UN NETWORKS
ಉಳ್ಳಾಲ: ಯಾವುದೇ ಭಾಗದಲ್ಲೂ ನಿರ್ಮಾಣವಾಗುವ ಅಥವಾ ಅಭಿವೃದ್ಧಿ ಕಾಣುವ ರಸ್ತೆಗಳು ನಿಮ್ಮದಾಗಿದೆ, ಈ ನಿಟ್ಟಿನಲ್ಲಿ ನಿಮ್ಮೂರಿನ ರಸ್ತೆಗಳ ಕಾಮಗಾರಿ ಸಂದರ್ಭ ಸಂಪೂರ್ಣ ಸಹಕಾರ ನೀಡಿ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.
ಮುನ್ನೂರು ಗ್ರಾಮದ ಪಂಡಿತೌಸ್ ಮುಖ್ಯರಸ್ತೆಯಿಂದ ಸಂತೋಷ್‍ನಗರ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಮುನ್ನೂರು ಗ್ರಾಮದಲ್ಲಿ ಸಂತೋಷ್‍ನಗರ, ಸುಭಾಷ್‍ನಗರ ರಸ್ತೆ ಅಭಿವೃದ್ಧಿಗೆ ತಲಾ ಐದು ಲಕ್ಷ ಹಾಗೂ ಒಳರಸ್ತೆಗೆ ಹೆಚ್ಚುವರಿ ಐದು ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಾಮಗಾರಿ ಆರಂಭಗೊಂಡು ರಸ್ತೆ ಸಂಪೂರ್ಣ ಗಟ್ಟಿಯಾಗುವತನಕ ವಾಹನ ಸಂಚಾರ ನಿಲ್ಲಿಸಿ ಸಹಕಾರ ನೀಡುವುದು ಗ್ರಾಮಸ್ಥರ ಜವಾಬ್ದಾರಿ ಎಂದು ತಿಳಿರಸ್ತೆಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ವಿಲ್ಮಾ ವಿಲ್ಫ್ರೆಡ್ ಡಿಸೋಜ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾರ್ಮಿಕ ಘಟಕದ ಅಧ್ಯಕ್ಷ ನಾಸೀರ್ ನಡುಪದವು, ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹಸೈನಾರ್, ಬಾಸ್ಕರ, ಪುಷ್ಪಾ, ಐರಿನ್, ಮಾಜಿ ಅಧ್ಯಕ್ಷ ಅಬ್ದುಲ್ ರಹ್‍ಮಾನ್, ಪ್ರಮುಖರಾದ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ನವೀನ್ ಡಿಸೋಜ, ಗಣೇಶ್ ಶೆಟ್ಟಿ, ಇಸ್ಮಾಯಿಲ್ ಇನ್ನಿತರರು ಉಪಸ್ಥಿತರಿದ್ದರು.



