UN NETWORKS
ಮಂಗಳೂರು: ಪ್ರತಿ ವರ್ಷ ನೀಡಲಾಗುವ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ.ಸಾರಾ ಅಬೂಬಕ್ಕರ್ ಹಾಗೂ ನಟಿ, ನಿರ್ದೇಶಕಿ ವಿನಯಾ ಪ್ರಸಾದ್ ಆಯ್ಕೆಯಾಗಿದ್ದಾರೆ.
ಫೆಬ್ರುವರಿ 3 ಮತ್ತು 4ರಂದು ಸೋಮೇಶ್ವರ ಗ್ರಾಮದ ಕೊಲ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು,ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿನ ಕನ್ನಡ ಜಿಲ್ಲಾಡಳಿತ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಒಟ್ಟಾಗಿ ಉತ್ಸವವನ್ನು ಆಯೋಜಿಸಿದೆ.
ವೀರರಾಣಿ ಅಬ್ಬಕ್ಕ ಪ್ರಶಸ್ತಿ ತಲಾ 30 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಫೆ.4ರಂದು ಕೊಲ್ಯದ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.


