UN NETWORKS
ಕಿನ್ಯಾ: ಕಿನ್ಯಾ ಮತ್ತು ಬೋಳಿಯಾರುಗೆ ಸರಕಾರಿ ಬಸ್ ಸಂಚಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದನ್ನು ವಿರೋಧಿಸಿ ಕಿನ್ಯಾ ಗ್ರಾಮದ ಬೆಳರಿಂಗೆ ಎಂಬಲ್ಲಿ ನಾಗರಿಕರು ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಒಂದು ತಿಂಗಳ ಹಿಂದೆ ಸರಕಾರ ಗ್ರಾಮೀಣ ಪ್ರದೇಶ ವಾದ ಕಿನ್ಯಾ ಗ್ರಾಮಕ್ಕೆ ಎರಡು ಬಸ್ ನೀಡಿದ್ದು ಸಾರ್ವಜನಿಕ ರಿಗ ಸಂಚಾರ ನಡೆಸಲು ಸುಲಭವಾಗುತ್ತಿತು. ಇಂದು ಹೈಕೋರ್ಟ್ ತಡೆಯುವ ಮೂಲಕ ಸಂಕಷ್ಟ ಉಂಟಾಗಿದೆ. ಖಾಸಗಿ ಬಸ್ ಗಳು ಬೇಕಾಬಿಟ್ಟಿ ಸಂಚಾರ ನಡೆಸುತ್ತಿದ್ದು ಸರಕಾರ ಮತ್ತೆ ಸರಕಾರಿ ಬಸ್ ನೀಡುವಂತೆ ಪ್ರತಿಭಟನೆ ಗಾರರು ಆಗ್ರಹಿಸಿದರು.
ಪ್ರತಿಭಟನೆ ಯಲ್ಲಿ ಕಿನ್ಯಾ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಸದಸ್ಯರಾದ ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಡಿವೈಎಫ್ಐ ಹಂಝ ಕಿನ್ಯಾ ಮುಂತಾದವರು ಉಪಸ್ಥಿತರಿದ್ದರು.



