UN NETWORKS
ಕಿನ್ಯಾ: ಕಿನ್ಯಾ ಗ್ರಾಮದ ಯುವ ಕಾಂಗ್ರೆಸ್ ಸಮಿತಿಯ ರಚನೆಯು ದಿನಾಂಕ 20-12-2017 ರಂದು ರಾತ್ರಿ 7:30 ಕ್ಕೆ ಬೆಳರಿಂಗೆ ಜಂಕ್ಷನ್ನಲ್ಲಿ ಮಂಗಳೂರು ವಿಧಾನ ಕ್ಷೇತ್ರದ ಯುವ ಅಧ್ಯಕ್ಷರಾದ ರವುಫ್ ಸಿ.ಎಂ.ರವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯ ಸ್ವಾಗತವನ್ನು ಮಂಗಳೂರು ವಿಧಾನ ಸಬಾ ಕ್ಷೇತ್ರದ ಕಾರ್ಯದರ್ಶಿ ಫಾರೂಕ್ ಕಿನ್ಯಾ ನೆರೆವೇರಿಸಿದರು ನಂತರ . ಯುವ ಕಾರ್ಯಕರ್ತರ ಬಗ್ಗೆ ಸವಿಸ್ತಾರವಾಗಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬುಸಮೀರ್ ಪಜೀರ್ ಮಾತನಾಡಿದರು.ಕಿನ್ಯಾ ಯುವ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಅನ್ಸಾರ್ ಕಿನ್ಯ ಸಭೆಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ಸಮಿತಿಯ ಪಧಾಧಿಕಾರಿಗಳನ್ನು ಆಯ್ಕೆಮಾಡಿ ಪಕ್ಷದ ಧ್ವಜ ಮತ್ತು ಆದೇಶ ಪತ್ರ ನೀಡಿ ಗೌರವಿಸಿದರು.
ಮುಂದಿನ ದಿನಗಳಲ್ಲಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ ವಾರ್ಡ್ ಸಮಿತಿಗಳನ್ನು ರಚಿಸಲು ಕರೆನೀಡಿದರು. ಮುಖ್ಯ ಅತಿಥಿಯಾಗಿ ಬೆಳರಿಂಗೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾದ ಉಮರ್ ಕುಞ ಹಾಗೂ ಅಲ್ಪಸಂಖ್ಯಾತ ಸದಸ್ಯರಾದ ಅಬೂಬಕರ್ ಹಾಜಿ ಕಲ್ಲಾಂಡ ಉಪಸ್ತಿತಿದ್ದರು. ಕೊನೆಯಲ್ಲಿ ನೂತನವಾಗಿ ಆಯ್ಕೆಯಾದ ಕಿನ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಶಾಹಿದ್ ಕಿನ್ಯಾ ವಂದನೆ ಸಮರ್ಪಿಸಿದರು.


