UN NETWORKS
ಕೋಟೆಕಾರ್: ಅ.15ರೊಳಗೆ ಮುಗಿಯಬೇಕಿತ್ತಾದರೂ ಕೆಲವೊಂದು ಕಾರಣಗಳಿಂದ ಅಸಾಧ್ಯವಾಗಿದೆ, ಅ.30ರೊಳಗೆ ಮುಗಿಸುವಂತೆ ಕೆಪಿಸಿಸಿ ಸಮಯಾವಕಾಶ ನೀಡಿದ್ದರೂ ನ.10ರೊಳಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.
ಕೋಟೆಕಾರ್ ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಿದ್ದ ಭರವಸೆಗಳು, ಈಡೇರಿಕೆ ಹಾಗೂ ಬಾಕಿಯಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ನಿರ್ದೇಶನದಂತೆ ಕಾರ್ಯಕ್ರಮ ನಡೆಯುತ್ತಿದೆ. ದ.ಕ.ಜಿಲ್ಲೆಯಲ್ಲಿ ಹಲವು ಬೂತ್‍ಗಳಲ್ಲಿ ಪೂರ್ತಿಗೊಂಡಿದ್ದು, ಉಳಿದೆಡೆ ಪ್ರಗತಿಯಲ್ಲಿದೆ. ನ.10ರೊಳಗೆ 1766 ಬೂತ್‍ಗಳಲ್ಲೂ ಪ್ರತೀ ಮನೆಗೂ ಕಾರ್ಯಕರ್ತರು ತಲುಪಿ ಮಾಹಿತಿ ಕಾರ್ಯ ಪೂರ್ತಿಗೊಳಿಸಲಿದ್ದಾರೆ ಎಂದು ಹೇಳಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ ಮಲಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಅಡ್ಕರೆ, ಕೋಟೆಕಾರ್ ಕಾಂಗ್ರೆಸ್ ಗ್ರಾಮಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮುಖಂಡರಾದ ಅಕ್ಬಾಲ್ ಸಾಮಾಣಿಗೆ, ಪಿ.ಎಂ.ಕುಂಞ, ಸಂಪತ್ ಕುಮಾರ್, ಪುನೀತ್ ಆಂಚನ್, ಲ್ಯಾನ್ಸಿ ಡಿಸೋಜ, ರಂಜಿತ್ ಶೆಟ್ಟಿ, ಸದಾಶಿವ ಉಳ್ಳಾಲ್, ಜೆಸಿಂತಾ ಡಿಸೋಜ, ಪುರುಷೋತ್ತಮ ಆಂಚನ್ ಇನ್ನಿತರರು ಉಪಸ್ಥಿತರಿದ್ದರು.



