UN NETWORKS
ಉಳ್ಳಾಲ: ಎಸ್ಕೆಎಸ್ಸೆಎಸ್ಸೆಎಫ್ ಉರುಮಣೆ ಶಾಖೆ ವತಿಯಿಂದ ಶಂಸುಲ್ ಉಲಮಾ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆಯು ಸೋಮವಾರ ಬಾಪು ಉಸ್ತಾದ್ ವೇದಿಕೆ ಶಂಸುಲ್ ಉಲಮಾ ನಗರ ಉರುಮಣೆಯಲ್ಲಿ ನಡೆಯಿತು.
ಕಾರ್ಯಕ್ರಮದ ನೇತೃತ್ವವನ್ನು ಎಸ್ಕೆಎಸ್ಸೆಸ್ಸೆಎಫ್ ಉರುಮಣೆ ಶಾಖೆ ಉಪಾಧ್ಯಕ್ಷರಾದ ಅಬೂಬಕ್ಕರ್ ದಾರಿಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಅಮೀರ್ ತಂಙಳ್ ಅಲ್‍ಬುಖಾರಿ ಕಿನ್ಯ ಪ್ರಾರ್ಥನೆಯನ್ನು ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಎಫ್ ಉರುಮಣೆ ಶಾಖೆ ಅಧ್ಯಕ್ಷ ಹಸೈನಾರ್ ಉರುಮಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಬ್ದುಲ್ ಖಾದರ್ ಅಶ್ವಾಫಿ ಉದ್ಘಾಟಿಸಿದರು. ಅಬ್ದುರ್ರಹ್ಮಾನ್ ಫೈಝಿ ಅಸೈ ಪ್ರಾಸ್ತಾವಿಕ ಭಾಷಣ ಮಾಡಿದರು. ಅಬೂಬಕರ್ ಸಿದ್ದೀಖ್ ಅಝ್‍ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣ ಮಾಡಿದರು. ಸಮೀಮ್ ತಂಙಳ್ ಕುಂಬೋಳ್ ಸಮಾರೋಪ ಪ್ರಾರ್ಥನೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷರಾದ ಮೊೈದಿನ್ ಕುಂಞ ಮರಾಠಿಮೂಲೆ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು, ಎಸ್ಕೆಎಸ್ಸೆಸ್ಸೆಎಫ್ ಮಂಜೇಶ್ವರ ಕೌನ್ಸಿಲರ್ ಪಿ.ಎಂ ಅಲಿ ಮುಸ್ಲಿಯಾರ್, ಇಸ್ಹಾಕ್ ನಾಟೆಕಲ್ ಮುಂತಾದವರು ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಉರುಮಣೆ ಶಾಖೆ ಉಪಾಧ್ಯಕ್ಷರಾದ ಮುಹಮ್ಮದ್ ಹನೀಫ್ ನಿಝಾಮಿ ಸ್ವಾಗತಿಸಿ ಎಸ್ಕೆಎಸ್ಸೆಸ್ಸೆಫ್ ಉರುಮಣೆ ಶಾಖೆ ಮಾಜಿ ಕಾರ್ಯದರ್ಶಿ ಇರ್ಶಾದ್ ಕುವೆನಾಡು ವಂದಿಸಿದರು.


