Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೊಣಾಜೆ

ಕೊಣಾಜೆ ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

UllalaVaniBy UllalaVaniMarch 8, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಣಾಜೆ: ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿಯೋರ್ವರು ಸರಕಾರದ ಸವಲತ್ತಿನಿಂದ ವಂಚಿತರಾಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿಂಗಳ ಹಿಂದೆ ನಡೆದಿದ್ದು, ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳೆಲ್ಲರೂ ಆತಂಕಗೊಂಡು ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿ ಸಂತೋಷ್ ಹೇಳಿದ್ದಾರೆ.

ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ದಲಿತ ವಿರೋಧಿ ಆಡಳಿತವನ್ನು ಖಂಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಎದುರುಗಡೆ ಗುರುವಾರ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರಕಾರದಿಂದ ಸಿಗುವ ಸವಲತ್ತುಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಕೊಡಿಸುವಲ್ಲಿ ವಿಫಲವಾಗಿದೆ. ಹಲವು ಬಾರಿ ಬೇಡಿಕೆ ಮುಂದಿಟ್ಟರೂ ಸಕಾರಾತ್ಮಕ ಸ್ಪಂಧನೆ ದೊರೆಯದೆ ಕೇವಲ ವಿಶ್ವಾಸಗಳು ಮಾತ್ರ ಸಿಕ್ಕಿದೆ. ಪ್ರತಿ ಭೇಟಿಯ ದಾಖಲೆಗಳನ್ನು ಇಟ್ಟುಕೊಂಡು ಹೋರಾಟಕ್ಕೆ ಮುಂದಾಗಿದ್ದೇವೆ. ಯಾವುದೇ ಒಳಮರ್ಮ, ಹುನ್ನಾರವಿಲ್ಲದ ಪ್ರತಿಭಟನೆ ಇದಾಗಿದೆ. ಮುಖ್ಯಮಂತ್ರಿಗಳು ದಲಿತರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಸೂಚಿಸುತ್ತಿದ್ದರೂ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅದು ಪೂರೈಕೆಯಾಗುತ್ತಿಲ್ಲ. ಸರಕಾರ 16,000 ಕೋಟಿ ಅನುದಾನ ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಂಜೂರುಗೊಳಿಸಿದ್ದರೂ, ಅದರಲ್ಲಿ ಸಮಾಜ ಕಲ್ಯಾಣ ಇಲಾಖೆ ಕೇವಲ 4,500 ಕೋಟಿ ರೂ. ಅನುದಾನವನ್ನು ಮಾತ್ರ ವ್ಯಯಿಸಿದೆ.

ಮಂಗಳೂರು ವಿ.ವಿಯಲ್ಲಿ ಲ್ಯಾಪಟಾಪ್ ಕೊಡಲು ಅನುದಾನವಿಲ್ಲವೆಂದು ಹೇಳುತ್ತಿದ್ದು, ಇದರಿಂದ ಸಮಾಜ ಕಲ್ಯಾಣ ಇಲಾಖೆ ಜತೆಗೆ ಮಂಗಳೂರು ವಿ.ವಿ ಆಡಳಿತ ಸಂಪರ್ಕವೇ ಇಲ್ಲದಂತೆ ವರ್ತಿಸುತ್ತಿದೆ. ಸಂಶೋಧನಾ ವಿದ್ಯಾರ್ಥಿಗೆ ನಾಲ್ಕು ವರ್ಷಗಳಿಗೆ ಫೆಲೋಶಿಪ್ ನೀಡಲಾಗುತ್ತಿದ್ದು, ಅದನ್ನು ಐದು ವರ್ಷಗಳಿಗೆ ವಿಸ್ತರಿಸಲು ಮನವಿಯನ್ನು ಮಾಡುತ್ತಾ ಬಂದಿದ್ದರೂ ಅದು ಈಡೇರಿಲ್ಲ. ಮಂಗಳೂರು ವಿ.ವಿ ಬಿಟ್ಟು ಇತರೆ ವಿ.ವಿ ಯವರು ಸಂಶೋಧನೆ ಮಾಡುವಂತಿಲ್ಲ. ಅಲ್ಲದೆ ಉದ್ಯೋಗ ನಿರ್ವಹಿಸುವಂತಿಲ್ಲ ಅನ್ನುವ ಕಾನೂನು ಜಾರಿ ಮಾಡುವ ಮೂಲಕ ವಿದ್ಯಾರ್ಥಿಗಳ ಒಗ್ಗಟ್ಟು ಮುರಿಯುವ ಪ್ರಯತ್ನ ನಡೆದಿದೆ. ವಿದ್ಯಾರ್ಥಿಯೋರ್ವ ತನಗೆ ಸಿಗಬೇಕಾದ ಸೌಲಭ್ಯಗಳು ದೊರೆಯದೆ ಬದುಕಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೂ ಯತ್ನಿಸಿದ ಪ್ರಕರಣದಿಂದ ಬೆದರಿ ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯಬೇಕಾಯಿತು ಎಂದರು.

ಒಂದೂವರೆ ವರ್ಷವಾದರೂ ಸೌಲಭ್ಯವಿಲ್ಲ : ಯೋಗ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿ ರಮೇಶ್ ಮಾದಾರ್ ಕಳೆದ ಒಂದೂವರೆ ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದರೂ ಈವರೆಗೂ ಲ್ಯಾಪ್ ಟಾಪ್ ಆಗಲಿ, ಫೆಲೋಶಿಪ್ ಕೂಡಾ ದೊರೆತಿಲ್ಲ. ಮಾರ್ಗದರ್ಶಕರು ಸರಿಯಾದ ಸಲಹೆ ನೀಡದೆ, ಸಿಗುವ ಸೌಲಭ್ಯಗಳು ಸಿಗದಂತಾಗಿದೆ. ಮನೆಯಲ್ಲೂ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಹಲವು ಸಮಯಗಳಿಂದ ವಿ.ವಿ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಸ್ಪಂಧನೆ ದೊರೆತಿಲ್ಲ . ಇದರಿಂದ ಅವರ ಭವಿಷ್ಯವೇ ನಶಿಸಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು.

ಸಂಶೋಧನ ವಿದ್ಯಾರ್ಥಿ ಶಿವರಾಜ್ ಮಾತನಾಡಿ ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳ ಸೇರ್ಪಡೆ ಸಂದರ್ಭ ಇತರೆ ವಿ.ವಿಗಳಲ್ಲಿ ಶುಲ್ಕ ಪಡೆಯದೇ ಇದ್ದರೂ, ಮಂಗಳೂರು ವಿ.ವಿಯಲ್ಲಿ ಪಡೆಯಲಾಗುತ್ತಿದೆ. ಆದರೆ ಅದರ ಮರುಪಾವತಿ ಕಳೆದ ಎರಡು ವರ್ಷಗಳಿಂದ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲಭಿಸಿಲ್ಲ. ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶನಗಳಿಗೆ ಮಂಗಳೂರು ವಿ,.ವಿ ಆಡಳಿತ ಓಗೊಡದೇ ಇರುವುದರಿಂದ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಹರೀಶ್, ವೆಂಕಟೇಶ್, ಯೋಗೀಶ್, ದಿವ್ಯಾ ಸಾಲ್ಯಾನ್, ಸುರೇಖಾ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನಾ ಜಾಥಾ ಮಂಗಳೂರು ವಿಶ್ವವಿದ್ಯಾನಿಲಯ ಕಚೇರಿಯಿಂದ ಆಡಳಿತ ಕಚೇರಿವರೆಗೆ ನಡೆಯಿತು.

ಕುಲಪತಿಗಳ ಆಗಮನಕ್ಕಾಗಿ 20 ನಿಮಿಷ ಪಟ್ಟು ಬಿಡದ ವಿದ್ಯಾರ್ಥಿಗಳು !
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಂಗಳೂರು ವಿ.ವಿ ಕುಲಪತಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಕುಲಸಚಿವ ಡಾ| ಬಿ.ಯಸ್.ನಾಗೇಂದ್ರ ಪ್ರಕಾಶ್ ಸ್ಥಳದಲ್ಲಿ ನಿಂತು ವಿದ್ಯಾರ್ಥಿಗಳನ್ನು ಸಮಾಧಾನಿಸಲು ಮುಂದಾದರೂ, ಕುಲಪತಿಗಳು ಬಾರದೇ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಮಂಗಳೂರು ವಿ.ವಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುಮಾರು 20 ನಿಮಿಷಗಳವರೆಗೆ ವಿದ್ಯಾರ್ಥಿಗಳು ಆಡಳಿತ ಸೌಧದ ಎದುರು ಕುಳಿತು ಪಟ್ಟು ಹಿಡಿದ ನಂತರ ಸ್ಥಳಕ್ಕೆ ಕುಲಪತಿ. ಪ್ರೊ.ಕೆ.ಬೈರಪ್ಪ ಭೇಟಿ ನೀಡಿದರು. ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳ ಶೇ.50 ರಷ್ಟು ಬೇಡಿಕೆಗಳನ್ನು ಈಡೇರಿಸಲಾಗಿದೆ. ಇನ್ನೇನು ಆದೇಶ ಹೊರಡಿಸಲಾಗುವುದು. ಉಳಿದ ಮನವಿಯನ್ನು ಚರ್ಚಿಸಿ ಜಾರಿಗೆ ತರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಮತ್ತೆ ವಿದ್ಯಾರ್ಥಿಗಳು ಬೇಡಿಕೆಗಳನ್ನು ಹೇಳುತ್ತಿದ್ದಂತೆಯೇ ಕುಲಪತಿಗಳು ವಾಪಸ್ಸು ತೆರಳಿದರು. ಆದರೆ ಕುಲಪತಿಗಳ ಸ್ಪಂಧನೆ ವಿದ್ಯಾರ್ಥಿಗಳಿಗೆ ಸಮಾಧಾನಕರವಾಗಲಿಲ್ಲ.

ಹಕ್ಕೊತ್ತಾಯಗಳು
*ಸಂಶೋಧನಾ ವಿದ್ಯಾರ್ಥಿಗಳ ದಾಖಲಾತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿ ಕೈಬಿಡಬೇಕು.

*ಮಂಗಳೂರು ವಿವಿಯಲ್ಲಿ ಪೂರ್ಣಕಾಲಿಕ ನೆಲೆಯಲ್ಲಿ ಸಂಶೋಧನೆ ಮಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಸಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಐದು ವರ್ಷಗಳ ಅವಧಿಯ ಶಿಷ್ಯವೇತನವನ್ನು ನೀಡುವುದು.

*ವಿವಿಯ ಯೋಗವಿಜ್ಞಾನ ಮತ್ತು ಮಾನವಪ್ರಜ್ಞೆ ವಿಭಾಗದಲ್ಲಿ 2016-17ನೇ ಸಾಲಿನಲ್ಲಿ ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿಯಾಗಿ ಪ್ರವೇಶ ಪಡೆದು ಪೂರ್ಣಕಾಲಿಕಾ ನೆಲೆಯಲ್ಲಿ ಸಂಶೋಧನೆ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದರಮೇಶ ಮಾದರ ಅವರಿಗೆ ಮಾಸಿಕ ಸಂಶೋಧನೆ ಶಿಷ್ಯವೇತನ ಮತ್ತು ಲ್ಯಾಪ್‍ಟ್ಯಾಪ್ ನೀಡುವ ಸೌಲಭ್ಯವನ್ನು ಕ್ಷುಲ್ಲಕ ಕಾರಣಕ್ಕೆ ತಡೆಹಿಡಿದಿರುವುದು ವೈಯಕ್ತಿಕವಗಿ ವಿದ್ಯಾರ್ಥಿಗೂ ದಲಿತ ಸಮುದಾಯ್ಕೂ ಮಾಡುತ್ತಿರುವ ಪಿತೂರಿ.

*ರಮೇಶ ಮಾದರಿಗೆ ಸಿಗಬೇಕಾದ ಶಿಷ್ಯವೇತನ ಲ್ಯಾಪ್‍ಟ್ಯಾಪ್ ಸೌಲಭ್ಯ ಒದಗಿಸುವವ ಮೂಲಕ ಸಂಶೋಧನೆಗೆ ಸಹಕರಿಸುವುದು.
*2017-18ನೇ ಸಾಲಿನ ವಿವಿಧ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾವತಿರಿಸುವ ದಾಖಲಾತಿ ಪ್ರವೇಶ ಶುಲ್ಕ ಹಾಗೂ ವಸತಿ ಶುಲ್ಕ ಶೀಘ್ರದಲ್ಲಿಯೇ ಮರುಪಾವತಿಸಬೇಕು.

*ಮುಂದಿನ ಸಾಲಿನಿಂದ ವಿವಿಧ ವಿಭಾಗದಲ್ಲಿ ಅಧ್ಯಯನ ನಡೆಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ದಾಖಲಾತಿ ಪ್ರವೇಶ ಸಂಬಂಧಿ ಯಾವುದೇ ಶುಲ್ಕವನ್ನು ಪಡೆಯದೆ ಬದಾಗಿ ನೇರವಾಗಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿವಿಶ್ವವಿದ್ಯಾಲಯ ಪಡೆದುಕೊಳ್ಳುವುದು.

*2017-18ನೇ ಸಾಲಿನ ವಿಸ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಪ್ರಥಮ ವರ್ಷದ ಸ್ನಾತಕ ಪೂರ್ವ ಮತ್ತು ಸ್ನಾತಕೋತ್ತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೂಡಲೇ ಲ್ಪಾಪ್ಟ್ಯಾಪ್ ವಿತರಿಸಬೇಕು.

*ಲ್ಯಾಪ್‍ಟ್ಯಾಪ್ ವಿತರಿಸುವ ಸಂದರ್ಭ ಬರೆಸಿಕೊಳ್ಳುವ ಮುಚ್ಚಳಿಕೆ ಪತ್ರ ರದ್ದುಗೊಳಿಸುವುದು.

*ವಿವಿಯಲ್ಲಿಪ್ರತ್ಯೇಕ ವಸತಿ ನಿಲಯ ನಿರ್ಮಿಸಬೇಕು.

*ವಿವಿಯಲ್ಲಿ ದೈಹಿಕ ಶಿಕ್ಷಣ ಬಿಪಿಎಡ್ ಕೋರ್ಸ್ ಮುಂದುವರಿಸಬೇಕು.

*ಕುಂದುಕೊರತೆಗಳ ಕುರಿತಾಗಿ ಪರಿಶಿಷ್ಟ ಜಾತಿ ಮತ್ತು ಪರಿಸಿಷ್ಟ ಪಂಗಡದ ಸಮಾಲೋಚನಾ ಸಭೆ ಆರು ತಿಂಗಳಿಗೊಮ್ಮೆ ಕರೆಯಬೇಕು.
*ವಿವಿ ಆವರಣದಲ್ಲಿ ಡಾ. ಬಿ.ಆರ್. ಆಂಬೇಡ್ಕರ್ ಭವನ ನಿರ್ಮಾಣ.

*ದಾರ್ಶನಿಕರ ಹುಟ್ಟುಹಬ್ಬ ಆಚರಣೆ ಆಯಾ ದಿನದಲ್ಲೇ ನಡೆಸಬೇಕು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ 5ನೇ ವರ್ಷದ ‘ಆಟಿಡೊಂಜಿ ಕೂಡಾಟಿಕೆ’ಗೆ ಚಾಲನೆ

August 11, 2026

ನೀಟ್–ಜೆಇಇ ಪರೀಕ್ಷೆಯಲ್ಲಿ ತಲಪಾಡಿಯ ಹಾದಿಯ ಮರಿಯಮ್ ಸಂಶೀರ್ ಸಾಧನೆ

August 10, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ..!! ಕೂದಲೆಳೆಯ ಅಂತರದಲ್ಲಿ ತಪ್ಪಿದ ಅನಾಹುತ

By UllalaVaniAugust 11, 20260

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ…

ಮಗುವಿಗೆ ಮೊದಲ ಆರು ತಿಂಗಳು ಎದೆ ಹಾಲು ಮಾತ್ರ ನೀಡಬೇಕು: ಶ್ರೀಧರ್‌ ಎಂ.ಎಸ್‌

August 11, 2026

“ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬಂಧ”-ಉಪನ್ಯಾಸಕಿ ಪಲ್ಲವಿ ರಾಜೇಶ್

August 11, 2026

ಉತ್ಸವಗಳು ವ್ಯಕ್ತಿಯ ಮನಸ್ಸಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಹೆಚ್ಚಿಸುತ್ತದೆ – ರವಿ ರೈ ಫಜೀರು

August 11, 2026
1 2 3 … 2,055 Next
Automatic YouTube Gallery

ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್

ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಅಶೋಕ್
"ತುಳುವರಿಗೂ ಪ್ರಕೃತಿಗೂ ಅವಿನಾಭಾವ ಸಂಬoಧ"-ಉಪನ್ಯಾಸಕಿ ಪಲ್ಲವಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್
Now Playing
ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್
ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ...
ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಅಶೋಕ್
"ತುಳುವರಿಗೂ ಪ್ರಕೃತಿಗೂ ಅವಿನಾಭಾವ ಸಂಬoಧ"-ಉಪನ್ಯಾಸಕಿ ಪಲ್ಲವಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೆ.6,7 ರಂದು ಬಾಕ್ರಬೈಲ್‌ನಲ್ಲಿ 10ನೇ ವರ್ಷದ ಮೊಸರು ಕುಡಿಕೆ ಉತ್ಸವ
Now Playing
ಸೆ.6,7 ರಂದು ಬಾಕ್ರಬೈಲ್‌ನಲ್ಲಿ 10ನೇ ವರ್ಷದ ಮೊಸರು ಕುಡಿಕೆ ಉತ್ಸವ
ಶಿವಶಕ್ತಿ ಫ್ರೆಂಡ್ಸ್, ಬಾಕ್ರಬೈಲು ವತಿಯಿಂದ;ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ...
ಶಿವಶಕ್ತಿ ಫ್ರೆಂಡ್ಸ್, ಬಾಕ್ರಬೈಲು ವತಿಯಿಂದ;ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 10ನೇ ವರ್ಷದ ಮೊಸರು ಕುಡಿಕೆ ಉತ್ಸವ

ಸೆ.6,7ರಂದು ಬಾಕ್ರಬೈಲು ಮೂಡಾಯಿಬೆಟ್ಟು ಮೈದಾನದಲ್ಲಿ ಆಯೋಜನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version