UN NETWORKS
ಉಳ್ಳಾಲ: ಸ್ಥಳೀಯ ಸ್ಥಳದಾನಿಗಳು ರಸ್ತೆ ನಿರ್ಮಾಣಕ್ಕೆ ಸ್ಥಳ ನೀಡಿದ್ದರಿಂದ ಉಳಿಯ ಪಡ್ಡಾಯಿ ಪ್ರದೇಶದ ಜನರಿಗೆ ರಸ್ತೆ ಸಂಪರ್ಕ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಉಳಿಯದಲ್ಲಿ ಪಡ್ಡಾಯಿ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಉಳ್ಳಾಲ ನಗರಸಭೆಗೆ ಶಾಸಕರ ನಿಧಿಯಿಂದ ಮತ್ತು ನಗರೊತ್ಥಾನ ಅನುದಾನದಲ್ಲಿ ಹಣ ಬಿಡುಗಡೆಯಾಗಿದ್ದು, ಉಳಿಯಕ್ಕೆ ಸುಮಾರು ಒಂದು ಕೋಟಿ ರೂ, ಅನುದಾನ ಇದಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಅಡ್ಡ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಉಳ್ಳಾಲ ನಗರಸಭೆ ಸದಸ್ಯ ಸುಂದರ್ ಉಳಿಯ, ರಾಜೇಶ್ ಗುರಿಕಾರ, ಮಧು ಜೀವನ್, ಪ್ರೇಮ್ ಪ್ರಕಾಶ್ ಡಿ.ಸೋಜ, ವೀಣಾ ಡಿ.ಸೋಜ, ಶೈನಿ ಡಿ.ಸೋಜಾ, ಪಿಯೂಷ್ ಮೊಂತೇರೋ, ಸಮದ್ ಬೋಳಾರ, ಲೂಯಿಸ್ ಡಿಸೋಜ, ಹೆರಾಲ್ಡ್ ಡಿ.ಸೋಜ, ಜಾನ್ ಡಿ,ಸೋಜ, ಲ್ಯಾನ್ಸಿ ಡಿ.ಸೋಜ, ರೊನಾಲ್ಡ್ ಡಿ.ಸೋಜ, ರಾಜೇಶ್ ಬಂಡಸಾಲೆ, ಜೋಯ್ಸ್ ಫೆರ್ನಾಂಡೀಸ್, ರೋಜ್ಲಿನ್ ಡಿ,ಸೋಜ, ಸಿಪ್ರಿಯನ್ ಡಿ,ಸೋಜ, ಐರಿನ್ ಮೊಂತೇರೋ, ಎಡ್ವರ್ಡ್ ಮೊಂತೇರೊ, ಹಿಲ್ಡಾ ಡಿ.ಸೋಜ, ಜೋಸೆಫ್ ಮೊಂತೇರೊ, ಝೀನಾ ಮೊಂತೇರೊ, ರೇಮಂಡ್ ಮೊಂತೇರೊ, ರೊನಾಲ್ಡ್ ಫೆರ್ನಾಂಡೀಸ್ ಉಪಸ್ಥಿತರಿದ್ದರು.


