UN NETWORKS
ಕೋಟೆಕಾರ್: ಕೋಟೆಕಾರ್ ಮಾಡೂರು ಹಿಂದೂ ರುದ್ರ ಭೂಮಿ ಸಮಿತಿಯ ನೇತೃತ್ವದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಸಹಕಾರದಿಂದ ಮಾಡೂರು ಹಿಂದೂ ರುದ್ರ ಭೂಮಿಯ ನೂತನ ವಿಶ್ರಾಂತಿ ಕೊಠಡಿಯನ್ನು ಬಿ.ಜೆ.ಪಿ ರಾಜ್ಯಕಾರ್ಯಕಾರಿ ಸದಸ್ಯ ರವೀಂದ್ರ ಶೆಟ್ಟಿ ಉದ್ಘಾಟಿಸಿದರು.
ನೂತನ ಕಚೇರಿಯನ್ನು ಕೊಣಾಜೆ ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಕಿಟ್ಟಣ್ಣ ರೈ ಮಾಡೂರು ಉದ್ಘಾಟಿಸಿದರು, ಹಾಗೂ ಇಂಟರ್ ಲಾಕ್ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ನೆರವೇರಿಸಿದರು. ಮಾಡೂರು ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಪಿ, ಪರಮ ಶಿವನ ಕಲಾಕೃತಿಯನ್ನು ಲೋಕಾರ್ಪಣೆಗೈದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ,ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಲ್ಲೆಂಜೀರ್, ಕೊಂಡಾಣ ಕ್ಷೇತ್ರದ ಆಡಳಿತ ಮೊಕ್ತೇಸರ ಕೃಷ್ಣ ಶೆಟ್ಟಿ ಕೆಳಗಿನ ಮನೆ ಕೋಟೆಕಾರ್ ಗುತ್ತು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಪರಿಸರ ಪ್ರೇಮಿ ಮಾದವ ಉಳ್ಳಾಲ್, ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷ ಕೆ.ಹರಿದಾಸ್ ಮಾಡೂರು, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ, ದೀರಜ್ ಕೊಂಡಾಣ, ಶ್ರೀಮತಿ ಭಾರತಿ ರಾಘವ ಗಟ್ಟಿ, ಶ್ರೀಮತಿ ಪ್ರಫುಲ್ಲಾ ದಾಸ್, ಮೋಹನ್ ಬಲ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಹಸನ್ ಮಾಡೂರು, ಕೋಟೆಕಾರ್ ಮಾಡೂರು ಹಿಂದೂ ರುದ್ರ ಭೂಮಿ ಸಮಿತಿಯ ಅಧ್ಯಕ್ಷ ಪದ್ಮನಾಭ ಪಾದೆ ಉಪಸ್ಥಿತರಿದ್ದರು.
ರಚನಾ ಶೇಖರ್ ಪ್ರಾರ್ಥಿಸಿದರು, ಕೋಟೆಕಾರ್ ಮಾಡೂರು ಹಿಂದೂ ರುದ್ರ ಭೂಮಿ ಸಮಿತಿಯ ಕೋಶಾಧಿಕಾರಿ ಲತೀಶ್.ವಿ.ಕುಲಾಲ್ ಸ್ವಾಗತಿಸಿದರು, ಗೌರವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು, ಜಯಂತ್ ಸಂಕೋಳಿಗೆ ಕಾರ್ಯಕ್ರಮ ನಿರೂಪಿಸಿದರು, ರಾಜೇಶ್ ಶೆಟ್ಟಿ ಕೊಂಡಾಣ ವಂದಿಸಿದರು.


