Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ನಿಟ್ಟೆಯಲ್ಲಿ ನಿವೃತ್ತ ಸೇನಾನಿಗಳಿಗೆ ಸನ್ಮಾನ

UllalaVaniBy UllalaVaniJanuary 31, 2018No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ರಾಜಕೀಯ, ಧಾರ್ಮಿಕ ವಿಚಾರಗಳಿಗೆ ಮಡಿದವರ ನಡುವೆ ದೇಶಕ್ಕಾಗಿ ಪ್ರಾಣ ಅರ್ಪಿಸಿದವರು ಶ್ರೇಷ್ಟರಾಗಿದ್ದು, ಅವರ ಹೆಸರಿನಲ್ಲಿ ಆಚರಿಸುವ ಹುತಾತ್ಮ ದಿನಾಚರಣೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಇಂತಹ ಆಚರಣೆಗಳಿಂದ ಯುವಸಮುದಾಯ ಸೈನ್ಯಕ್ಕೆ ಸೇರಲು ಸ್ಫೂರ್ತಿದಾಯಕ ಬೆಳವಣಿಗೆಯಾಗಲಿ ಎಂದು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ)ಯ ಉಪಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.

ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಸೆಮಿನಾಡರ್ ಹಾಲ್‍ನಲ್ಲಿ ನಿಟ್ಟೆ (ಪರಿಗಣಿಸಲಾಗಿರುವ) ವಿಶ್ವವಿದ್ಯಾನಿಲಯದ ಎನ್‍ಎಸ್‍ಎಎಸ್ ಘಟಕದ ಆಶ್ರಯದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ನಿವೃತ್ತ ಸೇನಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.

ಸೈನ್ಯದಲ್ಲಿರುವವರ ಮನೆಮಂದಿಗೆ ಬರುವ ಒಂದು ದೂರವಾಣಿ ಕರೆಯೂ ಭೀತಿಯನ್ನು ಹುಟ್ಟಿಸುವಂತಹದ್ದಾಗಿರುತ್ತದೆ. ಹಿಂದೆ ದಕ್ಷಿಣ ಭಾರತದ ಮದ್ರಾಸ್ ರೆಜಿಮೆಂಟ್ ಭಾರತೀಯ ಸೇನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿಕೊಂಡಿತ್ತು. ಈ ಮುಖೇನ ದಕ್ಷಿಣ ಭಾರತದ ಮಂದಿಯ ದೇಶಕ್ಕಾಗಿ ನಡೆಸಿದ ಸೇವೆ ನಗಣ್ಯ ಎಂದ ಅವರು ನರ್ಸಿಂಗ್ ಪದವಿ ಪಡೆದವರಿಗೆ ಸೈನ್ಯದಲ್ಲಿ ಸೇವೆ ನಡೆಸಲು ಉತ್ತಮ ಅವಕಾಶಗಳಿದ್ದು, ಭವಿಷ್ಯದಲ್ಲಿ ಸೈನ್ಯದ ಉನ್ನತ ಹುದ್ದೆಗಳನ್ನು ಗಳಿಸಿಕೊಂಡು ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಭೂ ಸೇನೆಯ ಕರ್ನಲ್ ಪ್ರೇಮ್ ಕುಮಾರ್ ಶೆಟ್ಟಿ , ನೌಕಾದಳದ ಕಮಾಂಡರ್ ಮಹೇಶ್ ನಾಯಕ್, ವಾಯುಸೇನೆಯ ಶ್ರೀಕಾಂತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಭೂ ಸೇನೆಯ ಕರ್ನಲ್ ಪ್ರೇಮ್ ಕುಮಾರ್ ಶೆಟ್ಟಿ ಹಲವು ವರ್ಷಗಳ ಪರಿಶ್ರಮ ಮತ್ತು ಅಭ್ಯಾಸದ ಫಲವಾಗಿ ಕೆಲ ತಿಂಗಳ ಹಿಂದೆ ದೇಶದ ಯೋಧರು ಸರ್ಜಿಕಲ್ ಸ್ಟ್ರೈಕ್ ನಡೆಸಿ ಯಶಸ್ವಿಯಾಗಿದ್ದಾರೆ. ಹಳೇಯ ಮತ್ತು ಶ್ರೇಷ್ಠ ವೃತ್ತಿಯಾಗಿರುವ ಸೈನ್ಯದಲ್ಲಿ ಯುವಸಮುದಾಯ ಹೆಚ್ಚಿನ ಒಲವು ತೋರಿಸಿ, ದೇಶದ ಸೇವೆಯಲ್ಲಿ ಭಾಗಿಯಾಗುವುದರಿಂದ ಸವಾಲುಗಳನ್ನು ಸ್ವೀಕರಿಸುವ ಮನೋಭಾವದ ಜತೆಗೆ ಪ್ರತಿಯೊಂದು ವೃತ್ತಿಯಲ್ಲಿ ತೊಡಗುವ ಅನುಭವವನ್ನು ಕೊಡುತ್ತದೆ ಎಂದರು.

ನೌಕಾದಳದ ಕಮಾಂಡರ್ ಮಹೇಶ್ ನಾಯಕ್, ಮಾತನಾಡಿ ಸೈನ್ಯದಲ್ಲಿನ ವೈದ್ಯರ ಸೇವೆ ಸಾಹಸದಾಯಕವಾಗಿರುತ್ತದೆ. ಯುದ್ಧ ಭೂಮಿಯಲ್ಲಿ ಸಣ್ಣ ಕೊಠಡಿಯೇ ಹೊರರೋಗಿ ವಿಭಾಗದಿಂದ ಶಸ್ತ್ರಚಿಕಿತ್ಸೆ ವಿಭಾಗವೂ ಕಾರ್ಯಾಚರಿಸಿ, ಅದರಲ್ಲೇ ವೈದ್ಯರು ಕಾರ್ಯನಿರ್ವಹಿಸಬೇಕಾಗಿದೆ. ಪ್ರತಿಕೂಲ ಹವಾಮಾನದಲ್ಲೂ ವೈದ್ಯರು ನಡೆಸುವ ಸೇವೆ ಬಹಳಷ್ಟು ಶ್ರೇಷ್ಟವಾಗಿದೆ ಎಂದರು.

ವಾಯುಸೇನೆಯ ಶ್ರೀಕಾಂತ್ ಶೆಟ್ಟಿ ಮಾತನಾಡಿ ಮಾಧ್ಯಮಗಳಲ್ಲಿ ಕಂಡುಬರುವಂತೆ ಸೇನೆಯ ಕಾರ್ಯವೈಖರಿಯಿರುವುದಿಲ್ಲ. ದೇಶಕ್ಕಾಗಿ ಕಾಯುವ ಸಮಯಗಳು, ಅಲ್ಲಿನ ಸ್ಥಳಗಳ ಕಷ್ಟದ ಜತೆಗೆ ಮನೆಮಂದಿಯೊಂದಿಗೆ ಇರದ ಸಂಪರ್ಕಗಳ ನಡುವಿನ ಹೋರಾಟವೇ ಬೇರೆ. ಯೋಧರೆಂದರೆ ಯುದ್ಧದಲ್ಲಿ ಭಾಗಿಯಾಗಿರಬೇಕೆಂಬ ಮನೋಭಾವ ಹಲವರಲ್ಲಿರುತ್ತದೆ. ಆದರೆ ಭಾರತೀಯ ಸೇನೆ ಎಂದಿಗೂ ಯುದ್ಧವನ್ನೇ ಪ್ರೇರೇಪಿಸುವುದಿಲ್ಲ. ಸೈನ್ಯಕ್ಕೆ ಸೇರಿದ ಎಲ್ಲರೂ ವಿವಿಧ ರೀತಿಯಲ್ಲಿ ಸೇವೆ ನಡೆಸಿಯೇ ಬಂದವರಾಗಿರುತ್ತಾರೆ ಎಂದರು.

ಜಾಹೀರಾತು

ಈ ಸಂದರ್ಭದಲ್ಲಿ ನಿಟ್ಟೆ (ಪರಿಗಣಿಸಲಾಗಿರುವ) ವಿಶ್ವವಿದ್ಯಾನಿಲಯದ ಕುಲಸಚಿವೆ ಅಲ್ಕಾ ಕುಲಕರ್ಣಿ, ನಿಟ್ಟೆ ಸಂಶೋಧನ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ| ಕರುಣಾ ಸಾಗರ್, ಕ್ಷೇಮ ಡೀನ್ ಡಾ| ಪಿ.ಎಸ್.ಪ್ರಕಾಶ್, ಆಡಳಿತ ವಿಭಾಗದ ವೈಸ್ ಡೀನ್ ಡಾ| ಜಯಪ್ರಕಾಶ್ ಶೆಟ್ಟಿ, ಆಡಳಿತ ವಿಭಾಗದ ಉಪ ನಿರ್ದೇಶಕಿ ಸಾಯಿಪ್ರಸನ್ನ ಹೆಗ್ಡೆ, ಪರ್ಚೇಸ್ ವಿಭಾಗದ ಉಪ ನಿರ್ದೇಶಕ ಸುಬೋದ್ ರೈ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ| ಫಾತಿಮಾ ಡಿ’ಸಿಲ್ವ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಸಿ.ಎಸ್. ಶಾಸ್ತ್ರಿ, ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹೀರೆಮಠ್, ವಿದ್ಯಾರ್ಥಿ ಕ್ಷೇಮಪಾಲನಾ ಉಪ ನಿರ್ದೇಶಕ ಕರ್ನಲ್ ಸುಬ್ಬಯ್ಯ, ಎಸ್ಟೇಟ್ ಮ್ಯಾನೇಜ್‍ಮೆಂಟ್‍ನ ಸಹಾಯಕ ನಿರ್ದೇಶಕ ಏರ್ ಕಮಾಡೋರ್ ಎಸ್.ಕೆ. ಪೈ ಮತ್ತಿತರರು ಉಪಸ್ಥಿತರಿದ್ದರು.

ನಿಟ್ಟೆ (ಪರಿಗಣಿಸಲಾಗಿರುವ) ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ| ಸುಮಲತಾ ಹೆಗ್ಢೆ ಸ್ವಾಗತಿಸಿದರು. ನುಕ್ಸರ್‍ನ ಎನ್‍ಎಸ್‍ಎಸ್ ಯೋಜನಾಧಿಕಾರಿ ಕೃಷ್ಣ ಕುಮಾರ್ ವಂದಿಸಿದರು. ನಿಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

SNEC ಪರೀಕ್ಷೆಯಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಅಕಾಡೆಮಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

July 1, 2026

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

SNEC ಪರೀಕ್ಷೆಯಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಅಕಾಡೆಮಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

By UllalaVaniJuly 1, 20260

ವಾದಿತ್ವೈಬ, ಕಿನ್ಯಾ, ಜು. 1: ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ (SNEC) ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಸೆಮಿಸ್ಟರ್ ಪರೀಕ್ಷೆಯಲ್ಲಿ…

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ..!!

July 1, 2026

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮೂಗಿನ ಅಲರ್ಜಿ ಮತ್ತು ಸೈನಸೈಟಿಸ್ ಚಿಕಿತ್ಸಾ ಶಿಬಿರ

July 1, 2026
1 2 3 … 1,992 Next
Automatic YouTube Gallery

ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!
Now Playing
ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani | ಅಶ್ವಿನಿ ಹಾಗೂ ಕುಟುಂಬದ ಬೇಡಿಕೆ ಈಡೇರಿಸಿದ ಬಿಜೆಪಿ, ಮಾಜಿ ಸಂಸದ ನಳೀನ್ ಕಟೀಲ್..!
Now Playing
| Ullalavani | ಅಶ್ವಿನಿ ಹಾಗೂ ಕುಟುಂಬದ ಬೇಡಿಕೆ ಈಡೇರಿಸಿದ ಬಿಜೆಪಿ, ಮಾಜಿ ಸಂಸದ ನಳೀನ್ ಕಟೀಲ್..!
ಅಶ್ವಿನಿಗೆ ಕೃತಕ ಕಾಲು ಜೋಡಣೆಗೆ ರೂ.23 ಲಕ್ಷ; ಬಿಜೆಪಿ, ಮಾಜಿ ಸಂಸದರ ...
ಅಶ್ವಿನಿಗೆ ಕೃತಕ ಕಾಲು ಜೋಡಣೆಗೆ ರೂ.23 ಲಕ್ಷ; ಬಿಜೆಪಿ, ಮಾಜಿ ಸಂಸದರ ಮುತುವರ್ಜಿಯಲ್ಲಿ ಸಹಾಯಹಸ್ತ

ಮಂಜನಾಡಿ ದುರಂತದಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಅಶ್ವಿನಿ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version