UN NETWORKS
ಸುರತ್ಕಲ್: ನಿನ್ನೆ ಸುರತ್ಕಲ್ ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಮೃತ ದೇಹವನ್ನು ಇಂದು ಬೆಳಿಗ್ಗೆ ಪೊಲೀಸರು ಗೌಪ್ಯವಾಗಿ ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ.
ಇದೀಗ ದೀಪಕ್ ಅವರ ಮನೆ ಎದುರು ಮೃತ ದೇಹ ಹೊತ್ತ ಅಂಬ್ಯುಲೆನ್ಸ್ ತಲುಪಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಮೃತನ ಸಂಬಂಧಿಕರು ಮೃತ ದೇಹವನ್ನು ಅಂಬ್ಯುಲೆನ್ಸ್ ನಿಂದ ಕೆಳಗಿಳಿಸಲು ನಿರಾಕರಿಸಿದ್ದಾರೆ.ಈ ನಡುವೆ ನಿನ್ನೆ ರಾತ್ರಿ ನಗರದ ಕೆಲವು ಕಡೆ ಅಹಿತಕರ ಘಟನೆಗಳು ನಡೆದ ಹಿನ್ನಲೆಯಲ್ಲಿ ಪೊಲೀಸರು ಕರ್ನಾಟಕ ಪೊಲೀಸ್ ಆಕ್ಟ್ ಕಲಂ 35 ರ ಅನ್ವಯ ನಿರ್ಬಂಧಕಾಜ್ಞೆಯನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಿದ್ದರು.
ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯೇ ಪೊಲೀಸರು ಮೃತ ದೇಹವನ್ನು ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ.


