UN NETWORKS
ಉಳ್ಳಾಲ: ತಾರತಮ್ಯವಿಲ್ಲದೆ ಸಮಾನತೆಯಿಂದ ಗಾಂಧೀಜಿ ಕನಸ್ಸಿನಂತೆ, ಅಂಬೇಡ್ಕರ್ ಸಂವಿಧಾನದ ಆಶಯದಂತೆ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿದ್ದು, ಮುನ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿನ ಹೆಚ್ಚಿನ ಒಳರಸ್ತೆ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಕುತ್ತಾರು ಜಂಕ್ಷನ್ನಿನಲ್ಲಿ ಬುಧವಾರ ನಡೆದ ಮುನ್ನೂರು ಗ್ರಾಮದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮನೆಗೆ ಗ್ರಾಮದ ಸಮಸ್ಯೆ ಕೇಳಿಕೊಂಡು ಬಂದವರಲ್ಲಿ ಪಕ್ಷ, ಜಾತಿಯನ್ನು ಎಂದಿಗೂ ಕೇಳಿಲ್ಲ. ಅವರ ಇಚ್ಛೆಯಂತೆ ಯಾವುದೇ ಪಕ್ಷ, ಜಾತಿಯವನಾಗಿದ್ದರೂ ಗ್ರಾಮದ ಸಮಸ್ಯೆಗೆ ಪೂರಕವಾಗಿ ಸ್ಪಂಧಿಸಿದ್ದೇನೆ. ಇದು ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿಯಿಂದ ಪೂರೈಸಿದ ಅನುದಾನದಿಂದ ಎಲ್ಲಾ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ, ಸಮುದಾಯದವರಿಗೆ ವಿಶೇಷ ಅನುದಾನವನ್ನು ಒದಗಿಸಲಾಗಿದೆ. ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 302 ಮಂದಿಗೆ ಹಕ್ಕುಪತ್ರವನ್ನು ಪೂರೈಸಲಾಗಿದ್ದು, ಅದನ್ನು ಪಡೆದುಕೊಂಡವರು ಮನೆಯನ್ನು ಅಡವಿಗಿಟ್ಟು ಲೋನ್ ಪಡೆಯುವುದಾಗಲಿ, ಅದರ ಮೇಲೆ ಸಾಲ ಪಡೆಯುವುದಾಗಲಿ ಮಾಡಿದಲ್ಲಿ ಇದ್ದ ಮನೆಯನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಬಹುದು. ಭವಿಷ್ಯದಲ್ಲಿ ಸರಕಾರ ನೀಡಿದ ಜಾಗ ಕೋಟ್ಯಂತರ ಬೆಲೆಬಾಳುವ ಆಸ್ತಿಯಾಗಿ ಮಕ್ಕಳಿಗೆ ವರದಾನವಾಗಲಿದೆ ಎಂದರು.
ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ , ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುನ್ನೂರು ಪಂ.ಅಧ್ಯಕ್ಷೆ ರೂಪಾ. ಶೆಟ್ಟಿ, ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ಕಂದಾಯ ನಿರೀಕ್ಷಕ ಸ್ಟೀಫನ್, ತಾ.ಪಂ ಸದಸ್ಯೆ ವಿಲ್ಮಾ ವಿಲ್ಫ್ರೆಡ್ ಡಿಸೋಜಾ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಗ್ರಾಮಕರಣಿಕ ಪೂರ್ಣಚಂದ್ರ ತೇಜಸ್ವಿ, ಮುನ್ನೂರು ಪಂಚಾಯಿತಿ ಸದಸ್ಯರುಗಳಾದ ಹಸೈನಾರ್, ವಿಲ್ಫ್ರೆಡ್ ಡಿಸೋಜ, ಭಾಸ್ಕರ ಕುತ್ತಾರ್, ಪುಷ್ಪಾ, ವನಿತಾ, ಜಾರ್ಜ್, ನೀಲಾ,ನವೀನ್ ಡಿಸೋಜ, ಇಝಾಝ್, ಇಸ್ಮಾಯಿಲ್, ಮುನ್ನೂರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮನ್ಸೂರ್ ಅಹಮ್ಮದ್, ಪಂ.ಕಾರ್ಯದರ್ಶಿ ಶಾಲಿನಿ, ಮಾಜಿ ಅಧ್ಯಕ್ಷ ರೆಹಮಾನ್ , ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಅಹಮ್ಮದ್ ಪುತ್ತುಬಾವ, ಸೋಮೇಶ್ವರ ಗ್ರಾ.ಪಂ ಸದಸ್ಯ ಬಶೀರ್ ಮುಂಡೋಳಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಸಚಿವ ಯು.ಟಿ.ಖಾದರ್ , ಕಂದಾಯ ನಿರೀಕ್ಷಕ ಸ್ಟೀಫನ್, ಗ್ರಾಮಕರಣಿಕ ಪೂರ್ಣಚಂದ್ರ ತೇಜಸ್ವಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.


