UN NETWORKS
ಕೊಣಾಜೆ: ಕೋಟಿಪದವು ಶ್ರೀ ರಾಮ ಭಜನಾ ಮಂದಿರದ 53ನೇ ವಾರ್ಷಿಕ ಏಕಹಾ ಭಜನಾ ಹಾಗೂ ರಾಮನವಮಿ ಉತ್ಸವಕ್ಕೆ ಮಂದಿರದ ಗೌರವಾಧ್ಯಕ್ಷ ದೇವಪ್ಪ ಗಟ್ಟಿ ಕಂಬ್ಲಪದವು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂದಿರದ ಅರ್ಚಕ ಹೊನ್ನಪ್ಪ ಕುಲಾಲ್, ರಾಘವೇಂದ್ರ ಭಟ್ ತಲಪಾಡಿ, ಅಧ್ಯಕ್ಷ ವಿಶ್ವನಾಥ ಗಟ್ಟಿ ಕೋಟಿಪದವು, ಮಾಜಿ ಅಧ್ಯಕ್ಷರಾದ ಸೀತಾರಾಮ ಸಣ್ಣಪದವು, ಸುಂದರ ಕೋಟ್ಯಾನ್ ತಾಕಟೆ, ಉಪಾಧ್ಯಕ್ಷ ಚಂದ್ರಹಾಸ ಬಿ., ಕಾರ್ಯದರ್ಶಿ ಉಮೇಶ್ ಗಟ್ಟಿ ಕೋಟಿಪದವು, ಜೊತೆ ಕಾರ್ಯದರ್ಶಿ ರಾಜೇಶ್ ಬೊಸ್ತುಕೋಡಿ, ಸಂಘಟನ ಕಾರ್ಯದರ್ಶಿಗಳಾದ ಮಹೇಶ್ ಗ್ರಾಮಚಾವಡಿ, ಭಾಸ್ಕರ ಕೊಟಿಪದವು, ನಾಗೇಶ್ ಗಟ್ಟಿ ಕೋಟಿಪದವು, ಪುರುಷೋತ್ತಮ ಗಟ್ಟಿ ಕೋಟಿಪದವು, ಪ್ರವೀಣ್ ಗಟ್ಟಿ ಕಂಬಳಪದವು ಲಕ್ಷ್ಮಣ ಗಟ್ಟಿ ಕೋಟಿಪದವು ಮತ್ತಿತರರು ಉಪಸ್ಥಿತರಿದ್ದರು.


