UN NETWORKS
ತೊಕ್ಕೊಟ್ಟು: ತೊಕ್ಕೊಟ್ಟು ಪರಿಸರದಲ್ಲಿ ಸಾರ್ವಜನಿಕ ಸಂಘಸಂಸ್ಥೆಗಳಿಗೆ ಕಬಡ್ಡಿ ಮತ್ತು, ಕಲಾ ಕಾರ್ಯಕ್ರಮಗಳಿಗೆ, ಸರ್ವಧರ್ಮದ ಉತ್ಸವಗಳಿಗೆ ಇರುವ ಏಕಮೇವ ಮೈದಾನ ತೊಕ್ಕೊಟ್ಟು ಅಂಬೇಡ್ಕರ್ ಮೈದಾನ ಮಾತ್ರ.
ಈ ಅಂಬೇಡ್ಕರ್ ರಂಗಮಂದಿರವವನ್ನು ನವೀಕರಿಸಿ ಮೈದಾನಕ್ಕೆ ಮೇಲ್ಚಾವಣಿ ಅಳವಡಿಸಿದರೆ ಇನ್ನಷ್ಟು ಕಲಾ, ಕ್ರೀಡಾ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ. ಈಗಾಗಲೇ ಕಾರ್ಯಕ್ರಮ ನಡೆಸಲು ಯಾವದೇ ಸೌಲಭ್ಯಗಳಿರದ ಅಂಬೇಡ್ಕರ್ ಮೈದಾನ ಮತ್ತು ರಂಗಮಂಟಪವನ್ನು ನವೀಕರಣಗೊಳಿಸಿ ಸಾರ್ವಜನಿಕ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಕೂಲತೆ ಒದಗಿಸಿಕೊಡಲು ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ನೇತೃತ್ವದಲ್ಲಿ ಉಳ್ಳಾಲ ನಗರಸಭೆಗೆ ಮನವಿ ಅರ್ಪಿಸಲಾಯಿತು.
ತೊಕ್ಕೊಟ್ಟಿನ 25 ಸಂಘ ಸಂಸ್ಥೆಗಳ ಸಹಿಯುಳ್ಳ ಮನವಿಯನ್ನು ಭಗವತಿ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ರವರು ಪುರಸಭಾ ಅಧ್ಯಕ್ಷರಿಗೆ ಮತ್ತು ಕಾರ್ಯನಿರ್ವಹಾಣಾಧಿಕಾರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆ ಗಳ ಪರವಾಗಿ ವಿಠಲ್ ಶ್ರೀಯಾನ್, ರಾಮಚಂದ್ರ ತೊಕ್ಕೊಟ್ಟು ,ರೋಹಿತ್ ಉಳ್ಳಾಲ್, ಪ್ರವೀಣ್.ಎಸ್.ಕುಂಪಲ, ಪ್ರಕಾಶ್ ಸಿಂಪೋನಿ,ವಿಜಯ ಪಂಡಿತಹೌಸ್,ಸೂರಜ್ ತೊಕ್ಕೊಟ್ಟು , ಪುರುಷೋತ್ತಮ ಕಲ್ಲಾಪು, ಪ್ರವೀಣ್ ಕೊಲ್ಯ ,ರೋಹಿ, ದರ್ಮರಾಜ್ ತೊಕ್ಕೊಟ್, ಜೀತ್ ಮುಂತಾದವರು ಉಪಸ್ಥಿತರಿದ್ದರು.


