UN NETWORKS
ಕೋಟೆಕಾರು: ಕೋಟೆಕಾರು ವ್ಯವಸಾಯ ಬ್ಯಾಂಕ್ ನ ಮೂವರು ಸೆಕ್ಯೂರಿಟಿ ಸಿಬ್ಬಂದಿಗಳು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಿಗ್ಗೆ ಕೋಟೆಕಾರು ವ್ಯವಸಾಯ ಬ್ಯಾಂಕಿನಲ್ಲಿ ನಡೆದಿದು, ಸಿಡಿಲು ಬಡಿದು ಮೂವರು ಮೃತ ಪಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಉಮೇಶ್, ಸೋಮನಾಥ್, ಹಾಗೂ ಸಂತೋಷ್ ಮೃತ ದುರ್ದೈವಿಗಳು.
ಸೋಮವಾರ ಡಿಢೀರನೇ ಸುರಿದ ಸಿಡಿಲು, ಮಿಂಚು ಗಾಳಿ ಮಳೆಯ ಪರಿಣಾಮ ವಿದ್ಯುತ್ ತಗಲಿ ಬ್ಯಾಂಕಿನ ಒಳಗಿದ್ದ ಸೆಕ್ಯೂರಿಟಿ ಸಿಬ್ಬಂದಿಗಳು ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದ್ದು ಮತ್ತಷ್ಟು ಮಾಹಿತಿಗಳು ಇನ್ನಷ್ಟೇ ತಿಳಿಯಬೇಕಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ


