UN NETWORKS
ಮಂಗಳೂರು : ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ ಎಸ್ವೈಎಸ್, ಎಸ್ಕೆಎಸ್ಎಸ್ಎಫ್ ಕಿನ್ಯ ಶಾಖೆ ಇದರ ವತಿಯಿಂದ ಕಿನ್ಯ ಸಿ. ಎಚ್. ನಗರದಲ್ಲಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಬಾತಿಷ್ ತಂಙಳ್ ಉದ್ಘಾಟಿಸಿದರು.
ಸಯ್ಯಿದ್ ಅಮೀರ್ ತಂಙಳ್ ಮಜ್ಲಿಸುನ್ನೂರ್ಗೆ ನೇತೃತ್ವ ನೀಡಲಿದರು. ಸಯ್ಯಿದ್ ಬಾಫಖಿ ತಂಙಳ್ ಕೇರಳ ನವೀಕರಣ ಕಟ್ಟಡ ಉದ್ಘಾಟನೆ ಹಾಗೂ ದುಆ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಮೊದಲಿಗೆ ಕಿನ್ಯ ಕೇಂದ್ರ ಮಸೀದಿ ಮುದರ್ರಿಸರಾದ ಅಬ್ದುಲ್ ಫತ್ತಾಹ್ ಫೈಝಿ ಕಿನ್ಯ ದರ್ಗಾ ಝಿಯಾರತ್ಗೆ ನೇತೃತ್ವ ನೀಡಿದರು.
ಧ್ವಜಾರೋಹಣವನ್ನು ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ ಇದರ ಕೋಶಾಧಿಕಾರಿ ಕೆ.ಐ. ಶೇಖಬ್ಬ ಹಾಜಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರೀಯ ಎಸ್ವೈಎಸ್ ಕಾರ್ಯದರ್ಶಿಯಾದ ಹಾಜಿ ಅಬ್ದುಸಮದ್ ಪೂಕೋಟೂರು, ಖಾಸಿಂ ದಾರಿಮಿ, ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಹಾರೂನ್ ಅಹ್ಸನಿ, ಭಾಷಣ ಮಾಡಿದರು. ಸಮಾರಂಭದಲ್ಲಿ ಇಬ್ರಾಹಿಂ ಬಾಖವಿ ಕೆ.ಸಿ. ರೋಡ್, ಶರೀಫ್ ಅರ್ಶದಿ ದೇರಳಕಟ್ಟೆ, ಅಲೀ ದಾರಿಮಿ, ಫಾರೂಕ್ ದಾರಿಮಿ, ಹನೀಫ್ ದಾರಿಮಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಎಸ್.ಐ. ಅಬ್ಬಾಸ್ ದಾರಿಮಿ, ಹಾಫಿಳ್ ಝೈನ್ ಸಖಾಫಿ ಉಳ್ಳಾಲ, ಹಂಝದಿ ಸಾಲೆತ್ತೂರು, ಮಕ್ದೂಮಿ ಉಳ್ಳಾಲ, ಆಸಿಫ್ ಅಬ್ದುಲ್ಲ ಉಳ್ಳಾಲ, ಟಿ.ಎಂ. ಮುಹಮ್ಮದ್, ಅಬ್ದುಲ್ ಗೈಸ್, ಆರಿಫ್ ಎಂ. ಎನ್., ಅಬ್ದುಲ್ ಗೈಸ್, ಹಮೀದ್ ಎ.ಟಿ., ಅಬ್ದುಲ್ ಹಮೀದ್ ಕುತುಬಿಯಾ ನಗರ, ಅಬ್ಬೂ ಹಾಜಿ, ಇಬ್ರಾಹಿಂ ಸಾಗ್, ಶಾಕಿರ್ ಚಾಯರವಳಚ್ಚಿಲ್, ಇಸ್ಮಾಯಿಲ್ ಕೆ.ಪಿ., ಕುಂಞ ಪಡ್ಪು, ಸಿರಾಜುದ್ದೀನ್ ಕುತುಬಿ ನಗರ, ಎಂ.ಎ. ಅಬ್ದುಲ್ಲಾ ಹಾಜಿ ಬೆಳ್ಮ, ಇಬ್ರಾಹಿಂ ಕೊಣಾಜೆ, ಕೆ.ಎಮ್. ಮುಹಮ್ಮದ್ ಮೇಸ್ತ್ರಿ, ಮೊೈದಿನ್ ಅಬ್ಬು, ಅಬೂಸ್ವಾಲಿ ಹಾಜಿ, ರಿಯಾಝ್ ರಹ್ಮಾನಿ, ಅಸ್ರಫ್ ಅಹ್ಸನಿ, ಮುಹಮ್ಮದ್ ಚಾಕಟ್ಟಪಡ್ಪು, ಕೆ.ಬಿ. ಅಬೂಸ್ವಾಲಿ, ಮುಸ್ತಫ ಫೈಝಿ ಕಿನ್ಯ, ಹಕೀಂ ಪರ್ತಿಪ್ಪಾಡಿ, ಬಾವುಂಞ ಎರ್ವಟ್ಟ, ಎಸ್.ಬಿ. ಹನೀಫ್ ಅಜ್ಜನಡ್ಕ ಹಾಗೂ ಸಮಸ್ತ ಉಲಮಾ ಉಮರಾ ವಿಧ್ವಾಂಸರು ಉಪಸ್ಥಿತರಿದ್ದರು.
ಮೊದಲಿಗೆ ಮುಸ್ತಫ ಫೈಝಿ ಸ್ವಾಗತಿಸಿ ಕೊನೆಗೆ ಆರಿಫ್ ಎಂ.ಎನ್. ವಂದಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮುಸ್ತಫ ಫೈಝಿ ಕಿನ್ಯ ತಿಳಿಸಿದ್ದಾರೆ.


