UN NETWORKS
ಉಳ್ಳಾಲ: ಪುತ್ತೂರು ಸುನ್ನಿ ಸೆಂಟರ್ ನಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್.(ಕೆಸಿಎಫ್.)ನ ಸೌದಿ ಅರೇಬಿಯಾದಿಂದ ಎಕ್ಷಿಟ್ ಆಗಿ ಬಂದ ಹಾಗೂ ರಜಾವಧಿಯಲ್ಲಿ ಊರಿಗೆ ತೆರಳಿರುವ ಕಾರ್ಯಕರ್ತರಿಂದ ಪ್ರವಾದಿ ಜನ್ಮದಿನದಿಂದ ಪುಳಕಿತಗೊಂಡ ರಬೀಹ್’ಗೆ (ಮೌಲಿದ್)ಪ್ರವಾದಿ ಕೀರ್ತನೆ ಹಾಡುವ ಮೂಲಕ ಶುಭ ವಿದಾಯ ಕೋರಲಾಯಿತು.
ಪ್ರಸ್ತುತ ಕಾರ್ಯಕ್ರಮವನ್ನು ತಾಜುದ್ದೀನ್ ಸಖಾಫಿ ಸುಳ್ಯ ಉದ್ಘಾಟಿಸಿ ಕೆಸಿಎಫ್ ದಮ್ಮಾಂ ಝೋನಲ್ ಅದ್ಯಕ್ಷ ಉಮ್ಮರ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಅದ್ಯಕ್ಷ ವಹಿಸಿ ಮಾತನಾಡಿ ಪ್ರವಾದಿಯ ಉದಾತ್ತ ಸಂದೇಶವನ್ನು ತಿಳಿ ಹೇಳಿ ಕೆಸಿಎಫ್ ಮತ್ತು ಎಸ್ಸೆಸ್ಸೆಫ್ ಇವೆರಡೂ ಒಂದೇ ನಾಣ್ಯದ ಎರಡು ಮುಖ.ಕೆಸಿಎಫ್’ಗೆ ಜನ್ಮ ನೀಡಿದ ನಾಡು ಸೌದಿ ಅರೇಬಿಯಾ ತದನಂತರ ಜಿಸಿಸಿಯ ಆರು ರಾಷ್ಟ್ರ ದಾಟಿ ಇದೀಗ ಯೂರೋಪ್ ರಾಷ್ಟ್ರಗಳಲ್ಲಿ ವ್ಯಾಪಿಸಿ ಅನಿವಾಸಿ ಭಾರತೀಯರಿಗೆ ಆಸರೆಯ ಸಂಘಟನೆಯಾಗಿ ಒಂದು ವಟವೃಕ್ಷವಾಗಿ ಬೆಳೆದಿದೆ ಎಂದು ಕೆಸಿಎಫ್ ಕಾರ್ಯಚಟುವಟಿಕೆಯ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಅದ್ಯಕ್ಷ ನ್ಯಾಯವಾದಿ ಶಾಕೀರ್ ಹಾಜಿ ಮಿತ್ತೂರು ಮಾತನಾಡಿ ಕೆಸಿಎಫ್ ಕಾರ್ಯಕರ್ತರು ತಾಯ್ನಾಡಿನ ಬಡ,ನಿರ್ಗತಿಕರ ಏಳಿಗೆಗಾಗಿ ದುಡಿಮೆಯ ನಡುವೆ ಸಿಗುವ ಹೃಸ್ವ ಸಮಯವನ್ನು ಮೀಸಲಿಡುತ್ತಾರೆ ಇದು ಕೆಸಿಎಫ್’ನ ಶ್ಲಾಘನೀಯ ಕಾರ್ಯ ಎಂದರು.
ಮುಖ್ಯ ಭಾಷಣಗಾರನಾಗಿ ಅಬ್ದುಲ್ ಖಾದರ್ ಫೈಝಿ ಕೊಡುಂಗೈ ಮಾತನಾಡಿ ಅನಿವಾಸಿ ಕನ್ನಡಿಗರು ಕಟ್ಟಿ ಬೆಳೆಸಿದ ಕೆಸಿಎಫ್’ ಹುಟ್ಟಿ ಬೆರಳೆಣಿಕೆಯ ವರ್ಷವಷ್ಟೇ ಆಗಿರುವುದು ಅದರ ಸೇವೆ ಅದ್ವಿತೀಯ ಮತ್ತು ಚರಿತ್ರೆಯ ಪುಟಗಳಲ್ಲಿ ಚಿರಸ್ಮರಣೀಯ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಚರ್ಚಾಗೋಷ್ಟಿ ಕಾರ್ಯಕ್ರಮ ನಡೆಯಿತು.ಚರ್ಚಾಗೋಷ್ಟಿಗೆ ಕೆಸಿಎಫ್ ದಮ್ಮಾಂ ಝೋನಲ್ ನಾಯಕ ಇಕ್ಬಾಲ್ ಕೈರಂಗಳ ಹಾಗೂ ಕೆಸಿಎಫ್ ಅಲ್ ಹಸ್ಸಾ ಸೆಕ್ಟರ್ ಪ್ರ.ಕಾರ್ಯದರ್ಶಿ ಸಿ.ಐ.ಇಸ್ಹಾಕ್ ಫಜೀರ್ ನೇತೃತ್ವ ವಹಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಅದ್ಯಕ್ಷ ನ್ಯಾಯವಾದಿ ಶಾಕೀರ್ ಹಾಜಿ, ಅಬ್ದುಲ್ ಖಾದರ್ ಫೈಝಿ ಕೊಡುಂಗೈ, ಕೆಸಿಎಫ್ ದಮ್ಮಾಂ ಝೋನ್ ಅದ್ಯಕ್ಷ ಉಮ್ಮರ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ,ಕೆಸಿಎಫ್ ನಾಯಕರುಗಳಾದ ಶಾಫಿ ಮದನಿ ಮಾಡವು ದಮ್ಮಾಂ, ಅಬ್ದುಲ್ ರಶೀದ್ ಸಖಾಫಿ ಕುಂಬ್ರ ದಮ್ಮಾಂ, ಅನಸ್ ಸಹದಿ ದಮ್ಮಾಂ,ಮೆಹಬೂಬ್ ಸಖಾಪಿ ಕಿನ್ಯ.ಮೆಹಮೂದ್ ಉಳ್ಳಾಲ್ ಹಾಗೂ ಹಲವಾರು ಕೆಸಿಎಫ್ ಕಾರ್ಯಕರ್ತರು ಉಪಸ್ಥಿತಿಯಿದ್ದರು.
ಅಬ್ದುಲ್ ರಶೀದ್ ಕುಂಬ್ರ ದಮ್ಮಾಂ ಸ್ವಾಗತಿಸಿ ಅನಸ್ ಸಹದಿ ದಮ್ಮಾಂ ಕಾರ್ಯಕ್ರಮವನ್ನು ವಂದಿಸಿದರು.


