UN NETWORKS
ಉಳ್ಳಾಲ: ಉಳ್ಳಾಲ ಪುರಸಭಾ ವ್ಯಾಪ್ತಿಯ ಅಬ್ಬಂಜರ ಪ್ರದೇಶದ ದಲಿತ ಕಾಲೊನಿಯ ನಿವಾಸಿಗಳು ಶುದ್ಧ ಕುಡಿಯುವ ನೀರಿಗೆ ಆಗ್ರಹಿಸಿ ಹಾಗೂ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬವನ್ನು ತೆರವುಗೊಳಿಸಲು ಒತ್ತಾಯಿಸಿ ಇಂದು DYFI ಹಾಗೂ ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಗೇಟು ಮುಚ್ಚಿದರು: ದಲಿತರಿಗೆ ಕುಡಿಯಲು ಯೋಗ್ಯವಾದ ನೀರು ಕೊಡಿ ಎಂದು ಕೇಳಿ ಹೋರಾಟ ನಡೆಸಲು ಬಂದ ದಲಿತರನ್ನು ಪುರಸಭೆಯ ಆಡಳಿತ ಪುರಸಭೆಯ ಆವರಣ ಪ್ರವೇಶಿಸದಂತೆ ಗೇಟನ್ನು ಹಗ್ಗದಿಂದ ಕಟ್ಟಿದ್ದು ಇದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಒಳ ಪ್ರವೇಶಿಸಿದರು.
ಅಧ್ಯಕ್ಷರ ಕಛೇರಿಗೆ ಪ್ರತಿಭಟನೆ ಶಿಫ್ಟ್: ಪ್ರತಿಭಟನಾ ನಿರತರು ಪುರಸಭೆಯ ಅಧ್ಯಕ್ಷರು ಸ್ಥಳಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರೂ ಸ್ಥಳಕ್ಕೆ ಆಗಮಿಸದೇ ಇದ್ದ ಕಾರಣ ನೇರವಾಗಿ ಅಧ್ಯಕ್ಷರ ಕಛೇರಿಗೆ ನುಗ್ಗಿದ್ದು ಈ ಸಂಧರ್ಭ ಪೊಲೀಸರು ತಡೆದರೂ ಯಶಸ್ವಿಯಾಗಲಿಲ್ಲ.
ಪ್ರತಿಭಟನೆಯ ನೇತ್ರತ್ವವನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ CPIM ಅಭ್ಯರ್ಥಿ ನಿತಿನ್ ಕುತ್ತಾರ್ ವಹಿಸಿದ್ದರು.

ಪ್ರತಿಭಟನೆಯಲ್ಲಿ DYFI ಅಬ್ಬಂಜರ ಘಟಕ ಅಧ್ಯಕ್ಷರಾದ ಪುರಂದರ, ಕಾರ್ಯದರ್ಶಿ ಅಭಿಷೇಕ್, ಉಪಾಧ್ಯಕ್ಷರಾದ ರೋಹಿದಾಸ್ ಅಬ್ಬಂಜರ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರಾದ ನಾರಾಯಣ, ಸುರೇಶ್ , ಇಬ್ರಾಹಿಂ, ಮಹಿಳಾ ಮುಖಂಡರಾದ ಪದ್ಮಾವತಿ ಶೆಟ್ಟಿ, ವಿಲಾಶಿನಿ. ಮುಂತಾದವರು ಉಪಸ್ಥಿತಿರಿದ್ದರು.


