UN NETWORKS
ಉಳ್ಳಾಲ: ಇಸ್ಲಾಹಿ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವವು 20.12.2017 ರವರೆಗೆ ಜರಗಲಿದ್ದು,20.12.2017 ರಂದು ಸಮಯ ಪೂರ್ವಾಹ್ನ ಗಂಟೆ 10.00 ಕ್ಕೆ ಕರ್ನಾಟಕ ಸರ್ಕಾರದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾದ ಮಾನ್ಯ ಯು.ಟಿ.ಖಾದರ್ ರವರು ಧ್ವಜಾರೋಹಣ ನೆರವೇರಿಸಿ,ಕ್ರೀಡೋತ್ಸವ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತಾಡಿದರು.
ಹಾಗೂ ಜಮ್ಮು ಕಾಶ್ಮೀರದಲ್ಲಿ ಜರಗಿದ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಸಭಾಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಜಿ.ಅಬ್ದುಲ್ ರಜಾಕ್ರವರು ವಹಿಸಿದರು.ಶಾಲಾ ಆಡಳಿತಾಟ್ರಸ್ಟಿಯವರು ಉಪಸ್ಥಿತರಿದ್ದರು,ವಿದ್ಯಾರ್ಧಿಯಾದ ಅಲಿಮಾಶಾಝ್ಮ್ ರವರು ಅಭಿನಂದಿಸಿದರು.ವಿದ್ಯಾರ್ಥಿಯಾದ ಹಂಝೀನರವರು ವಂದಿಸಿದರು,ಶಿಕ್ಷಕಿಯಾದ ನಿತಾಶ ಹಾಗೂ ಜುಲ್ಫಿ ಕಾಸಿಮ್ ರವರು ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಕಾರ್ಯಕ್ರಮದ ನಂತರ ಸಂಸ್ಥೆಯ ಸಲ್ ಸಬೀಲ್ ಮಸೀದಿಯ ರಸ್ತೆಯನ್ನು ಕರ್ನಾಟಕ ಸರ್ಕಾರದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾದ ಮಾನ್ಯ ಯು.ಟಿ.ಖಾದರ್ರವರು ಉದ್ಘಾಟಿಸಿ ಮಾತಾನಾಡಿದರು.


