UN NETWORKS
ಉಳ್ಳಾಲ: ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆರನೇ ವರ್ಷದ ನಾಡು ನುಡಿ ವೈಭವದ ರತ್ನೋತ್ಸವ -2017 ಡಿ.29ರ ಶುಕ್ರವಾರ ಸಂಜೆ 3 ಗಂಟೆಯಿಂದ ರಾತ್ರಿ 10ರ ವರೆಗೆ ದೇರಳಕಟ್ಟೆಯ ಗ್ರೀನ್ ಗ್ರೌಂಡಿನಲ್ಲಿ ಜರಗಲಿದೆ ಎಂದು ರತ್ನ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ.
ದೇರಳಕಟ್ಟೆ ಶಾಲೆಯಲ್ಲಿ ಬುಧವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರು, ಸಾಹಿತಿ ಮಲಾರು ಜಯರಾಮ ರೈ ಆಯ್ಕೆಯಾಗಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ಬೆಳ್ಮ ಗ್ರಾಮ ಪಂಚಾಯತ್ ವಠಾರದಿಂದ ಸಮ್ಮೇಳನದ ಅಧ್ಯಕ್ಷರ ಭವ್ಯ ಮೆರವಣಿಗೆ ವೀರಗಾಸೆ, ಚೆಂಡೆ ವಾದನ, ಗೊಂಬೆ ಕುಣಿತದ ಜತೆಗೆ ನಡೆಯಲಿದೆ. ಧ್ವಜಾರೋಹಣವನ್ನು ಟ್ರಸ್ಟ್ ಕೋಶಾಧಿಕಾರಿ ರತ್ನಾವತಿ ಕೆ.ಶೆಟ್ಟಿ ವಹಿಸಲಿದ್ದಾರೆ. ರತ್ನೋತ್ಸವದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೃಂಗೇರಿ ಶ್ರೀ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ರಶೀದಾ ಭಾನು, ಧನಲಕ್ಷ್ಮೀ ಗಟ್ಟಿ, ನಿರ್ಮಿತಿ ಕೇಂದ್ರ ಸುರತ್ಕಲ್ ಇದರ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾಧಾವಿಲಾಸ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗ , ಪಾತ್ರಧಾರಿಗಳಾಗಿ ದಿಶಾ.ಸಿ.ಶೆಟ್ಟಿ ಕಟ್ಲ, ಡಾ. ವರ್ಷ ಶೆಟ್ಟಿ ಕಾಣಿಸಲಿದ್ದಾರೆ. ಸಂಜೆ ಭೂಸೇನಾ ಮಾಜಿ ಅಧಿಕಾರಿ ಬ್ರಿಗೇಡಿಯರ್ ಐ.ಎನ್.ರೈ ಇವರಿಂದ ನಾನು ಮತ್ತು ನನ್ನ ದೇಶ ವಿಚಾರ ಮಂಡಿಸಲಿದ್ದಾರೆ.
ಸಮರೋಪ ಸಮಾರಂಭದಲ್ಲಿ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ವಿದ್ಯಾರತ್ನ ಪ್ರಶಸ್ತಿಯನ್ನು ತುಳು ಕನ್ನಡ ಸಾಹಿತಿ ಡಾ.ವಾಮನ ನಂದಾವರ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಇವರು ಪ್ರಧಾನ ಮಾಡಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ, ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ನಯೀಮ ಹಮೀದ್ ಉಪಸ್ಥಿತರಿದ್ದರು.




