UN NETWORKS
ಕೊಣಾಜೆ : ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂದ ನಂತರ ಮೂಲಭೂತ ಸೌಕರ್ಯದೊಂದಿಗೆ ಹಕ್ಕುಪತ್ರ ನೀಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದು, ಈ ಕ್ಷೇತ್ರದಲ್ಲಿ ತುರ್ತಾಗಿ ಕುಡಿಯುವ ನೀರಿಗೆ ಸರಕಾರ ಹಣ ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ನಿರಂತರ ನೀರು ನೀಡುವ ಕಾರ್ಯಕ್ಕೆ ಹರೇಕಳದಲ್ಲಿ 174 ಕೋಟಿ ರೂ. ವೆಚ್ಚದ ಯೋಜನೆಗೆ ಬಜೆಟ್ನಲ್ಲಿ ಘೋಷಣೆಯಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅಸೈಗೋಳಿ ಕೇಂದ್ರ ಮೈದಾನದಲ್ಲಿ ಕೊಣಾಜೆ ಗ್ರಾಮದ ಅರ್ಹ ಫಲಾನುಭವಿಗಳಿಗೆ ನಮ್ಮ ಮನೆ ನಮ್ಮ ಹಕ್ಕು ಯೋಜನೆಯಡಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಹಾಗೂ ವಿವಿಧ ಕಾಮಗಾರಿಗೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಂಗಳೂರು ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವಲ್ಲಿ ಜನಪ್ರತಿನಿಧಿಗಳೊಂದಿಗೆ ಸ್ಥಳೀಯರ ಸಹಕಾರ ಅಗತ್ಯ. ಸಚಿವನಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿದಾಗ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರ ಬೆಂಬಲದಿಂದ ಸ್ಥಳೀಯ ಸಮಸ್ಯೆಗಳ ಪರಿಹಾರ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಬೇಕಾದ ಮಾಹಿತಿ ನೀಡಿದ್ದರಿಂದ ಇಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿ ನಡೆಸಲು ಸಹಕಾರಿಯಾಯಿತು. ಕ್ಷೇತ್ರದ ಸಮಸ್ಯೆಗಳನ್ನು ಇಲ್ಲೇ ಪರಿಹಾರವಾದ್ದರಿಂದ ಸಚಿವನಾಗಿ ಆರೋಗ್ಯ ಸಚಿವನಾಗಿ ಮತ್ತು ಆಹಾರ ಸಚಿವನಾಗಿದ್ದಾಗ ಸಾಧನೆ ಮಾಡಲು ಸಹಕಾರಿಯಾಗಿದ್ದು ಎರಡು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಪಡೆಯಲು ಸಹಕಾರಿಯಾಯಿತು. ಕ್ಷೇತ್ರದಲ್ಲಿ ಬೇಡಿಕೆಯಿದ್ದ ಎಲ್ಲಾ ರಸ್ತೆಗಳ ಅಭಿವೃದ್ಧಿಯನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಕೊಣಾಜೆ ಮಂಡಲ ಪ್ರಧಾನ ಹಾಗೂ ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ.ಕರೀಂ, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಎನ್. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ ಪೂಜಾರಿ,ಮಾಜಿ ಸದಸ್ಯ ಮುಸ್ತಪ ಹರೇಕಳ, ಕೊಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಪಂಚಾಯತ್ ಸದಸ್ಯರಾದ ಅಚ್ಚುತ ಗಟ್ಟಿ, ಇಕ್ಬಾಲ್, ರಾಮಚಂದ್ರ ಎಮ್., ಗುಲಾಬಿ ಶೆಟ್ಟಿಗಾರ್, ಶೋಬಾ, ತಾಹಿರಾ, ರಾಜೀವಿ, ವನಿತಾ, ವೇದಾವತಿ ಗಟ್ಟಿ, ಗೋಪಿಕಾ, ವನಿತಾ ಕೆ, ರವೀಂದ್ರ, ಅಬ್ದುಲ್ ಖಾದರ್ ಅಡ್ಕರೆ, ಹರಿಶ್ಚಂದ್ರ, ಪ್ಲೇವಿ,ಪ್ರೇಮ್, ಕೊಣಾಜೆ ಪಂಚಾಯತ್ ಅಬಿವೃದ್ದಿ ಅಧಿಕಾರಿ ಸವಿತಾ, ಗ್ರಾಮ ಕರಣಿಕ ಪ್ರಸಾದ್, ಕಂದಾಯ ಅಧಿಕಾರಿ ಸ್ಟೀಫನ್, ಕೊಣಾಜೆ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಗಟ್ಟಿ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ವಿಜಯ ಕೃಷ್ಣಪ್ಪ, ಮೊಹಮ್ಮದ್ ಅಸೈ, ರಫೀಕ್ ಅಂಬ್ಲಮೊಗರು, ಸಿರಾಜ್ ಕಿನ್ಯ, ಮುಖಂಡರಾದ ರಾಜಾರಾಮ್ ರೈ, ಪಿ.ಎಮ್.ಕುಂಞ , ಮೊಹಮ್ಮದ್ ಅಡ್ಕರೆ, ಶ್ರೀನಿವಾಸ ಶೆಟ್ಟಿ ಅಸೈಗೋಳಿ, ಸಲೀಮ್ ಮೆಗಾ, ಇಕ್ಬಾಲ್ ಸಾಮಾನಿಗೆ, ಸುಲೈಮಾನ್, ದೇವಾನಂದ ಶೆಟ್ಟಿ, ರೂಪೇಶ್ ಭಟ್ನಗರ, ಝಕಾರಿಯಾ ಮಲಾರ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್ ಸ್ವಾಗತಿಸಿದರು. ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ ಕೊಣಾಜೆ ಪ್ರಸ್ತಾವನೆಗೈದರು.
ಸದಸ್ಯ ನಝರ್ ಷಾ ಪಟ್ಟೋರಿ ಕಾರ್ಯಕ್ರಮ ನಿರ್ವಹಿಸಿದರು.


