UN NETWORKS
ತೊಕ್ಕೊಟ್ಟು : ಉಳ್ಳಾಲದಲ್ಲಿ ಕಬಡ್ಡಿ ಸೇರಿದಂತೆ ಕ್ರೀಡಾ ಚಟುವಟಿಕೆಗಳಿಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದ್ದು, ಉತ್ತಮ ಸ್ಥಳಾವಕಾಶ ಸಿಕ್ಕಿದಲ್ಲಿ ಉಳ್ಳಾಲ ನಗರ ಪಂಚಾಯತ್ ಬೆಂಬಲ ನೀಡಲಿದೆ ಎಂದು ಹುಸೈನ್ ಕುಂಞಮೋನು ಅಭಿಪ್ರಾಯಪಟ್ಟರು.
ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ತೊಕ್ಕೊಟ್ಟು ಸಿಟಿ ಬಸ್ಸ್ಯ್ಟಾಂಡ್ ಬಳಿ ಪುರುಷರ ಮತ್ತು ಮಹಿಳೆಯರ ದ.ಕ.ಜಿಲ್ಲಾ ಕಬಡ್ಡಿ ಚಾಂಪಿಯನ್ಶಿಪ್ 2018ಗೆ ಚಾಲನೆ ನೀಡಿ ಮಾತನಾಡಿದರು.
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್ ಕಬಡ್ಡಿ ಚಾಂಪಿಯನ್ಶಿಪ್ಗೆ ಚಾಲನೆ ನೀಡಿದರು.
ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಮಹಾ ಪೋಷಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಮತ್ತು ಪೋಷಕ ಹರೀಶ್ ಕುಮಾರ್ ಕುತ್ತಾರ್ ಕ್ರೀಡಾಂಗಣಕ್ಕೆ ಚಾಲನೆ ನೀಡಿದರು.
ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಅಧ್ಯಕ್ಷ ಸುರೇಶ್ ಭಟ್ನಗರ, ಅಸೋಸಿಯೇಷನ್ನ ಜಿಲ್ಲಾ ಕಾರ್ಯಾದ್ಯಕ್ಷ ರತನ್ ಕುಮಾರ್ ಶೆಟ್ಟಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ದೇಹದಾಡ್ಯಪಟು ಭಾಸ್ಕರ ತೊಕ್ಕೊಟ್ಟು, ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪೋಷಕರಾದ ಚಂದ್ರಹಾಸ ಅಡ್ಯಂತಾಯ, ಬಾಬು ಕಿನ್ಯ, ಪ್ರ. ಕಾರ್ಯದರ್ಶಿ ರೂಹನ್ ತೊಕ್ಕೊಟ್ಟು, ಕೋಶಾಧಿಕಾರಿ ದೇವದಾಸ್ ಶ್ರೀಯಾನ್, ಸಮಿತಿಯ ವಿಜಯ ಪುತ್ರನ್, ಏಕಲವ್ಯ ಪ್ರಶಸ್ತಿ ಪುರಸ್ಕೃತ ಕಬಡ್ಡಿಪಟು ಉದಯ ಚೌಟ ಭಾಗವಹಿಸಿದ್ದರು.
ಅಸೋಸಿಯೇಶನ್ನ ಜಿಲ್ಲಾ ಉಪಾಧ್ಯಕ್ಷ ಹಾಗೂ ಗ್ರಾಮಾಂತರದ ಪ್ರಭಾರಿ ಕೆ.ಟಿ. ಸುವರ್ಣ ಸ್ವಾಗತಿಸಿದರು. ಪ್ರ, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಪ್ರಸ್ತಾವನೆಗೈದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ವಂದಿಸಿದರು.



