UN NETWORKS
ಉಳ್ಳಾಲ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕುಂಠಿತಕ್ಕೆ ಕಾಂಗ್ರೆಸ್ ಸರಕಾರ ಕಾರಣವಾಗಿದ್ದು ಈ ಸರಕಾರವನ್ನು ಕಿತ್ತೊಗೆದು, ಆ ಮೂಲಕ ನವ ಕರ್ನಾಟಕ ನಿರ್ಮಾಣಕ್ಕೆ ಮುನ್ನುಡಿಯಾಗಬೇಕು ಎಂದು ಬಿ.ಜೆ.ಪಿ. ರಾಜ್ಯ ಹಿಂದುಳಿದ ವರ್ಗ ಮೋರ್ಛಾದ ಕಾರ್ಯದರ್ಶಿ, ನವಕರ್ನಾಟಕ ಪರಿವರ್ತನಾ ಯಾತ್ರೆಯ ಜಿಲ್ಲಾ ಸಂಚಾಲಕ ಸತ್ಯಜಿತ್ ಸುರತ್ಕಲ್ ತಿಳಿಸಿದರು.
ಬಿ.ಜೆ.ಪಿ. ರಾಜ್ಯಾಧ್ಯಕ್ಷ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನ.2 ರಂದು ಬೆಂಗಳೂರಿನ ನೆಲಮಂಗಲದಿಂದ ಹೊರಡಲಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಯ ಕುರಿತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಛೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು 75 ದಿನಗಳ ಕಾಲ ಸಂಚರಿಸಲಿರುವ ಈ ಯಾತ್ರೆಯು ರಾಜ್ಯದ ಅತೀ ದೊಡ್ಡ ಯಾತ್ರೆಯಾಗಲಿದೆ ಎಂದ ಅವರು ಈ ಬಗ್ಗೆ ಕ್ಷೇತ್ರ ವ್ಯಾಪ್ತಿ ಯಾತ್ರೆ ಯಶಸ್ವಿಗೊಳಿಸುವ ಬಗ್ಗೆ ಶಕ್ತಿಕೇಂದ್ರವಾರು ವಿಶೇಷ ನಡೆಸಲು ಸೂಚಿಸಿದರು.
ಕ್ಷೇತ್ರಧ್ಯಾಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಕ್ಷೇತ್ರದ197 ಬೂತ್ನಿಂದ ತಲಾ ಮೂವರಂತೆ ಸುಮಾರು 600 ಯುವ ಕಾರ್ಯಕರ್ತರು ಬೆಂಗಳೂರಿನಲ್ಲಿ ನಡೆಯುವ ಬೈಕ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರ.ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ.ಆರ್., ಮನೋಜ್ ಆಚಾರ್ಯ ಉಪಸ್ಥಿತರಿದ್ದರು. ಕ್ಷೇತ್ರ, ಜಿಲ್ಲಾ ಪಧಾದಿಕಾರಿಗಳು, ವಿವಿಧ ಮೋರ್ಚದ ಪ್ರಮುಖರು, ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.
ಮೋದಿ ಕಾರ್ಯಕ್ರಮಕ್ಕೆ 3000 ಕಾರ್ಯಕರ್ತರು : ಬೋಳಿಯಾರ್
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಆಗಮಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ 3000 ಸಾವಿರಕ್ಕೂ ಅಧಿಕ ಬಿ.ಜೆ.ಪಿ. ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಪ್ರಕಟನೆಯಲ್ಲಿ ತಿಳಿಸಿದರು.



