UN NETWORKS
ಉಳ್ಳಾಲ: ನಗರಪ್ರದೇಶದಲ್ಲಿರುವ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶಕ್ಕೂ ಮುಟ್ಟಿಸಬೇಕು ಅನ್ನುವ ಉದ್ದೇಶದಿಂದ ಗ್ರಾಮೀಣ ಭಾಗದ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಕಾಂಕ್ರೀಟಿಕರಣಗೊಂಡ ಮದನಿನಗರ ಮುಖ್ಯರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಮುನ್ನೂರು ಪಂಚಾಯಿತಿ ಸದಸ್ಯರುಗಳಾದ ಮಹಮ್ಮದ್ ಇಝಾಝ್ ಮುನ್ನೂರು , ಇಸ್ಮಾಯಿಲ್, ಹಸೈನಾರ್ ಝೊಹರಾ, ಶಮೀನಾ, ರೆಹಮಾನ್ ಕಾಂಗ್ರೆಸ್ ಮುನ್ನೂರು ವಲಯಾಧ್ಯಕ್ಷ ನವೀನ್ ಡಿಸೋಜ, ತಾ.ಪಂ ಸದಸ್ಯೆ ವಿಲ್ಮಾ ಡಿಸೋಜಾ, ತಾ.ಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಹರೇಕಳ, ಸ್ಥಳೀಯರಾದ ಹನೀಫ್, ಅಝೀಝ್, ನಿಸಾರ್, ಸಮೀರ್ ಉಪಸ್ಥಿತರಿದ್ದರು.


