UN NETWORKS
ಉಳ್ಳಾಲ: ತೊಕ್ಕೊಟ್ಟು ಭಾಗದಲ್ಲಿ ಸುಸಜ್ಜಿತ ಕಬ್ಬಡ್ಡಿ ಕೋರ್ಟಿನ ಅಗತ್ಯವಿದ್ದು, ಅದಕ್ಕಾಗಿ ನೂತನ ಸಮಿತಿ ವತಿಯಿಂದ ಸಮಬಂಧಪಟ್ಟವರ ಗಮನ ಸೆಳೆಯಲಾಗುವುದು ಎಂದು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮಂಗಳೂರು ಹಾಗೂ ಮಂಗಳೂರು ಗ್ರಾಮಾಂತರ ಸಮಿತಿ ಉಸ್ತುವಾರಿ ಹಾಗು ಉಪಾಧ್ಯಕ್ಷ ಕೆ.ಟಿ.ಸುವರ್ಣ ಹೇಳಿದ್ದಾರೆ.
ಅವರು ಮಂಗಳೂರು ಗ್ರಾಮಾಂತರ ಅಮೆಚೂರು ಕಬ್ಬಡಿ ಎಸೋಸಿಯೇಷನ್ ಉಳ್ಳಾಲ ಇದರ ತೊಕ್ಕೊಟ್ಟು ಒಳಪೇಟೆಯ ಸುವರ್ಣ ಕಾಂಪ್ಲೆಕ್ಸ್ ನ ಆಮಂತ್ರಣ ಸಭಾಭವನದಲ್ಲಿ ಸೋಮವಾರ ಜರಗಿದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ತೊಕ್ಕೊಟ್ಟು ಮತ್ತು ಉಳ್ಳಾಲ ಭಾಗದ ಕಬ್ಬಡ್ಡಿ ತಂಡಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹೆಸರು ತಂದವರಿದ್ದಾರೆ. ತೊಕ್ಕೊಟ್ಟು ಭಾಗದ ಕಬ್ಬಡ್ಡಿ ತಂಡಗಳು ನಂ.1 ಅನಿಸಿಕೊಂಡಿದೆ. ಅದನ್ನು ಉಳಿಸಿ ಮತ್ತೆ ಯುವಪೀಳಿಗೆಯನ್ನು ಆಟದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನೂತನ ಸಮಿತಿಯನ್ನು ರಚಿಸಲಾಗಿದೆ. ಈ ಭಾಗದಲ್ಲಿ ಕಬ್ಬಡ್ಡಿ ಮ್ಯಾಟ್ ಸರಕಾರದಿಂದ ದೊರಕಿಸಿಕೊಡಲು ಸಂಬಂಧಿಸಿದ ಇಲಾಖೆಗೆ ಹಾಗೂ ಸಚಿವರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಕಬ್ಬಡ್ಡಿಗಾಗಿ ಜಾಗವನ್ನು ಗುರುತಿಸಿ ಸುಸಜ್ಜಿತ ಕೋರ್ಟಿನ ರಚನೆಯಾಗಬೇಕಿದ್ದು, ಅದಕ್ಕಾಗಿ ಸಮಿತಿ ಶ್ರಮವಹಿಸಲಿದೆ ಎಂದ ಅವರು ಮಂಗಳೂರು ಗ್ರಾಮಾಂತರ ಕಬ್ಬಡ್ಡಿ ಅಸೋಸಿಯೇಷನ್ ಜಿಲ್ಲೆಗೆ ಮಾದರಿಯಾಗಿ ಕಾರ್ಯಾಚರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಗ್ರಾಮಾಂತರ ಅಮೆಚೂರು ಕಬ್ಬಡಿ ಅಸೋಸಿಯೇಷನ್ ಉಳ್ಳಾಲ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಭಟ್ನಗರ ಇವರನ್ನು ಆಯ್ಕೆ ಮಾಡಲಾಯಿತು.
ಉದ್ಯಮಿ ಎ.ಜೆ.ಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಕಬ್ಬಡ್ಡಿ ಆಟಗಾರ ಅಮರನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ನಿನ ಕಾರ್ಯಾಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಪೂಜಾರಿ, ಬಿಜೆಪಿ ಮುಖಂಡರುಗಳಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್, ರೈಲ್ವೇ ಸಲಹಾ ಮಂಡಳಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ, ಉದ್ಯಮಿ ಹರೀಶ್ ಕುಮಾರ್ ಕುತ್ತಾರ್ , ಚಂದ್ರಹಾಸ್ ಪಂಡಿತ್ ಹೌಸ್ ಮುಖ್ಯ ಅತಿಥಿಗಳಾಗಿದ್ದರು.
ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಈ ಬಾರಿಯ ಕಬ್ಬಡ್ಡಿ ದ.ಕ ಜಿಲ್ಲಾ ಚಾಂಪಿಯನ್ಸ್ ಟ್ರೋಫಿ ಉಳ್ಳಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಪುರುಷ ಮತ್ತು ಮಹಿಳೆಯರ ತಂಡಗಳಿಗೆ ನಡೆಯುವ ಪಂದ್ಯಾಟ ಉಳ್ಳಾಲ ಭಾಗದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ ಎಂದು ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಸುರೇಶ್ ಭಟ್ನಗರ:
ಮಂಗಳೂರು ಗ್ರಾಮಾಂತರ ಅಮೆಚೂರು ಕಬ್ಬಡಿ ಅಸೋಸಿಯೇಷನ್ ಉಳ್ಳಾಲ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಭಟ್ನಗರ ಆಯ್ಕೆಯಾಗಿದ್ದಾರೆ.
ಮಹಾಪೋಷಕರಾಗಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಪೋಷಕರುಗಳಾಗಿ ಚಂದ್ರಹಾಸ ಅಡ್ಯಂತಾಯ, ಚಂದ್ರಶೇಖರ್ ಉಚ್ಚಿಲ್, ಕೆ.ಪಿ. ಸುರೇಶ್, ಹರೀಶ್ ಕುಮಾರ್ ಕುತ್ತಾರ್, ಹುಸೈನ್ ಕುಂಞಮೋನು, ಗೌರವಾಧ್ಯಕ್ಷರಾಗಿ ಎ.ಜೆ.ಶೇಖರ್, ಕಾರ್ಯಾಧ್ಯಕ್ಷರಾಗಿ ಚಂದ್ರಹಾಸ್ ಪಂಡಿತ್ ಹೌಸ್, ಉಪಾಧ್ಯಕ್ಷರುಗಳಾಗಿ ಸತೀಶ್ ಕರ್ಕೇರಾ, ಮಹಮ್ಮದ್ ತ್ವಾಹ, ಮಾಧವ ಬಗಂಬಿಲ, ಜುಬೈರ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ರೋಹನ್ ತೊಕ್ಕೊಟ್ಟು, ಜತೆ ಕಾರ್ಯದರ್ಶಿಗಳಾಗಿ ಅರುಣ್ ಕುಮಾರ್ ಗಾಂಧಿನಗರ, ಶರತ್ ಗಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಭಗವಾನ್ ದಾಸ್ ತೊಕ್ಕೊಟ್ಟು, ಖಜಾಂಚಿಯಾಗಿ ನಾಗೇಶ್ ಅಡ್ಕ, ದೇವದಾಸ್ ಉಳ್ಳಾಲ್, ಸಮಿತಿ ಸದಸ್ಯರುಗಳಾಗಿ ಫಾರುಕ್ ಉಳ್ಳಾಲ, ಹರೀಶ್ ಉಳ್ಳಾಲ, ನವೀನ್ ದೇವಿನಗರ, ಇಸ್ಮಾಯಿಲ್ ಕಿನ್ಯಾ, ಪ್ರವೀಣ್.ಎಸ್. ಕುಂಪಲ, ಪೊಡಿಮೋನು ಉಳ್ಳಾಲ, ಗಣೇಶ್ ಕಾಪಿಕಾಡ್, ಹೆನ್ರಿ ಡಿಸೋಜ ತೊಕ್ಕೊಟ್ಟು, ಸತ್ತಾರ್ ತಲಪಾಡಿ ಆಯ್ಕೆಯಾಗಿದ್ದಾರೆ.







