UN NETWORKS
ಉಳ್ಳಾಲ :ದೇಶಕ್ಕೊಂದು ಲಾಂಛನವಿದ್ದಂತೆ ಮನುಷ್ಯನ ದೇಹಕ್ಕೂ ಸುದರ್ಶನ,ಶಂಖವೆಂಬ ದೇವರ ಲಾಂಛನವಿದ್ದರೆ ಮಾಡಿರುವ ಪಾಪಕರ್ಮಗಳು ಪರಿಹಾರವಾಗಿ ಜೀವನ ನಿರ್ವಿಘ್ನವಾಗಿ ಸಾಗುತ್ತದೆ ಎಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನುಡಿದರು.
ಮಂಗಳೂರು ತಾ.ನ ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರೀ ದೇವಳದ ಸಾನಿಧ್ಯದಲ್ಲಿ ಗಾಳದ ಕೊಂಕಣಿ ಸಮಾಜದ ಬಂಧುಗಳಿಗೆ ತಪ್ತ ಮುದ್ರಧಾರಣೆ ನೆರವೇರಿಸಿ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ದೇವಾಲಯಕ್ಕೆ ಬಂದಾಗ ನಾವು ದೇವರಿಗೆ ಕೈಮುಗಿಯು ವಂತೆ ಒಬ್ಬರನ್ನೊಬ್ಬರು ಎದುರಾದಾಗ ಪರಸ್ಪರ ಕೈ ಮುಗಿಯುವುದು ನಮ್ಮ ಸಂಸ್ಕಾರವಾಗಿದೆ ಎಂದ ಶ್ರೀಗಳು ಮಕ್ಕಳಿಗೆ ವಿದ್ಯೆಯ ಜೊತೆಗೆ ವಿನಯ,ಶಿಸ್ತು,ಸಂಸ್ಕಾರವನ್ನು ಹೆತ್ತವರು ಕಲಿಸಿಕೊಡಬೇಕು ಎಂದರು.
ದೇವಳದಲ್ಲಿ ದೇವರು ನೆಲೆಯಾದಾಗ ನಮ್ಮ ಮನಸ್ಸು ಕೂಡ ಚಾಂಚಲ್ಯದಿಂದ ದೂರವಾಗಿ ಗಟ್ಟಿಯಾಗಿರುತ್ತದೆ.ಶಿಷ್ಯ ವರ್ಗದ ಸೇವೆಯಿಂದ ಶ್ರೀ ಸೋಮೇಶ್ವರೀ ಸಂತೃಪ್ತಳಾಗಿದ್ದಾಳೆ ಎಂದ ಅವರು ಭಜನೆಗೆ ಅತೀ ಶೀಘ್ರವಾಗಿ ದೇವರು ಕೂಡ ಶೀಘ್ರವಾಗಿ ಒಲಿಯುತ್ತಾಳೆ,ಈನಿಟ್ಟಿನಲ್ಲಿ ನಾಯಕ್ ಸಮುದಾಯದ ಸೇವಾ ಕೈಂಕರ್ಯಗಳನ್ನು ಅಭಿನಂದಿಸಿದರು.
ಕ್ಷೇತ್ರದ ಶ್ರೀ ಅರಸು,ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ರಾಮರಾಜ ನಾಯಕ್,ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ, ಉಪಾಧ್ಯಕ್ಷ ರಂಜನ್ ನಾಯಕ್, ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಶಿವಾನಂದ ನಾಯಕ್ ಸೋಮನಾಥ ಉಳಿಯ,ಕೋಶಾಧಿಕಾರಿ ಧರ್ಮಪಾಲ್ ನಾಯಕ್ ಪಂಪ್ ವೆಲ್ ,ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ಕಸ್ತೂರಿ ಆರ್.ನಾಯಕ್,ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ಗಾಳದ ಕೊಂಕಣಿ ಅಭ್ಯುದಯದ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯಕ್ ಸ್ವಾಗತಿಸಿ,ವಂದಿಸಿದರು.


