UN NETWORKS
ಉಳ್ಳಾಲ: ಸಮಾಜವನ್ನು ಕಟ್ಟುವ ಕೆಲಸ ನಾವು ಒಗ್ಗಟ್ಟಿನಿಂದ ಮಾಡಬೇಕು. ಪ್ರವಾದಿಯವರ ಕಾಲದಲ್ಲಿ ಶಾಂತಿ, ಸೌಹಾರ್ದತೆ, ಏಕತೆಗೆ ಒತ್ತುಕೊಡಲಾಗಿತ್ತು. ಅದನ್ನು ನಾವು ಉಳಿಸಿಕೊಂಡು ಬರಬೇಕೆಂದು ಖಲೀಲ್ ಹುದವಿ ಅಲ್ ಮಾಲಿಕಿ ಹೇಳಿದರು.
ಅವರು ದೇರಳಕಟ್ಟೆಯಲ್ಲಿ ಭಾನುವಾರ ಸುನ್ನಿ ಸಂದೇಶ ಮತ್ತು ಎಸ್ಕೆ ಎಸ್ಸೆಸೆಫ್ ರೆಂಜಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಮಾದಕ ದ್ರವ್ಯದ ವಿರುದ್ಧ ಜನಾಂದೋಲನ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಚಿವ ಯು.ಟಿ ಖಾದರ್ ಮಾತನಾಡಿ ಶುಭಹಾರೈಸಿದರು.
ಶಂಸುದ್ದೀನ್ ತಂಙಳ್ ಲಕ್ಷದ್ವೀಪ್ ದುವಾ ನೆರವೇರಿಸಿದರು. ಎಂ.ಎ. ಅಬ್ದುಲ್ಲ ಬೆಳ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಹೈದರ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿತಾರ್ ಅಬ್ದುಲ್ ಮಜೀದ್ ಕಣ್ಣೂರು ಮಾತನಾಡಿದರು. ಕಣಚೂರು ಮೋನು, ಇಸ್ಮಾಯಿಲ್ ಹಾಜಿ, ಕುಂಬಳೆ ಕಾಸಿಂ ಉಸ್ತಾದ್, ಅಬ್ದುಲ್ ಖಾಸರ್ ಅಲ್ ಕಾಸಿಮಿ, ಅಬ್ದುಲ್ ರಹ್ಮಾನ್ ದಾರಿಮಿ, ಇಬ್ರಾಹಿಂ ಬಾಖವಿ ಕೆಸಿರೋಡ್, ಸುಲೈಮಾನ್ ಫೈಝಿ ಕನ್ಯಾನ, ಮೊಯಿದಿನಬ್ಬ ಹಾಜಿ, ಅಬ್ಬಾಸ್ ಹಾಜಿ, ಕಾಸಿಂ ದಾರಿಮಿ, ಅಬ್ಬಾಸ್ ಹಾಜಿ ಆನೇಕಲ್, ಶರೀಫ್ ಅರ್ಶದಿ, ಹೈದರ್ ಪರ್ತಿಪ್ಪಾಡಿ, ಮೊದಲಾದವರು ಉಪಸ್ಥಿತರಿದ್ದರು.

ಮುಸ್ತಫ ಫೈಝಿ ಕಿನ್ಯ ಸ್ವಾಗತಿಸಿದರು. ಎ.ಎಚ್. ನೌಷಾದ್ ಸೂರಲ್ಪಾಡಿ ವಂದಿಸಿದರು.


