Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಸುದೀರ್ಘ ಅವಧಿಯಲ್ಲೂ ಪೂರ್ಣಗೊಳ್ಳದ ಒಳಚರಂಡಿ ಕಾಮಗಾರಿ

UllalaVaniBy UllalaVaniOctober 31, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಹತ್ತು ವರ್ಷಗಳ ಸುದೀರ್ಘ ಅವಧಿ ಹಿಡಿದರೂ ಒಳಚರಂಡಿ ಕಾಮಗಾರಿ ಅರೆಬರೆ ನಡೆದಿರುವ ಹಿನ್ನೆಲೆಯಲ್ಲಿ ಆಕ್ರೋಶಿತರಾದ ನಗರಸಭಾ ಸದಸ್ಯರು ಸೋಮವಾರ ನಡೆದ ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ರೋಶಿತರಾದರು. ಇದರ ಪರಿಣಾಮ ಸಂಬಂಧಪಟ್ಟ ಇಲಾಖೆ ಅಧಿಕಾರಿ ತೀವೃವಾಗಿ ತರಾಟೆಗೆ ಒಳಗಾದರು.

ULL.OCT-30=5, ULLAL T.P. MEET

ಕೌನ್ಸಿಲರ್ ಅಬ್ದುಲ್ ಫತಾಕ್ ಯುಜಿಡಿ ಕಾಮಗಾರಿ ಆರಂಭಗೊಂಡ ವರ್ಷ ಹತ್ತಾದರೂ ಇನ್ನೂ ಮುಗಿದಿಲ್ಲ, 65 ಕೋಟಿ ಯೋಜನೆಯಲ್ಲಿ ಆರಂಭಿಸಿರುವ ಕಾಮಗಾರಿ ಮುಗಿಯುವ ಹೊತ್ತಿಗೆ 300 ಕೋಟಿ ದಾಟುವ ಭೀತಿಯಿದೆ. ಪ್ರತೀ ಸಭೆಯಲ್ಲೂ ಅಧಿಕಾರಿ ಶೋಭಾ ಅವರು ಆಗಮಿಸಿ ಉಡಾಫೆಯ ಉತ್ತರ ನೀಡುತ್ತಾರೆ. ಮುಂದಕ್ಕೆ ಶೋಭಾ ಬದಲು ಇಲಾಖೆಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೇ ಬರಬೇಕು ಎಂದು ಆಗ್ರಹಿಸಿದರು.

ಇವರ ಮಾತಿಗೆ ಮುಸ್ತಫಾ ಅಬ್ದುಲ್ಲಾ ಬೆಂಬಲ ಸೂಚಿಸಿ 2014ರಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಶೋಭಾ ಅವರೇ ಹಿಂದೆ ತಿಳಿಸಿದ್ದರು. ಇದೀಗ 2017 ಆದರೂ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಆರಂಭಿಸುವಾಗಲೇ ಭೂಸ್ವಾಧೀನ ಮಾಡದ್ದು ಇಲಾಖೆಯ ತಪ್ಪು. ಅದನ್ನು ನಗರಸಭೆ ಮೇಲೆ ಹಾಕಬೇಡಿ. ನಿಮಗೆ ಕೆಲಸ ಮಾಡಲು ಆಗದಿದ್ದರೆ ಬಿಟ್ಟುಬಿಡಿ ಎಂದರು.

ಫಾರೂಕ್ ಉಳ್ಳಾಲ ಧ್ವನಿಗೂಡಿಸಿ ಯುಜಿಡಿ ಕಾಮಗಾರಿಯೇ ಕಳ್ಳ ಪೊಲೀಸ್, ಮ್ಯಾಚ್ ಫಿಕ್ಸಿಂಗ್‍ನಂತಾಗಿದೆ. ಯುಜಿಡಿ ಮತ್ತು ನೀರಿನ ಪೈಪ್ ಜೊತೆಯಾಗಿ ಹಾಕಿದ್ದರಿಂದ ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿದೆ. ಕೆಡಿಬಿ ಯೋಜನೆಯ ತುಂಬೆ ನೀರು ಹೇಳಿಕೊಳ್ಳಲು ನಗರಸಭಾ ವ್ಯಾಪ್ತಿಗೆ ಬರುತ್ತದೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಕೇವಲ ನಾಲ್ಕು ವಾರ್ಡ್‍ಗಳಿಗೆ ಮಾತ್ರವೇ ಹೋಗುತ್ತಿದೆ. ಈ ಬಗ್ಗೆ ಚರ್ಚಿಸಲು ವಿಶೇಷ ಸಭೆ ನಿಗದಿಪಡಿಸುವಂತೆ ಒತ್ತಾಯಿಸಿದರು. ಅಶ್ರಫ್ ಬಾವ, ಮಹಮ್ಮದ್ ಮುಕಚ್ಚೇರಿ, ದಿನೇಶ್ ರೈ ಸಹಿತ ಇತರ ಕೌನ್ಸಿಲರ್‍ಗಳು ಧ್ವನಿಗೂಡಿಸಿದರು.

ತೆಂಗಿಗೆ ರೋಗವಲ್ಲ, ಕೀಟಬಾಧೆ:
ಸಭೆಯಲ್ಲಿ ತೋಟಕಾರಿಕಾ ಇಲಾಖಾಧಿಕಾರಿ ಪ್ರದೀಪ್ ಡಿಸೋಜ ಭಾಗವಹಿಸಿ, ಉಳ್ಳಾಲ ಭಾಗದಲ್ಲಿ ತೆಂಗಿನ ಗರಿಗಳು ಒಣಗುತ್ತಿದ್ದು ಕೀಟಬಾಧೆ ಕಾರಣ. ತೆಂಗನ್ನೇ ನಂಬಿರುವವರ ಆರೈಕೆಯಿಂದ ಅಂತಹ ತೋಟಗಳಿಗೆ ಕೀಟಬಾಧೆ ಬಂದಿರಲಿಲ್ಲ. ಆದರೆ ನಿರ್ಲಕ್ಷ್ಯಕ್ಕೊಳಗಾದ ತೆಂಗಿಗೆ ಬಂದ ಕೀಟಬಾಧೆ ಎಲ್ಲೆಡೆ ವ್ಯಾಪಿಸಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಉಳ್ಳಾಲದಲ್ಲೇ ಸಭೆ ನಡೆಸಲಾಗುತ್ತದೆ ಎಂದರು. ರೋಗ ಬಂದಿರುವುದು ಉಳ್ಳಾಲದಲ್ಲಿ ಆಗಿರುವುದರಿಂದ ಇಲ್ಲೇ ಉಪ ಕಚೇರಿ ತೆರೆಯುವಂತೆ ಕೌನ್ಸಿಲರ್‍ಗಳು ಆಗ್ರಹಿಸಿದರು.

ರಸ್ತೆಬದಿ ಅಂಗಡಿ ತೆಗೆಯಲು ಬಿಡಲಾರೆವು:
ಮಾಸ್ತಿಕಟ್ಟೆಯಲ್ಲಿ ರಸ್ತೆಬದಿ ಪೆಟ್ಟಿಗೆ ಅಂಗಡಿಗಳನ್ನಿಟ್ಟು ವ್ಯಾಪಾರ ಮಾಡಲಾಗುತ್ತಿದೆ, ಮೀನು ಮಾರಾಟವೂ ನಡೆಯುತ್ತಿದ್ದು ಇವುಗಳನ್ನು ತೆರವುಗೊಳಿಸಬೇಕು ಎಂದು ಪ್ರತಿಪಕ್ಷದ ಮಹಾಲಕ್ಷ್ಮಿ ಒತ್ತಾಯಿಸಿದರು. ಈ ಮಾತಿಗೆ ತೀವೃ ಅಸಮಾಧಾನ ವ್ಯಕ್ತಪಡಿಸಿದ ಫಾರೂಕ್ ಉಳ್ಳಾಲ್, ಇಂದು ವಿದೇಶದಲ್ಲಿರುವವರು ಹಿಂದಕ್ಕೆ ಬರುತ್ತಿದ್ದು, ಪದವೀಧರರಿಗೂ ಉದ್ಯೋಗ ಇಲ್ಲದಂತಾಗಿದೆ. ಪ್ರತಿಪಕ್ಷ ನಾಯಕಿ ಸದಾ ಬಡವರ ವಿರುದ್ಧವೇ ಮಾತನಾಡುತ್ತಾರೆ. ರಸ್ತೆಬದಿ ವ್ಯಾಪಾರದಿಂದ ಜೀವನ ನಿರ್ವಹಿಸುವುದಕ್ಕೆ ಅಡ್ಡಿ ಬಂದಲ್ಲಿ ಸಭಾತ್ಯಾಗ ನಡೆಸುತ್ತೇವೆ ಎಂದು ಎಚ್ಚರಿಸಿದರು. ಬಾಝಿಲ್ ಡಿಸೋಜ ಹಾಗೂ ಕೆಲವು ಕೌನ್ಸಿಲರ್‍ಗಳು ಮಾತಿಗೆ ಸಮಹಮತ ವ್ಯಕ್ತಪಡಿಸಿದರು.

ಝುಬೇರ್ ಕುಟುಂಬಕ್ಕೆ ಗರಿಷ್ಟ ಪರಿಹಾರ:
ದುಷ್ಕರ್ಮಿಗಳ ತಲವಾರು ದಾಳಿಗೆ ಬಲಿಯಾದ ಝುಬೇರ್ ಕುಟುಂಬಕ್ಕೆ ಗರಿಷ್ಟ ಪರಿಹಾರ ನೀಡುವಂತೆ ಕೌನ್ಸಿಲರ್‍ಗಳು ಆಗ್ರಹಿಸಿದರು. ಈ ಸಂದರ್ಭ ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ, ಕೌನ್ಸಿಲರ್‍ಗಳ ಗೌರವಧನ ಹಾಗೂ ಅಧಿಕಾರಿ ಸಿಬ್ಬಂದಿಯ ಒಂದು ದಿನದ ವೇತನ ನೀಡೋಣ ಎಂದರು. ಈ ಮಾತಿಗೆ ಫಾರೂಕ್ ಉಳ್ಳಾಲ್, ಮಹಮ್ಮದ್ ಮುಕಚ್ಚೇರಿ ಹೊರತುಪಡಿಸಿ ಇನ್ಯಾರೂ ಮಾತನಾಡದ ಕಾರಣ ಸಭೆ ಮುಂದುವರಿಯಿತು.

ಸದ್ಭಾವನಾ ದಿನ-ಕನ್ನಡ ರಾಜ್ಯೋತ್ಸವ ಆಚರಣೆ
ಕನ್ನಡ ರಾಜ್ಯೋತ್ಸವ ಹಾಗೂ ಸದ್ಭಾವನಾ ದಿನ ಜೊತೆಯಾಗಿ ಆಚರಿಸುವುದರಿಂದ ಖರ್ಚು ಉಳಿಸಬಹುದು. ನ.1ರಂದು ಬೆಳಗ್ಗೆ ಸ್ವಸಹಾಯ ಸಂಘದ ಸದಸ್ಯೆಯರಿಗೆ ಸ್ಪರ್ಧೆ, ಶಾಲಾ ಮಕ್ಕಳ ಮೆರವಣಿಗೆ, ಚೆಕ್ ಅಂಗವೈಕಲ್ಯವುಳ್ಳವರಿಗೆ ಪರಿಕರ ಹಾಗೂ ವಿತರಣೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ.

ಸಿಆರ್‍ಝೆಡ್ ಬಗ್ಗೆ ಆಕ್ಷೇಪಣೆ ಸಲ್ಲಿಸುವ ನಿಟ್ಟಿನಲ್ಲಿ ನ.3ರಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಇಂದಿರಾ ಕ್ಯಾಂಟೀನ್ ಆರಂಭಕ್ಕೆ ತೊಕ್ಕೊಟ್ಟು ಚೆಕ್‍ಪೋಸ್ಟ್ ಬಳಿ 15 ಸೆಂಟ್ಸ್ ಜಮೀನು ಗುರುತಿಸಲಾಗಿದೆ ಎಂದು ಪೌರಾಯುಕ್ತೆ ವಾಣಿ ವಿ.ಆಳ್ವ ತಿಳಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಎಸ್ ವಿಪಿ ಕನ್ನಡ ಸಂಸ್ಥೆಯ ಅಧ್ಯಕ್ಷರಾಗಿ ಡಾ.ಧನಂಜಯ ಕುಂಬ್ಳೆ ನೇಮಕ

July 2, 2026

ಧರಾಶಾಹಿಯಾದ ಮನೆ ಕೆರೆಬೈಲ್ ಗುಡ್ಡಕ್ಕೆ ಸಚಿವ ಯು.ಟಿ. ಖಾದರ್ ಭೇಟಿ, ಅಪಾಯದ ಹಂತದಲ್ಲಿರುವ ಹದಿನಾಲ್ಕು ಮನೆಗಳಿಗೆ ಒಂದು ತಿಂಗಳ ಬಾಡಿಗೆ ತಲಾ ಹತ್ತು ಸಾವಿರ ರೂ. ವ್ಯಯಕ್ತಿಕವಾಗಿ ಭರಿಸುವುದಾಗಿ ಭರವಸೆ

July 2, 2026

ಮಂಗಳೂರು| ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಗುರುಪುರ ಹೊಳೆಯಲ್ಲಿ ಪತ್ತೆ…!

July 2, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಎಸ್ ವಿಪಿ ಕನ್ನಡ ಸಂಸ್ಥೆಯ ಅಧ್ಯಕ್ಷರಾಗಿ ಡಾ.ಧನಂಜಯ ಕುಂಬ್ಳೆ ನೇಮಕ

By UllalaVaniJuly 2, 20260

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ‌ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ.ಧನಂಜಯ ಕುಂಬ್ಳೆ ಅವರು ನೇಮಕಗೊಂಡಿದ್ದಾರೆ.…

ಧರಾಶಾಹಿಯಾದ ಮನೆ ಕೆರೆಬೈಲ್ ಗುಡ್ಡಕ್ಕೆ ಸಚಿವ ಯು.ಟಿ. ಖಾದರ್ ಭೇಟಿ, ಅಪಾಯದ ಹಂತದಲ್ಲಿರುವ ಹದಿನಾಲ್ಕು ಮನೆಗಳಿಗೆ ಒಂದು ತಿಂಗಳ ಬಾಡಿಗೆ ತಲಾ ಹತ್ತು ಸಾವಿರ ರೂ. ವ್ಯಯಕ್ತಿಕವಾಗಿ ಭರಿಸುವುದಾಗಿ ಭರವಸೆ

July 2, 2026

ಮಂಗಳೂರು| ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಗುರುಪುರ ಹೊಳೆಯಲ್ಲಿ ಪತ್ತೆ…!

July 2, 2026

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; ಪರಿಹಾರ ಮೊತ್ತದ ಚೆಕ್‌ ವಿತರಣೆ

July 2, 2026
1 2 3 … 1,993 Next
Automatic YouTube Gallery

ದೇರಳಕಟ್ಟೆ : ವೈದ್ಯರ ದಿನಾಚರಣೆ ಅಂಗವಾಗಿ ಮೂವರು ವೈದ್ಯರಿಗೆ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸನ್ಮಾನ

ದೇರಳಕಟ್ಟೆಯಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ;ಮೂವರು ವೈದ್ಯರಿಗೆ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸನ್ಮಾನ

ಎಲ್ಲಕ್ಕಿಂತಲೂ ರೋಗಿಯ ಜೀವವೇ ಮೊದಲ ಆದ್ಯತೆ; ವಿಶಾಲ್ ಹೆಗ್ಡೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದೇರಳಕಟ್ಟೆ : ವೈದ್ಯರ ದಿನಾಚರಣೆ ಅಂಗವಾಗಿ ಮೂವರು ವೈದ್ಯರಿಗೆ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸನ್ಮಾನ
Now Playing
ದೇರಳಕಟ್ಟೆ : ವೈದ್ಯರ ದಿನಾಚರಣೆ ಅಂಗವಾಗಿ ಮೂವರು ವೈದ್ಯರಿಗೆ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸನ್ಮಾನ
ದೇರಳಕಟ್ಟೆಯಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ;ಮೂವರು ವೈದ್ಯರಿಗೆ ನಿಟ್ಟೆ ...
ದೇರಳಕಟ್ಟೆಯಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ;ಮೂವರು ವೈದ್ಯರಿಗೆ ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸನ್ಮಾನ

ಎಲ್ಲಕ್ಕಿಂತಲೂ ರೋಗಿಯ ಜೀವವೇ ಮೊದಲ ಆದ್ಯತೆ; ವಿಶಾಲ್ ಹೆಗ್ಡೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!
Now Playing
ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version