UN NETWORKS
ದೇರಳಕಟ್ಟೆ: ಎಸ್ಸೆಸ್ಸೆಫ್ ದೇರಳಕಟ್ಟೆ ಸೆಕ್ಟರ್ ವತಿಯಿಂದ ಸೆಕ್ಟರ್ ಮಟ್ಟದ ಪ್ರತಿಭೋತ್ಸವವು ಇತ್ತೀಚೆಗೆ ಅಲ್ ಜಮಾಲಿಯ್ಯ ಮದ್ರಸ ಹಿದಾಯತ್ ನಗರ ಅಸೈಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಹಸನ್ ಸಅದಿ ವಹಿಸಿದರು. ಉದ್ಘಾಟನೆಯನ್ನು ಮಸ್ಜಿದ್ ಸ್ವಹಾಬ ಇದರ ಖತೀಬರಾದ ಝಕರಿಯ್ಯ ಲತ್ವೀಫಿ ನಿರ್ವಹಿಸಿದರು. ಸೆಕ್ಟರ್ ಪ್ರ.ಕಾರ್ಯದರ್ಶಿ ಶಫೀರ್ ರೆಂಜಾಡಿ ಸ್ವಾಗತಿಸಿದರು. ಸುನ್ನೀ ನಾಯಕರು ಗುರುವರ್ಯರೂ ಆದ ಇಸ್ಹಾಖ್ ಝುಹ್ರಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್, ಸೆಕ್ಟರ್ ಉಸ್ತುವಾರಿ ಸಿದ್ದೀಖ್ ಕೋಮರಂಗಳರವರು ಶುಭಹಾರೈಸಿದರು.
ಸೆಕ್ಟರ್ ವ್ಯಾಪ್ತಿಯ 13 ಶಾಖೆಗಳ ನಡುವೆ 5 ವಿಭಾಗಳ ಮೂಲಕ 96 ವಿಷಯಗಳಲ್ಲಿ ನಡೆದ ಈ ಸ್ಪರ್ದೆಯು ಸುಮಾರು 300ರಷ್ಟು ಸ್ಪರ್ಧಾರ್ಥಿಗಳು ಭಾಗವಹಿಸಿದರು. ಅಮೋಘ ರೀತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ನಾಟೆಕಲ್ ಶಾಖೆಯು ಚಾಂಪಿಯನ್ ಆಗಿ ಮೂಡಿಬಂತು. ದ್ವಿತೀಯ ಮತ್ತು ತೃತೀಯ ಸ್ಥಾನವು ಕ್ರಮವಾಗಿ ಕಲ್ಪಾದೆ ಮತ್ತು ರೆಂಜಾಡಿ ಶಾಖೆಗಳ ಪಾಲಾಯಿತು. ಕಾರ್ಯಕ್ರಮವು ಯಶಸ್ವಿಗೊಳಿಸಲು ಸೆಕ್ಟರ್ನ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮಸ್ಜಿದ್ ಸಹಾಬ ಮತ್ತು ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಅಕ್ಕರವಳಚ್ಚಿಲ್, ಮಸ್ಜಿದ್ ಸಹಾಬ ಪ್ರಧಾನ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್ ಸೇರಿದಂತೆ ಮಸೀದಿ ಮತ್ತು ಮದ್ರಸದ ಸದಸ್ಯರು ಮತ್ತು ಅಧ್ಯಾಪಕರು ಸೆಕ್ಟರ್ ಉಪಾಧ್ಯಕ್ಷರಾದ ಜುನೈದ್ ಸಖಾಫಿ, ಸಿದ್ದೀಖ್ ಮದನಿ, ಸುಹೈಲ್ ಶಾಂತಿಬಾಗ್, ಕೋಶಾಧಿಕಾರಿ ಅಝೀಝ್ ನಾಟೆಕಲ್, ಕ್ಯಾಂಪಸ್ ಕಾರ್ಯದರ್ಶಿ ಅಲ್ತಾಫ್ ಕಲ್ಪಾದೆ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು. ಪ್ರತಿಭೋತ್ಸವಕ್ಕೆ ಸಹಕಾರ ನೀಡಿದ ಅಲ್ ಜಮಾಲಿಯ್ಯ ಮದ್ರಸ ಅಸೈ ಇದರ ಸದಸ್ಯರನ್ನು ಸಮಾರಂಭದಲ್ಲಿ ಸ್ಮರಣಿಕೆ ನೀಡಿ ಅಬಿನಂದಿಸಲಾಯಿತು. ಪ್ರತಿಭೋತ್ಸವ ಕನ್ವಿನರ್ ಹಮೀದ್ ಸಹಾರ ನಾಟೆಕಲ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಗೆ ವಂದಿಸಿದರು.


