UN NETWORKS
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ಬದಿ ನಿಂತು ವಾಹನ ಸವಾರ ರನ್ನು ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದ ಅಲ್ಲದೆ ಯುವಕನೋರ್ವನ ಕೊಲೆಗೆ ಯತ್ನಿಸಿದ ಐದು ಮಂದಿಯ ತಂಡವನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ದರ್ಬೆಯ ರವಿಕುಮಾರ್ ಯಾನೆ ಅಣ್ಣು (24), ಕುಂಜತ್ತೂರಿನ ನಿವಾಸಿಗಳಾದ ಖಲೀಲ್ .ಕೆ. ಯಾನೆ ಕಲ್ಲು(27), ರಾಜೇಶ್ .ಕೆ (30), ಅಜೀಮ್ ಯಾನೆ ಮಹಮ್ಮದ್ ಅಜೀಮ್ (23), ಜಾಬೀರ್ ಅಬ್ಬಾಸ್ (24) ಬಂಧಿತರು.
ಐವರ ತಂಡ ರಾ.ಹೆ.66 ರಲ್ಲಿ ರಾತ್ರಿ ಸಮಯ ನಿಂತು ಕೇರಳ ಕಡೆಯಿಂದ ಮಂಗಳೂರು ಕಡೆಗೆ ಹಾದುಹೋಗುವ ಮತ್ತು ಮಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರ ಕಾರುಗಳನ್ನು ತಡೆದು ದರೋಡೆ ನಡೆಸಲು, ಮಹಿಳೆಯರನ್ನು ನಿರ್ಜನ ಪ್ರದೇಶದಲ್ಲಿ ತಡೆದು ಚಿನ್ನಾಭರಣ ಲೂಟಿಗೈಯ್ಯುವ ಸಂಚು ರೂಪಿಸಿದ್ದರೆನ್ನಲಾಗಿದೆ.
ಬಂಧಿತರಿಂದ ತಲವಾರು, ಕಬ್ಬಿಣದ ರಾಡ್, ಮೆಣಸಿನ ಹುಡಿ, ಚೂರಿ ಹಾಗೂ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳ ಪೈಕಿ ರಾಜೇಶ್, ಜಾವಿದ್, ಖಲೀಲ್ ಎಂಬವರುಗಳು ಕುಂಜತ್ತೂರು ಸಮೀಪ ಅ.19 ರಂದು ಪ್ರಜ್ವಲ್ ಎಂಬಾತನ ಕೊಲೆಗೆ ಯತ್ನಿಸಿ ದ ಆರೋಪಿಗಳು ಆಗಿದ್ದಾರೆ.
ಆರೋಪಿ ರವಿಕುಮಾರ್ ಎಂಬಾತನ ಮೇಲೆ ಪುತ್ತೂರು, ಮಂಜೇಶ್ವರ, ಬರ್ಕೆ ಸಮೇತ ಒಟ್ಟು4 ಪ್ರಕರಗಳು ಹಾಗೂ ಜಾವೀದ್ ಮೇಲೆ 2 ಹಾಗೂ ರಾಜೇಶ್ ಎಂಬಾತನ ಮೇಲೆ 3 ಪ್ರಕರಣ ಗಳು ಇರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತಂಡ ಅಕ್ರಮ ಗಾಂಜಾ ಸಾಗಾಟ ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದು ಪೊಲೀಸ್ ಮೂಲ ತಿಳಿಸಿವೆ.







