UN NETWORKS
ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಅಲಂಕರಿಸುವ ಮೂಲಕ ಪಲಿಮಾರು ಪರ್ಯಾಯ ಬುಧವಾರ ವಿದ್ಯುಕ್ತವಾಗಿ ಆರಂಭವಾಯಿತು. ಪರ್ಯಾಯವನ್ನು ಪ್ರತಿ ಬಾರಿಯೂ ಹಬ್ಬದಂತೆ ಸಂಭ್ರಮಿಸುವುದು ಇಲ್ಲಿನ ರೂಡಿ. ಈ ಭಾರಿಯೂ ಪರ್ಯಾಯ ಅದ್ಧೂರಿಯಾಗಿ, ಭಕ್ತಿ ಭಾವದಿಂದ ನಡೆಯಿತು.
ಈ ಅಮೋಘ ಕ್ಷಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಜೋಡುಕಟ್ಟೆಗೆ ಬಂದ ಪರಿಮಾರು ಮಠಾಧೀಶರಿಗೆ ಭ್ಯವವಾದ ಸ್ವಾಗತವನ್ನು ಕೋರಲಾಯಿತು. ನಂತರ ಅವರನ್ನು ವೈಭವದ ಮೆರವಣಿಗೆಯಲ್ಲಿ ರಥಬೀದಿಗೆ ಕರೆದೊಯ್ಯಲಾಯಿತು. ನಂತರ ಅವರು ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಭವ್ಯವಾಗಿ ಚಾಲನೆ ನೀಡಿದರು.

ನಂತರ ಅವರು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರುವ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಇನ್ನು ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ವಿದ್ಯಾಧೀಶ ಸ್ವಾಮೀಜಿ ನಿಭಾಯಿಸಲಿದ್ದಾರೆ.


