಿದು ಬಿಳಿ ಬಣ್ಣದ ರಿಟ್ಜ್ ಕಾರಿಗೆ ತುಂಬಿಸುತ್ತಿದ್ದಾಗ ಎಚ್ಚೆತ್ತುಕೊಂಡ ಸ್ಥಳೀಯ ಯುವಕರು ವಿರೋಧಿಸಿದಾಗ ಅವರಿಗೆ ತಲವಾರು ಝಳಪಿಸಿ ಬೆದರಿಸಿ ದುಷ್ಕರ್ಮಿಗಳು ಕಾರಿನಲ್ಲಿ ತುಂಬಿಸಿ ಸಾಗಿಸಿದ್ದಾರೆ.
ಯುವಕರು ತಡೆಯಲು ಹೋದರೂ ˌ ಯುವಕರನ್ನು ತಲವಾರು ಝಳಪಿಸಿ ಬೆದರಿಸಿ ಒಂದು ದನವನ್ನು ಕಾರಿನಲ್ಲಿ ತುಂಬಿಸಿ ಮತ್ತೊಂದನ್ನು ತುಂಬಿಸಲಾಗದೆ ಬಿಟ್ಟು ಹೋಗಿದ್ದಾರೆ. ದನ ಸಾಗಿಸುವುದಕ್ಕೂ ಮುನ್ನ ಮತ್ತೊಮ್ಮೆ ತಲವಾರು ಝಳಪಿಸಿ ಪುನಃ ಬರುತ್ತೇವೆ ˌನಿಮ್ಮ ತಾಕತ್ತು ತೋರಿಸಿ ಅಂಥ ಪಂಥಾಹ್ವಾನ ನೀಡಿದ್ದಾರೆ ಎನ್ಬಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


