UN NETWORKS
ಕುತ್ತಾರು : ಪ್ರಧಾನಿ ಮೋದಿಯವರ ಕಲ್ಪನೆಯಂತೆ ಸ್ವಚ್ಛ ಭಾರತ ಶ್ರೇಷ್ಟ ಭಾರತ ಅನ್ನುವ ಧ್ಯೇಯ ವಾಕ್ಯದಂತೆ ಕುತ್ತಾರಿನಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ, ಶೌಚಾಲಯ ನಿರ್ಮಾಣಕ್ಕೆ ಕಾರಣವಾದ ಜಿ.ಪಂ ಹಾಗೂ ಪಂ. ಆಡಳಿತ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.
ಅವರು ಕುತ್ತಾರು ಜಂಕ್ಷನ್ನಿನಲ್ಲಿ ಮುನ್ನೂರು ಗ್ರಾ.ಪಂ ನ ಸಂಪೂರ್ಣ ಸ್ವಚ್ಛತಾ ಅನುದಾನದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹಲವು ವರ್ಷಗಳ ಬೇಡಿಕೆ ಹಾಗೂ ಸಾರ್ವಜನಿಕರ ತೊಂದರೆಗೆ ಶೌಚಾಲಯ ನಿರ್ಮಾಣದ ಮೂಲಕ ಮುಕ್ತಿ ಸಿಕ್ಕಿದೆ. ವಾಣಿಜ್ಯ, ವಸತಿ ಹಾಗೂ ಪ್ರಯಾಣಿಕರು ತಂಗುವ ಪ್ರದೇಶ ಕುತ್ತಾರ್ ಆಗಿದೆ. ಅಭಿವೃದ್ಧಿ ಪಡೆಯುತ್ತಿರುವ ಜಂಕ್ಷನ್ನಿನಲ್ಲಿ ಶೌಚಾಲಯವಿಲ್ಲದೆ ಸಾರ್ವಜನಿಕರು ಬಹಳ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಮುನ್ನೂರು ಗ್ರಾಮ ಪಂಚಾಯತ್ ಸಾರ್ವಜನಿಕ ಶೌಚಾಲಯವನ್ನು ಆರಂಭಿಸಿದೆ. ಇದನ್ನು ಸರಿಯಾಗಿ ಉಪಯೋಗಿಸಿ ನಿರ್ವಹಿಸುವ ಜವಾಬ್ದಾರಿಯೂ ಸಾರ್ವಜನಿಕರದ್ದಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪ.ಆರ್.ಶೆಟ್ಟಿ, ಗುತ್ತಿಗೆದಾರ ಮಾಧವ ಕಿನ್ಯಾ, ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಸದಸ್ಯರಾದ ಕಿರಣ್ ಶೆಟ್ಟಿ, ಬಿಜೆಪಿ ಮುಖಂಡ ಹರಿಯಪ್ಪ ಸಾಲ್ಯಾನ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುದೇಶ್ ಕುಮಾರ್ ದೇರೆಬೈಲ್ , ಸ್ಥಳೀಯ ಅಂಗಡಿ ಮಾಲೀಕರು, ರಿಕ್ಷಾ ಚಾಲಕರು ಉಪಸ್ಥಿತರಿದ್ದರು.


