UN NETWORKS
ತೊಕ್ಕೊಟ್ಟು : ಭಗತ್ಸಿಂಗ್ ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆದ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆಯ ಸಭಾ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಮಾತನಾಡಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ಹೊಸ ಚಿಂತನೆಗಳೊಂದಿಗೆ ಯುವ ಸಮುದಾಯವನ್ನು ಪ್ರೇರೆಪಿಸುವ ಕಾರ್ಯ ಮಾಡುತ್ತಿದ್ದು, ದೇಶದ ಉಜ್ವಲ ಭವಿಷ್ಯದ ನಿಟ್ಟಿನಲ್ಲಿ ಅವರ ಕನಸನ್ನು ಸಾಕಾರ ಮಾಡಲು ಭಗತ್ಸಿಂಗ್ನಂತಹ ಸರಕಾರೇತರ ಸಂಘ ಸಂಸ್ಥೆಗಳು ಕಟಿಬದ್ಧರಾಗಿ ಮುಂದುವರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಭಗತ್ಸಿಂಗ್ ಸೇವಾ ಪ್ರತಿಷ್ಠಾನದಲ್ಲಿ ಯುವಕರೇ ಸದಸ್ಯರಾಗಿದ್ದು ಅತ್ಯುತ್ಸಾಹದಿಂದ ಜವಾಬ್ದಾರಿ ನಿರ್ವಹಿಸುತ್ತಿರುವುದರ ಫಲವಾಗಿ ಸಂಘ ದಶಮ ಸಂಭ್ರಮ ಕಾಣುವಂತಾಗಿದೆ. ಆಂಬ್ಯುಲೆನ್ಸ್ ಮುಖಾಂತರ ಆರೋಗ್ಯ ಸೇವೆ, ಸಾಮಾಜಿಕ ಚಟುವಟಿಕೆಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಸಂಘದ ಜೊತೆ ಪ್ರತಿಯೊಬ್ಬರು ಕೈಜೋಡಿಸಿ ಇನ್ನಷ್ಟು ಬಲತುಂಬಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಉದ್ಯಮ ಕ್ಷೇತ್ರದ ಸಾಧಕ ಸತೀಶ್ ಕರ್ಕೇರ ಅವರಿಗೆ ಭಗತ್ಸಿಂಗ್ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಉಳ್ಳಾಲ್, ಬಿಜೆಪಿ ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾ ಪ್ರ.ಕಾ. ಮೊಹಮ್ಮದ್ ಅಸ್ಗರ್ ಸಾಂಬಾರ್ತೋಟ, ಉದ್ಯಮಿಗಳಾದ ಚಂದ್ರಹಾಸ ಪಂಡಿಹೌಸ್, ಪ್ರವೀಣ್ ಶೆಟ್ಟಿ, ಹರೀಶ್ ಮೂರುಕಟ್ಟೆ, ಮುದ್ದುಕೃಷ್ಣ ಸಮಿತಿ ಅಧ್ಯಕ್ಷ ಚಂದ್ರಕಾಂತ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ನಾಗಬ್ರಹ್ಮ ಸೇವಾ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ, ಲಯನ್ಸ್ ಕ್ಲಬ್ ಜಿಲ್ಲಾ ನಿರ್ದೇಶಕಿ ಸುಮತಿ ಹೆಗ್ಡೆ, ನ್ಯಾಯವಾದಿ ಶ್ರೀಧರ್ ಶೆಟ್ಟಿ ಪುಳಿಂಚ, ಬಂಟರ ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಪೆÇಲದವರ ಯಾನೆ ಗಟ್ಟಿ ಸಮಾಜದ ಅಧ್ಯಕ್ಷ ಪವಿತ್ರ ಗಟ್ಟಿ, ರಾಜ್ಯ ಸಗಟು ಮಾರಾಟಗಾರರ ಸಂಘದ ಉಪಾಧ್ಯಕ್ಷ ಮಯೂರ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಅಧ್ಯಕ್ಷ ಜೀವನ್ ತೊಕ್ಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್ ಕೊಲ್ಯ ವಂದಿಸಿದರು. ಪ್ರವೀಣ್ ಬಸ್ತಿ, ಪ್ರವೀಣ್ ಎಸ್.ಕುಂಪಲ ಹಾಗೂ ಕೃಷ್ಣ ಪೊನ್ನೆತ್ತೋಡು ಕಾರ್ಯಕ್ರಮ ನಿರೂಪಿಸಿದರು.




