UN NETWORKS
ಉಳ್ಳಾಲ: 2017 ಫೆಬ್ರವರಿ ತಿಂಗಳ ನಂತರ ಆನ್ಲೈನ್ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಸಿಗದೇ ಇರುವವರು ಕುಟುಂಬದ ಇತ್ತೀಚಿನ ಆದಾಯ ಪ್ರಮಾಣ ಪತ್ರ, ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ನ ಪ್ರತಿ, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಪ್ರತಿಗಳೊಂದಿಗೆ ಫೆ.21 ರಂದು ಬೆಳಿಗ್ಗೆ 10.00ರಿಂದ ಉಳ್ಳಾಲ ನಗರಸಭೆಯ ಸಮುದಾಯ ಭವನದಲ್ಲಿ ಸ್ಥಳದಲ್ಲಿಯೇ ಪಡಿತರ ಚೀಟಿಯ ಪ್ರತಿ ಪಡೆಯಬಹುದು.
ಮಂಗಳೂರು ಬಿ ಹೋಬಳಿಯ ಎಲ್ಲಾ ಗ್ರಾಮಪಂಚಾಯತ್ಗಳು ಕೋಟೆಕಾರು, ಸೋಮೇಶ್ವರ, ತಲಪಾಡಿ, ಬೆಳ್ಮ, ಕಿನ್ಯಾ, ಹರೇಕಳ, ಮಂಜನಾಡಿ, ಬೋಳಿಯಾರು, ಕೋಣಾಜೆ, ಅಂಬ್ಲಮೊಗರು, ಹಾಗೂ ಉಳ್ಳಾಲ, ಪೆರ್ಮನ್ನೂರು ನಿವಾಸಿಗಳು ಪಡಿತರ ಚೀಟಿಯ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ನಗರಸಭೆ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


