UN NETWORKS
ಇರಾ: ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಸ್ಥಳೀಯ ಶಾಸಕರಾದ ಯು.ಟಿ. ಖಾದರ್ ಅವರ ಅನುದಾನದಲ್ಲಿ ಇರಾ ಗ್ರಾಮದ ಕೆಳಗಿನಮನೆ ಎಂಬಲ್ಲಿ ನಿರ್ಮಾಣಗೊಳ್ಳಲಿರುವ ಕಿರುಸೇತುವೆ ಕಾಮಗಾರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಶಿಲಾನ್ಯಾಸಗೈದರು.
ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಬಿ. ಉಮರ್, ಮೊಯಿದಿನ್ ಕುಂಞ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಸೂತ್ರಬೈಲ್, ಸ್ಥಳೀಯ ಗಣ್ಯರಾದ ಮೊಹಮ್ಮದ್ ಕೆ.ಎಂ, ಅಝೀಝ್ ಸಖಾಫಿ, ಹಸೈನಾರ್ ಯು, ಕೆ ಮೊಯಿದಿನ್ ಕುಂಞ ಕೆಳಗಿನಮನೆ, ಅಬೂಬಕರ್, ಕೆ ಮಹಮ್ಮದ್ ಉಪಸ್ಥಿತರಿದ್ದರು.




