UN NETWORKS
ಕೊಣಾಜೆ: ಶ್ರೀ ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ, ಕೊಣಾಜೆ ಇದರ ಆಶ್ರಯದಲ್ಲಿ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯುವ ಅಖಂಡ ಭಜನಾ ಸಪ್ತಾಹಕ್ಕೆ ಶನಿವಾರದಂದು ಬೆಳಿಗ್ಗೆ ಬ್ರಹ್ಮಶ್ರೀ ಬಡಾಜೆಬೀಡು ಶ್ರೀ ಗೋಪಾಲಕೃಷ್ಣ ತಂತ್ರಿ ಅವರು ದ್ವೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟೋರಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಸನ್ನಿಧಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಒಂದು ವಾರಗಳ ಕಾಲ ನಡೆಯುವ ಅಖಂಡ ಭಜನಾ ಸಪ್ತಾಹವು ಯಾವುದೇ ವಿಘ್ನಗಳಾಗದಂತೆ ಯಶಸ್ವಿಯಾಗಿ ನಡೆಯಲಿ ಹಾಗೂ ಈ ಸೇವೆಯಿಂದ ನಾಡಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೊಣಾಜೆ ಬೀಡಿನ ತಿರುಮಮಲೇಶ್ವರ್ ಭಟ್ ಕೊಣಾಜೆ, ಅಖಂಡ ಭಜನಾ ಸಪ್ತಾಹದ ಅಧ್ಯಕ್ಷರಾದ ರಘುರಾಮ ಕಾಜವ, ಪ್ರಮುಖರಾದ ಶ್ರೀನಿವಾಸ ಕಾಜವ, ದಿವಾಕರ ಭಂಡಾರಿ, ಉಪಾಧ್ಯಕ್ಷರಾದ ಕರುಣಾಕರ ಕಾನ, ರಾಮಕೃಷ್ಣ ಪಟ್ಟೋರಿ, ಸತ್ಯನಾರಾಯಣ ಭಟ್, ಸುಬ್ಬಣ್ಣ ಭಟ್, ಭಜನಾ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಟ್ಟೋರಿ ಹಾಗೂ ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


