UN NETWORKS
ದೇರಳಕಟ್ಟೆ: ಕ್ಷಯ ರೋಗ ಅತ್ಯಂತ ಮಹತ್ವದ ರೋಗವಾಗಿದ್ದು, ರೋಗದ ಹೊಸ ವಿಚಾರ, ಸಂಶೋಧನೆಗಳ ಬಗ್ಗೆ ವೈದ್ಯರಲ್ಲಿ ಹೆಚ್ಚಿನ ಆಳವಾದ ಜ್ಞಾನ ಅಗತ್ಯ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ| ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಕ್ಷೇಮ ಕಾಲೇಜಿನ ಕಮ್ಯುನಿಟಿ ಮೆಡಿಸನ್ ವಿಭಾಗ ಇದರ ಆಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇಮ ವೈಸ್ ಡೀನ್ಗಳಾದ ಡಾ| ಜಯಪ್ರಕಾಶ್ ಶೆಟ್ಟಿ, ಡಾ| ಅಮೃತ್ ಮಿರಾಜ್ಕರ್, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ| ಬಾಲು ಪಿ.ಎಸ್., ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಕಮ್ಯನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ಎ.ಜಿ.ಕುಲಕರ್ಣಿ, ಕ್ಷಯ ರೋಗ ಜಿಲ್ಲಾ ಅಧಿಕಾರಿ ಡಾ| ಎಂ.ಎನ್.ಬದ್ರುದ್ದಿನ್ ಭಾಗವಹಿಸಿದ್ದರು.

ಹೆಲ್ತ್ ಆ್ಯಕ್ಷನ್ ಲರ್ನಿಂಗ್ ಇನ್ಶಿಯೇಟಿವ್ನ ತಾಂತ್ರಿಕ ಸಂಯೋಜಕಿ ಡಾ| ಶೋಭಾ ಎಕ್ಕಾ, ಕ್ಷೇಮ ಪಲ್ಮನರಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರಾಜೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಸಮುದಾಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ಸಂಜೀವ ಬಡಿಗೇರ್ ಸ್ವಾಗತಿಸಿದರು.


