UN NETWORKS
ಉಳ್ಳಾಲ : ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮತ್ತು ಪ್ರತಿ ವಿಷಯದಲ್ಲಿಯು ಕನಿಷ್ಠ ಅಂಕವನ್ನುಗಳಿಸುವ ತಾಂತ್ರಿಕತೆಯನ್ನು ತಿಳಿಸುವ ಗೆಲುವಿಗೊಂದು ಸುಗಮಹಾದಿ ಎಂಬ ಕಾರ್ಯಕ್ರಮವನ್ನು ಉಳ್ಳಾಲದ ಹಳೆಕೋಟೆ ಸಯ್ಯದ್ ಮದನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಇದರ ವತಿಯಿಂದ ಜಂಟಿಯಾಗಿ ಹಮ್ಮಿಕೊಳ್ಳಲಾಯಿತು.
ಉಧ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಮತ್ತು ಶಿಕ್ಷಣ ಸಾಹಿತ್ಯ ಸಮಿತಿ ಅಧ್ಯಕ್ಷರಾದ ಹಾಜಿ ಶಾಹುಲ್ ಹಮೀದ್ ರವರು ಶಿಕ್ಷಣವು ಮಾನವನ ಸರ್ವಾಂಗಿನ ಬೆಳವಣಿಗೆಯ ಪೂರಕ ಅಂಶವಾಗಿದೆ ಯಾವುದೇ ಸಂಧರ್ಭದಲ್ಲಿ ನಾವು ಪಡೆದ ಶಿಕ್ಷಣವೇ ನಮಗೆ ರಕ್ಷಣೆ ಮತ್ತು ಕೀರ್ತಿಯನ್ನು ತಂದುಕೊಡುತ್ತದೆ .ಅಲ್ಲದೆ ನಾವು ಸಂಪಾದಿಸಿದ ಸಂಪತ್ತು ಭೌಧಿಕವಾಗಿ ಇರುತ್ತದೆ ವಿನಹ ಶಾಶ್ವತವಾಗಿ ಅಲ್ಲ . ಆದುದರಿಂದ ಎಸ್.ಎಸ್.ಎಲ್.ಸಿ ಎಂಬುದು ನಮ್ಮ ಜೀವನದ ಪ್ರಾಮುಖ್ಯ ಘಟ್ಟ ಇದರಲ್ಲಿ ನಾವೇಲ್ಲರು ತೇರ್ಗಡೆಯಾಗಲೆಬೇಕೆಂದರು.
ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕಾರದ ವೈ.ಶಿವರಾಮ್ಯನವರು ಮಾತನಾಡುತ್ತ ವಿಧ್ಯಾರ್ಥಿಗಳು ಯಾರ ಹೊಗಲಿಕೆಗೆ ಬೆದರಿಕೆಗೆ ವಿದ್ಯಾಭ್ಯಾಸ ಪಡೆಯದೆ.ತಮಗಾಗಿ ತಮ್ಮ ಮುಂದಿನ ಜೀವನಕ್ಕಾಗಿ ವಿದ್ಯೆಯನ್ನು ಇಷ್ಟಪಟ್ಟು ಕಲಿಯುತ್ತಾ ಇಂದಿನ ಕಾರ್ಯಕ್ರಮದ ಸದುಪಯೋಗವನ್ನು ಪಡೆದು ಎಲ್ಲಾರು ಮುಂದೇ ಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದು ಹಾರೈಸಿದರು .
ಕಾರ್ಯಕ್ರಮದಲ್ಲಿ ಜಮೀಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ,ಲೋಕನಾಥ್ ರೈ , ಜಮಿಯತ್ತುಲ್ ಫಲಾ ಸದಸ್ಯ ಅಬ್ದುಲ್ ರಝಾಕ್ ಮೊದಲಾದವರು ಉಪಸ್ಥಿತರಿದ್ದರು .
ಸಂಪನ್ಮೂಲ ವ್ಯಕ್ತಿಗಳಾಗಿ ಶಾಂತಾ ಗಣಿತ,ಚಂಚಾಲಾಕ್ಷಿ ಸಮಾಜ ವಿಜ್ಞಾನ , ವಾಣಿಶ್ರೀ ವಿಜ್ಞಾನ , ಪ್ರಮೀಳ ಇಂಗ್ಲೀಷ್.
ಜಮೀಯತ್ತುಲ್ ಫಲಾಹ್ ಕಾರ್ಯದರ್ಶಿ ಎಂ.ಹೆಚ್.ಮಲಾರ್ ಸ್ವಾಗತಿಸಿ ,ಕೋಶಾಧಿಕಾರಿ ಕೆ.ಎಂ.ಕೆ ಮಂಜನಾಡಿ ವಂದಿಸಿದರು .ಶಿಕ್ಷಣ ಸಂಯೋಜಕಿ ಹಿಲ್ಡಾ ,ಕ್ಲಮೇನ್ಸಿಯಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.ಉಳ್ಳಾಲದ ವಿವಿಧ ಶಾಲೆಗಳ 175 ಮಂದಿ ವಿಧ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದರು .


