UN NETWORKS
ದೇರಳಕಟ್ಟೆ : ಕಣಚೂರು ವಿದ್ಯಾಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಕ್ರಿಯಾತ್ಮಕ ಕಲೆ ಮತ್ತು ಕರಕುಶಲ ಪ್ರದರ್ಶನ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಸಂಸ್ಥೆಯ ಟ್ರಸ್ಟೀ ಝೊಹರಾ ಮೋನು ಕರಕುಶಲಪ್ರದರ್ಶನಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಮುಖ್ಯಸ್ಥ ಯು. ಕೆ. ಮೋನು, ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್, ಶಾಹದಾ ರಹಿಮಾನ್, ಟ್ರಸ್ಟೀಗಳಾದ ಉಮಯ್ಯಾ ಬಾನು, ಫರೀದಾ ಬಾನು, ಮತ್ತು ಡಾ| ಅಬಿದಾ ಬಾನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಕಲೆ ಮತ್ತು ಕರ ಕುಶಲ ಪ್ರದರ್ಶನದಲ್ಲಿ ಮರದ ತುಂಡಿನಲ್ಲಿ ಭಾವಚಿತ್ರ ಪ್ರದರ್ಶನ, ಕಾಗದದ ಕೌಶಲ್ಯ, ಗಾಜಿನಲ್ಲಿ ಚಿತ್ರಕಲೆ, ನಿಬ್ ಪೇಂಟಿಂಗ್, ಕಾಪಿ ಪೌಡರನ್ನು ಉಪಯೋಗಿಸಿ ಅದರಲ್ಲಿ ಬಿಡಿಸಿದ ಚಿತ್ರಕಲೆ, ಬುಡಕಟ್ಟು ಕಲೆ, ಟೀ-ಶರ್ಟ್ ಪೇಂಟಿಂಗ್, ಭಾರತಿಯ ಕಲೆ, ಲಾಗ್ ಪ್ಯಾಚ್ ಕಲೆ, ಪೆನ್ಸಿಲ್ ಶೇಡಿಂಗ್, ಕಸದಿಂದ ರಸ, ನೈಸರ್ಗಿಕ ದೃಶ್ಯಾವಳಿಯ ಚಿತ್ರಾವಳಿಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರುಗಳಾದ ಫ್ರೊ| ಇಕ್ಬಾಲ್ ಅಹಮ್ಮದ್ ಯು.ಟಿ, ವಿನಿಟಾ ಗಾಮ ರೋಸ್ ಮಥಾಯಸ್, ಆನಂದಿ ಕೆ, ಹೇಮಲತಾ ಮತ್ತು ಪೂರ್ವಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲಿನೆಟ್ ಡಿ’ಸೋಜ ಉಪಸ್ಥಿತರಿದ್ದರು. ನಮ್ಮ ಶಿಕ್ಷಣ ಸಂಸ್ಥೆಯ ಕಲೆ ಮತ್ತು ಕರಕುಶಲದ ಶಿಕ್ಷಕಿ ಚಂದ್ರಿಕಾ ಸತೀಶ್ ಸಂದಿ ಅವರ ನೇತೃತ್ವದಲ್ಲಿ ಪ್ರದರ್ಶನವು ಯಶಸ್ವಿಯಾಗಿ ಜರುಗಿತು. 3 ದಿನಗಳ ಕಾಲ ಶಾಲಾ ಸಭಾಂಗಣದಲ್ಲಿ ಈ ಪ್ರದರ್ಶನ ಡೆಯಲಿದೆ.


