UN NETWORKS
ಉಳ್ಳಾಲ: ತೊಕ್ಕೊಟ್ಟು ಬಳಿ ಸ್ಕೂಟರೊಂದಕ್ಕೆ ಟಿಪ್ಪರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಪವಾಡಸದೃಶ್ಯವಾಗಿ ಪಾರಾದ ಘಟನೆ ಮಂಗಳವಾರ ನಡೆದಿದ್ದು, ಘಟನೆ ರಾಜಿಯಲ್ಲಿ ಇತ್ಯರ್ಥಗೊಂಡಿದ್ದರಿಂದ ಪ್ರಕರಣ ದಾಖಲಾಗಿಲ್ಲ.
ಪಜೀರು ಪಾನೆಲ ನಿವಾಸಿ ಶಾಹಿದ್ ಪವಾಡಸದೃಶ್ಯವಾಗಿ ಪಾರಾದವರು. ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕನ ಆರೋಗ್ಯ ವಿಚಾರಿಸಿ ಕೊಣಾಜೆ ಕಡೆ ಸ್ಕೂಟರ್ನಲ್ಲಿ ಸಾಗುತ್ತಿದ್ದಾಗ ತೊಕ್ಕೊಟ್ಟು ಬಸ್ ನಿಲ್ದಾಣದಕ್ಕೆ ಬರುವ ಕೊಣಾಜೆ ರಸ್ತೆಯಲ್ಲಿ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಮೊಣಕಾಲಿನ ಗಾಯದೊಂದಿಗೆ ಪವಾಡಸದೃಶ್ಯವಾಗಿ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಟ್ರಾಫಿಕ್ ಪೊಲೀಸರು ಆಗಮಿಸಿದ್ದು, ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.


